Skip to main content
ಆಫೀಸ್ ಬಾಯ್ ಟು ಆ್ಯಂಕರ್ ಮಿಲಿಂದ್ ಗಾಂವ್ಕರ್

ಆಫೀಸ್ ಬಾಯ್ ಟು ಆ್ಯಂಕರ್ ಮಿಲಿಂದ್ ಗಾಂವ್ಕರ್ !

ಆಫೀಸ್ ಬಾಯ್ ಟು ಆ್ಯಂಕರ್ ಮಿಲಿಂದ್ ಗಾಂವ್ಕರ್ !

ಆ್ಯಂಕರ್ ಮಿಲಿಂದ್ ಗಾಂವ್ಕರ್

ಎಲ್ಲರಂತೆ ಟಿವಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಹೊಂದಿದ್ದ ಕಾರವಾರ ಮೂಲದ ಅಮದಹಳ್ಳಿಯ ಮಿಲಿಂದ್ ಗಾಂವ್ಕರ್ ಇದೀಗ ಎಲ್ಲರ ನೆಚ್ಚಿನ ನಿರೂಪಕರಾಗಿದ್ದಾರೆ. ಬಾಲ್ಯದಲ್ಲಿ ಸಹಜವಾಗಿ ಪ್ರತಿಯೊಬ್ಬರಿಗು ಟಿವಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಸಹಜವೇ ಸರಿ ಈ ಹಾದಿಯಲ್ಲಿ ಮಿಲಿಂದ್ ಕೂಡ ಹೊರತಾಗಿಲ್ಲ.

ನೆಚ್ಚಿನ ನಿರೂಪಕ

ತಂದೆಯವರ ದೈನಂದಿನ ವೃತ್ತಿ ಬದುಕಿನಾಸರೆಗೆ ಅವರು ಕಾರವಾರ, ಮೈಸೂರು,ಮತ್ತು ಬೆಂಗಳೂರು ಈ ಭಾಗಗಳಲ್ಲಿ ತಮ್ಮ ಜೀವನ ನಿರ್ವಹಣೆ ಸಾಗಿತ್ತು ಜೊತೆಯಲ್ಲಿ ಇವರ ವಿಧ್ಯಾಭ್ಯಾಸವು ಸಹ ಬಹುತೇಕ ಮೂರ್ನಾಲ್ಕು ಜಿಲ್ಲೆಗಳಲ್ಲಿ ಆದದ್ದರಿಂದ ತಮಗೆ ಭಾಷೆಯ ಮೇಲೆ ಹಿಡಿತ ಸಾಧ್ಯವಾಯಿತು ಎನ್ನುವ ಮಿಲಿಂದ್.

ತಮ್ಮ ವಿದ್ಯಾಭ್ಯಾಸ ಮುಗಿಸಿದ ನಂತರ ಇವರ ಕನಸಿನ ವೃತ್ತಿಯಾದ ನಿರೂಪಕ ವೃತ್ತಿಗೆ 2008 ರಲ್ಲಿ ಪ್ರಯತ್ನಿಸಿದರಾದರು. ಆಗ ವಿಫಲರಾದ ನಂತರ ಖಾಸಗಿ ಕಂಪನಿಯಲ್ಲಿ ತಮ್ಮ ವೃತ್ತಿ ಬದುಕು ಪ್ರಾರಂಭಿಸಿದ ಇವರು ಸುಮಾರು 5 ರಿಂದ 6 ವರ್ಷಗಳ ಕಾಲ ಯಥಾಪ್ರಕಾರ ಜೀವನ ನಡೆಸುತ್ತಿದ್ದರು. ನಂತರ 2014 ರಲ್ಲಿ ನಿರೂಪಕರು ಬೇಕಾಗಿದ್ದಾರೆ ಎಂಬ ಜಾಹಿರಾತು ಕಂಡ ಇವರು ಮತ್ತೊಮ್ಮೆ ಪ್ರಯತ್ನಿಸಿ ಯಶ್ವಸಿಯಾದರು

ಮಿಲಿಂದ್.

ನಿರೂಪಕರಾಗಬೇಕೆಂಬ ಕನಸ್ಸಿನ ಒಂದು ಹಂತದ ಯಶ್ಸಸನ್ನು ಪಡೆದರಾದರು ಮುಂದೆ ಎಲ್ಲರಿಗಿಂತ ವಿಭಿನ್ನ ನಿರೂಪಣ ಶೈಲಿ ತಮ್ಮದಾಗಬೇಕು. ವೀಕ್ಷಕರು ತಮ್ಮ ಕಾರ್ಯಕ್ರಮದತ್ತ ತಿರುಗಿ ನೋಡುವಂತೆ ಮಾಡಬೇಕಿರುವುದಲ್ಲದೆ, ತಮ್ಮ ವಿಭಿನ್ನ ನಿರೂಪಣೆಗೆ ಪ್ರಶಂಸಿತರಾಗುವಂತೆ ಮಾಡುವ ಆಧ್ಯ ಗುರಿಯೊಂದಿಗೆ 2014 ರ ಜೂನ್ 3 ರಂದು ಉದಯ ಮ್ಯೂಸಿಕ್ ನಲ್ಲಿ “ಲೈವ್ ರಿಕ್ವೆಸ್ಟ್” ಕಾರ್ಯಕ್ರಮ “ನಾನು ನಿಮ್ಮ ಫ್ಯಾನ್” ಎಂಬ ಟ್ಯಾಗ್ ಲೈನ್ ನೊಂದಿಗೆ ಷೋ ಪ್ರಾರಂಭಿಸಿದ ಮಿಲಿಂದ್ ಸತತ 4 ವರ್ಷಗಳ ಯಶಸ್ವಿ ಹಾದಿಗೆ ದಾಪುಗಾಲಿಟ್ಟಿದ್ದಾರೆ.

ಉದಯ ಮ್ಯೂಸಿಕ್ ತಂಡಕ್ಕೆ ಕೃತಜ್ಞತೆರೆಂಬ ಮಿಲಿಂದ್ :

ಮಿಲಿಂದ್.

ಪ್ರಾರಂಭದಲ್ಲೆ ಒಂದಷ್ಟು ವಿಭಿನ್ನತೆಯನ್ನು ನೀಡಬೇಕೆಂಬ ಗುರಿ ಹೊಂದಿದ್ದ ಇವರು ತಮ್ಮ ನಿರೂಪಣ ಶೈಲಿಯಲ್ಲಷ್ಟೆ ಅಲ್ಲದೆ ಕಾರ್ಯಕ್ರಮದಲ್ಲಿ ಸಹಜವಾಗಿ ಎಲ್ಲರಂತೆ ಮಾತನಾಡುತ್ತ ತಮ್ಮ ಕಾರ್ಯಕ್ರಮಕ್ಕೆ ಕರೆ ಮಾಡುವವರೊಂದಿಗೆ ಹಾಸ್ಯಸ್ಪದವಾಗಿ ಅವರ ಕಾಲೆಳೆಯುವುದರೂಂದಿಗೆ,ವೀಕ್ಷಕರಿಗೆ ಉಪಯುಕ್ತವಾಗುವಂತಹ ವಿಚಾರಗಳು, ಕೆಲ ಸಣ್ಣ ಪುಟ್ಟ ಗಮನಾರ್ಹ ಸುದ್ದಿ, ವಿಧ್ಯಾರ್ಥಿಗಳಿಗೆ ಕೊಂಚ ಶೈಕ್ಷಣಿಕ ವಿಷಯ, ನಗರದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿಸುವುದು, ಸರ್ಕಾರಿ ಕೆಲಸ ಕಾರ್ಯಗಳ ಬಗೆಗಿನ ಸಾರ್ವಜನಿಕ ಮಾಹಿತಿ ಇತ್ಯಾದಿ, ವಿಷಯಗಳನ್ನೊಳಗೊಂಡಂತೆ ಸಾಂರ್ಧಭಿಕವಾಗಿ ತಮಗೆ ಹೊಳೆಯುವಂತಹ ವಿಚಾರಗಳನ್ನು ವೀಕ್ಷಕರಿಗೆ ನೀಡುತ್ತಿರುವ, ಇವರ ಈ ಯಶಸ್ಸಿನ ಕಾರ್ಯಕ್ರಮದ ಮಾರ್ಗದರ್ಶಕರಾಗಿ ತನ್ನಲ್ಲಿನ ಅನೇಕ ತಪ್ಪುಗಳನ್ನು ತಿದ್ದಿ ಅಗತ್ಯವಿದ್ದಾಗ ಸೂಕ್ತ ಸಲಹೆಯನ್ನು ನೀಡುವುದಷ್ಟೆ ಅಲ್ಲದೆ ತನಗೆ ಮಾರ್ಗದರ್ಶಕರಾಗಿರುವ ಉದಯ ಮ್ಯೂಸಿಕ್ ನ ಮುಖ್ಯಸ್ಥರಾದ ಅವಿನಾಶ್ ಭಾರಧ್ವಜ್ ಹಾಗೂ ಕಾರ್ಯಕ್ರಮದ ನಿರ್ಮಾಪಕರು ಇಮ್ರಾನ್ ವರಿಗೆ ಕೃತಘ್ನರೆಂದರು. ತನ್ನ ಕಾರ್ಯಕ್ರಮದಲ್ಲಿ ನೀಡುವಂತಹ ಸುದ್ದಿಗಳು, ಸ್ವಾರಸ್ಯಕರ ಸಂಗತಿಗಳು,ವೀಕ್ಷಕರನ್ನು ಮುಟ್ಟುವಂತಹ ವಿಚಾರಗಳನ್ನು ಸಂಗ್ರಹಿಸುವಲ್ಲಿ ಉದಯ ಮ್ಯೂಸಿಕ್ ನ ಎಲ್ಲ ಸದಸ್ಯರುಗಳು ಹಾಗೂ ತಾಂತ್ರಿಕ ತಂಡದವರ ಶ್ರಮದಾಯಕ ನಿರ್ವಹಣೆಗೆ ತಾನು ಆಬಾರಿಯಾಗಿದ್ದೇನೆ ಎಂದ ಮಿಲಿಂದ್.

ಮಿಲಿಂದ್.

ಇವರ ನೈಜ ನಿರೂಪಣೆ ಎಷ್ಟರ ಮಟ್ಟಿಗೆ ಇದೆ ಎಂದರೆ ತಾವು ಬಳಸುವಂತಹ “ಗುಡ್ಡದ ಬಾಬ” ಎಂಬ ಸಂಭಾಷಣೆ ನೋಡುಗರಿಗೆ ಯಾರೀ “ಗುಡ್ಡದ ಬಾಬ” ಎಂಬ ಕುತೂಹಲ ಮೂಡಿಸುವುದು ಸಹಜವೇ ಸರಿ. ಇವರ ಈ ವಿಭಿನ್ನತೆಯಿಂದಲೇ ತಮಗೆ ದೊರೆತ ಉದಯ ಟಿವಿಯ ರಿಯಾಲಿಟಿ ಷೋ “ಕಿಲಾಡಿ ಕಿಡ್ಸ್” ಕಾರ್ಯಕ್ರಮದ ಯಶಸ್ವಿನಿರ್ವಹಣೆಯ ಪ್ರಶಂಸೆ ಇವರದು.

ಡಾ|| ರಾಜ್ ಕುಮಾರ್ ಸ್ಪರ್ಶ ಭಾಗ್ಯ ಪಡೆದ ನಾನು ಧನ್ಯ:

ಕನ್ನಡದ ಮೇರುನಟರಾದ ಡಾ. ರಾಜ್ ಕುಮಾರ್ ರವರು “ನಮ್ಮ ಬಸವ” ಚಿತ್ರದ ಚಿತ್ರೀಕರಣ ಸ್ಥಳಕ್ಕೆ ಆಗಮಿಸಿದ್ದ ವೇಳೆ ನನ್ನ ಪುಣ್ಯ ಅಪ್ಪಾಜಿಯವರ ಸ್ಪರ್ಶ ಸುಖವನ್ನು ಪಡೆದದ್ದು ನನಗೆ ಕಲಾದೇವರೆ ಆಶೀರ್ವಾದಮಾಡಿದಂತಹ ತೃಪ್ತಿಯಿದ್ದು, ಇದು ನನ್ನ ಜೀವನದಲ್ಲಿ ಅವಿಸ್ಮರಣೀಯ ಎಂದರು. ಅವರ ಪ್ರತಿಯೊಂದು ಪಾತ್ರಭಿನಯವು ಸಹ ಮನಮುಟ್ಟುವಂತಹದ್ದಾಗಿದ್ದವು.ಕನ್ನಡದ ಬಹುತೇಕ ಎಲ್ಲಾ ನಾಯಕನಟರು ಸಹ ನನಗೆ ಅಚ್ಚುಮೆಚ್ಚು ಎಂದರಲ್ಲದೆ “ಶಿವಣ್ಣ ಹಾಗೂ ಯಶ್” ರವರೊಂದಿಗೆ ನಡೆಸಿದ ಸಂದರ್ಶನ ನನಗೆ ತುಂಬಾ ಖುಷಿನೀಡಿದೆ, ಇಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಅವಕಾಶ ಸಿಕ್ಕರೆ ಕನ್ನಡದ ಎಲ್ಲ ನಾಯಕ ನಟರು ಹಾಗು ನಟಿಯರ ಸಂದರ್ಶನ ನಡೆಸಬೇಕೆಂಬ ಆಸೆ ಹೊಂದಿದ್ದು, ತಮ್ಮ ನೆಚ್ಚಿನ ನಟರ ಚಿತ್ರಗಳಲ್ಲಿ ಅಭಿನಯಿಸುವ ಮಹದಾಸೆ ಇವರದ್ದು.ಸತತ ನಾಲ್ಕು ವರ್ಷಗಳತ್ತ ದಾಪುಗಾಲಿಟ್ಟಿರುವ ಮಿಲಿಂದ್ ರವರು ತಮ್ಮದೆ ಆದಂತಹ ವೀಕ್ಷಕ ಅಭಿಮಾನಿ ಗೆಳೆತನವನ್ನು ಹೊಂದಿದ್ದು ತಾವು ಮಾಡುವಂತಹ ಕಾರ್ಯಕ್ರಮದ ಸರಿ ತಪ್ಪುಗಳನ್ನು ಅರಿಯಲು ಹಾಗೂ ಪ್ರೇಕ್ಷಕರ ಅಭಿಪ್ರಾಯಗಳನ್ನು ತಿಳಿಯುವಲ್ಲಿ ಸಮಾಜಿಕ ಜಾಲತಾಣಗಳಲ್ಲಿ ಸರಿ ಸುಮಾರು 20 ಸಾವಿರ ಅಭಿಮಾನಿ ಬಳಗವನ್ನು ಹೊಂದಿರುವ ಇವರು ತಮಗೆ ಬರುವಂತಹ ಬಹುತೇಕ ಎಲ್ಲ ಸಂದೇಶಗಳಿಗೆ ಪ್ರತಿಕ್ರಿಯೆ ನೀಡುವಂತಹ ಅಭ್ಯಾಸವನ್ನು ಹೊಂದಿದ್ದಾರೆ.

ಸ್ನೇಹಿತರು ಹಾಗೂ ಕುಟುಂಬದವರ ಮೆಚ್ಚುಗೆಗೆ ಸಂತಸ ;

ಮಿಲಿಂದ್.

ಮಾಧ್ಯಮ ಕ್ಷೇತ್ರದಲ್ಲಿ ಯಾವುದೇ ರೀತಿಯಾದ ಅರಿವೇ ಇಲ್ಲದಂತಹ ಸಾಮಾನ್ಯ ಹುಡುಗ ಯಾವುದೋ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿಕೊಂಡು ಸಾಧಾರಣ ಜೀವನವನ್ನು ನಡೆಸುತ್ತಿದ್ದ ಮಿಲಿಂದ್ ರವರು ತಾನು ಕಂಡ ಕನಸ್ಸನ್ನು ಪೂರೈಸಲು ಅದೆಷ್ಟೆ ಕಾಲಾವಕಾಶವಾದರು ತನ್ನ ಛಲ ಬಿಡದೇ ನಿರೂಪಕರಾಗಿಯೇ ಬಿಟ್ಟರು, ಪ್ರಾರಂಭದ ದಿನಗಳಲ್ಲಿ ಕಷ್ಟವಾದರು ತಾನು ಇಷ್ಟ ಪಟ್ಟು ಮಾಡುವಂತಹ ಕೆಲಸಕ್ಕೆ ಜೀವ ತುಂಬುವುದು ನನ್ನ ಆಧ್ಯ ಕರ್ತವ್ಯ ಎಂಬ ದಿಟ್ಟ ನಿಲುವಿನಿಂದ ಮುನ್ನುಗ್ಗಿದರು ಆದರೆ ಇಂದು ತಮ್ಮ ಸ್ನೇಹಿತರು ಹಾಗು ತಮ್ಮ ತಂದೆ ”ದತ್ತಾನಂದ”, ತಾಯಿ ”ಮಂಗಳ” ರವರು ನನ್ನ ಹೆಸರನ್ನು ಹೇಳುವಾಗ ಅವರಲ್ಲಿ ಮೂಡುವಂತಹ ಮಂದಹಾಸವೇ ನನ್ನೆಲ್ಲ ಶ್ರಮಕ್ಕೆ ಸಿಕ್ಕ ಪ್ರತಿಫಲ ಎನ್ನುತ್ತಾರೆ.ನಿರೂಪಕರಾಗಿರುವ ಮಿಲಿಂದ್ ಮಾಧ್ಯಮ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂಬ ದಿಸೆಯಲ್ಲಿ ಅದಕ್ಕೆ ಅನುಗುಣವಾದಂತಹ ಸೂಕ್ತ ಕೆಲಸಗಳನ್ನು ಕಲಿಯುವಂತಹ ಹಂಬಲ ಹೊಂದಿದ್ದಾರೆ, ಅಲ್ಲದೆ ತನ್ನ ಜೀವನವನ್ನು ಬದಲಾಯಿಸಿದ ನೆನಪಿಗೆ “ಟಿವಿಯ ಟ್ಯಾಟು” ಹಾಕಿಸಿಕೊಳ್ಳುವಂತಹ ಆಸೆ ಅವರದ್ದಾಗಿದ್ದು. ಅವರಮುಂದಿನ ಎಲ್ಲ ಕನಸ್ಸುಗಳು ಈಡೇರಲಿ ಎಂಬುದು ನಮ್ಮೆಲ್ಲರ ಹಾರೈಕೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.