ಭಾರತಕ್ಕೆ ಭರ್ಜರಿ ಜಯ .
ಭಾರತಕ್ಕೆ ಭರ್ಜರಿ ಜಯ : ಸರಣಿ 1-1 ಸಮಬಲ

ವಿಶಾಖಪಟ್ಟಣಂ: ರೋಹಿತ್ ಶರ್ಮಾ (159 ರನ್,138 ಎಸೆತಗಳು) ಹಾಗೂ ಕೆ.ಎಲ್. ರಾಹುಲ್(102 ರನ್, 104 ಎಸೆತಗಳು) ಅವರ ಭರ್ಜರಿ ಶತಕಗಳ ನೆರವಿನಿಂದ ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 107 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿದೆ. ಇಲ್ಲಿನ, ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ಗಳಿಗೆ ಐದು ವಿಕೆಟ್ ನಷ್ಟಕ್ಕೆೆ 387 ರನ್ ಕಲೆ ಹಾಕಿತ್ತು. ಬಳಿಕ, 388 ರನ್ ಗುರಿ ಹಿಂಬಾಲಿಸಿದ ವೆಸ್ಟ್ ಇಂಡೀಸ್ ತಂಡ 43.3 ಓವರ್ಗಳಿಗೆ 280 ರನ್ಗಳಿಗೆ ಸರ್ವಪತನವಾಯಿತು.
ಕಠಿಣ ಗುರಿ ಹಿಂಬಾಲಿಸಿದ ವೆಸ್ಟ್ ಇಂಡೀಸ್ ತಂಡಕ್ಕೆೆ ಎವಿನ್ ಲೆವಿಸ್ ಹಾಗೂ ಶಾಯ್ ಹೋಪ್ ಆರಂಭಿಕ ಜೋಡಿ ಮೊದಲನೇ ವಿಕೆಟ್ಗೆ 61 ರನ್ ಗಳಿಸಿ ಉತ್ತಮ ಆರಂಭ ನೀಡಿತ್ತು. ಈ ವೇಳೆ ಎವಿನ್ ಲೆವಿಸ್ ಅವರನ್ನು ಶಾರ್ದೂಲ್ ಠಾಕೂರ್ ಔಟ್ ಮಾಡುವ ಮೂಲಕ ಆರಂಭಿಕ ಜೋಡಿಗೆ ಬ್ರೇಕ್ ಹಾಕಿದರು. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಶಿಮ್ರಾನ್ ಹೆಟ್ಮೇರ್ ಅವರು ಕೇವಲ 4 ರನ್ ಗಳಿಸಿ ರನೌಟ್ ಆದರು. ಇವರ ಹಿಂದೆಯೇ ರೋಸ್ಟನ್ ಚೇಸ್ ವಿಕೆಟ್ ನೀಡಿದರು. ನಂತರ, ಮೊದಲ ಪಂದ್ಯದಂತೆ ಈ ಹಣಾಹಣಿಯಲ್ಲೂ ಶಾಯ್ ಹೋಪ್ ಅದ್ಭುತ ಬ್ಯಾಟಿಂಗ್ ಮಾಡಿದರು. 85 ಎಸೆತಗಳಲ್ಲಿ 78 ರನ್ ಗಳಿಸಿ ತಂಡಕ್ಕೆೆ ಆಸರೆಯಾಗಿದ್ದರು. ಅಲ್ಲದೇ, ನಾಲ್ಕನೇ ವಿಕೆಟ್ಗೆ ನಿಕೋಲಸ್ ಪೂರನ್ ಅವರೊಂದಿಗೆ 106 ರನ್ ಜತೆಯಾಟವಾಡಿದರು. ನಂತರ ಕುಲ್ದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ವಿಡೀಸ್ ಗೆಲುವಿಗೆ ಭರವಸೆ ಮೂಡಿಸಿದ್ದ ನಿಕೋಲಸ್ ಪೂರನ್ ಕೇವಲ 47 ಎಸೆತಗಳಲ್ಲಿ 75 ರನ್ ಸಿಡಿಸಿ ಔಟ್ ಆದರು.

ನಾಯಕ ಪೊಲಾರ್ಡ್ ಹಾಗೂ ಜೇಸನ್ ಹೋಲ್ಡರ್ ನಿರಾಸೆ ಮೂಡಿಸಿದರು. ಕೀಮೊ ಪೌಲ್ 46 ಹಾಗೂ ಖಾರಿ ಪಿಯರಿ 21 ರನ್ ಗಳಿಸಿದರೂ ವಿಂಡೀಸ್ ಇನ್ನೂ, 6.3 ಓವರ್ ಬಾಕಿ ಇರುವಾಗಲೇ ತನ್ನೆೆಲ್ಲ ವಿಕೆಟ್ಗಳನ್ನು ಕಳೆದುಕೊಂಡು ಸೋಲು ಒಪ್ಪಿಕೊಂಡಿತು. ರೋಹಿತ್-ರಾಹುಲ್ ಅದ್ಭುತ ಜತೆಯಾಟ: ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಇಂದಿನ ಪಂದ್ಯದಲ್ಲಿ ನಂಬಲಾರ್ಹ ಪ್ರದರ್ಶನ ತೋರಿದರು.
ಪಂದ್ಯದುದ್ದಕ್ಕೂ ಸಮಯೋಜಿತ ಪ್ರದರ್ಶನ ತೋರಿದ ಈ ಜೋಡಿ 37ನೇ ಓವರ್ವರೆಗೂ ಬ್ಯಾಾಟಿಂಗ್ ಮಾಡಿತು. ಇವರಿಬ್ಬರ ಬ್ಯಾಟಿಂಗ್ಗೆ ವಿಂಡೀಸ್ ಬೌಲರ್ಗಳು ತಮ್ಮ ಆತ್ಮ ವಿಶ್ವಾಸ ಕಳೆದುಕೊಂಡರು. ಈ ಜೋಡಿ ಮುರಿಯದ ಮೊದಲನೇ ವಿಕೆಟ್ಗೆ 227 ರನ್ ಗಳಿಸಿತು. ಅದ್ಭುತ ಪ್ರದರ್ಶನ ತೋರಿದ ಉಪ ನಾಯಕ ರೋಹಿತ್ ಶರ್ಮಾ 138 ಎಸೆತಗಳಲ್ಲಿ 159 ರನ್ ಗಳಿಸಿದರು.

ಇದು ಅವರ ವೃತ್ತಿ ಜೀವನದ 28ನೇ ಶತಕವಾಯಿತು. ಇವರ ಸೊಗಸಾದ ಇನಿಂಗ್ಸ್ನಲ್ಲಿ 5 ಸಿಕ್ಸರ್ ಹಾಗೂ 17 ಬೌಂಡರಿಗಳಿದ್ದವು. ಪ್ರಸಕ್ತ ಆವೃತ್ತಿಯಲ್ಲಿ ಎಲ್ಲ ಮಾದರಿಯಿಂದ 10 ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಗೌರವಕ್ಕೆೆ ಹಿಟ್ಮನ್ ಭಾಜನರಾದರು. ಮತ್ತೊಂದು ತುದಿಯಲ್ಲಿ ಇವರಿಗೆ ಹೆಗಲು ನೀಡಿದ್ದ ಕನ್ನಡಿಗ ಕ.ಎಲ್. ರಾಹುಲ್ ವೆಸ್ಟ್ ಇಂಡೀಸ್ ಬೌಲರ್ಗಳಿಗೆ ತಲೆ ನೋವು ತಂದರು.
104 ಎಸೆತಗಳಲ್ಲಿ 102 ರನ್ ಗಳಿಸಿ ವೃತ್ತಿ ಜೀವನದ ಎರಡನೇ ಶತಕ ದಾಖಲಿಸಿದರು. ಇವರ ಶತಕದಲ್ಲಿ 3 ಸಿಕ್ಸರ್ ಹಾಗೂ 8 ಬೌಂಡರಿಗಳ ಒಳಗೊಂಡಿವೆ.
ಪಂತ್-ಅಯ್ಯರ್ ಆರ್ಭಟ:

ಮಧ್ಯಮ ಕ್ರಮಾಂಕದಲ್ಲಿ ಸಿಡಿದ ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ವಿಂಡೀಸ್ ಬೌಲರ್ಗಳಿಗೆ ಬೆಂಡೆತ್ತಿದರು. ಕೇವಲ 16 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಯೊಂದಿಗೆ 39 ರನ್ ಚಿಚ್ಚಿದರು. ಮತ್ತೊಂದು ತುದಿಯಲ್ಲಿ ಆರ್ಭಟಿಸಿದ ಅಯ್ಯರ್ ಕೇವಲ 32 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಯೊಂದಿಗೆ 53 ರನ್ ಸಿಡಿಸಿದರು.
ವೆಸ್ಟ್ ಇಂಡೀಸ್ ಪರ ಶೆಲ್ಡನ್ ಕಾಟ್ರೆೆಲ್ 2 ವಿಕೆಟ್ ಪಡೆದರೆ, ಕೀಮೊ ಪೌಲ್, ಅಲ್ಜಾರಿ ಜೋಸೆಫ್ ಹಾಗೂ ಕಿರೋನ್ ಪೊಲಾರ್ಡ್ ತಲಾ ಒಂದು ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರ್ ಭಾರತ: ನಿಗದಿತ 50 ಓವರ್ಗಳಿಗೆ 387/5 (ರೋಹಿತ್ ಶರ್ಮಾ 159, ಕೆ.ಎಲ್ ರಾಹುಲ್ 102, ಶ್ರೇಯಸ್ ಅಯ್ಯರ್ 53, ರಿಷಭ್ ಪಂತ್ 39; ಶೆಲ್ಡನ್ ಕಾಟ್ರೆೆಲ್ 83ಕ್ಕೆೆ 2)
ವೆಸ್ಟ್ ಇಂಡೀಸ್: 43.3 ಓವರ್ಗಳಿಗೆ 280/10 (ಶಾಯ್ ಹೋಪ್ 78, ನಿಕೋಲಸ್ ಪೂರನ್ 75, ಕೀಮೊ ಪೌಲ್ 46; ಮೊಹಮ್ಮದ್ ಶಮಿ 39ಕ್ಕೆೆ 3, ಕುಲ್ದೀಪ್ ಯಾದವ್ 52 ಕ್ಕೆೆ 3, ರವೀಂದ್ರ ಜಡೇಜಾ 74 ಕ್ಕೆೆ 2)
Recent comments