Skip to main content
ಕಾಶ್ಮೀರದಲ್ಲಿ "ನಿನದೇ ನೆನಪು".

ಕಾಶ್ಮೀರದಲ್ಲಿ "ನಿನದೇ ನೆನಪು".

ಕಾಶ್ಮೀರದಲ್ಲಿ "ನಿನದೇ ನೆನಪು".

Kannada new film

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ ವಾಸುಕಿ ವೈಭವ್ ಹಾಡಿರುವ ಈ ಆಲ್ಬಂ ಸಾಂಗ್. ಜನಪ್ರಿಯ ಗೀತರಚನೆಕಾರ ಗೌಸ್ ಫಿರ್ ಬರೆದಿರುವ " ಹೃದಯಕ್ಕೆ ಹೃದಯವೇ ಕಡು ವೈರಿ" ಎಂದು ಆರಂಭವಾಗುವ "ನಿನದೇ ನೆನಪು"ಎಂಬ ಶೀರ್ಷಿಕೆ ಯುಳ್ಳ ಈ ಆಲ್ಬಂ ಸಾಂಗ್ ಸ್ವತಂತ್ರ ದಿನಾಚರಣೆಯ ದಿನ ಬಿಡುಗಡೆಯಾಗಿದೆ. ಈ ಆಲ್ಬಂ ಕನ್ನಡದ ಬಹು ಅದ್ದೂರಿ ನಿರ್ಮಾಣ ಎಂದೇ ಹೇಳಬಹುದು, ಯಾಕೆಂದರೆ ಇದರ ಚಿತ್ರೀಕರಣ ಕಾಶ್ಮೀರ ಮತ್ತು ಲೇಹ್‌ ನಲ್ಲಿ ನಡೆದಿದೆ ಎಂದರೆ ಈ ಆಲ್ಬಂ ಹಾಡಿನ ನಿರ್ಮಾಣದ ವೈಭವವನ್ನು ಹೇಳಬಹುದು.

Kannada new film

ಸರವಣ್ ಮತ್ತು ಪ್ರತಿಮಾ ಈ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಿದ್ದಾರೆ. *ಸರವಣ್* ಈಗಾಗಲೇ ಸಬ್ ವೇ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರ ಬಿಡುಗಡೆ ಹಂತದಲ್ಲಿದೆ. ಟಿಕ್ ಟಾಕ್ ಮೂಲಕ ಮನೆಮಾತಾಗಿರುವ ಪ್ರತಿಮ ಈಗಾಗಲೇ ಕೆಲವು ಆಲ್ಬಂ ಗಳಲ್ಲಿ ನಟಿಸಿದ್ದಾರೆ. ಈ ಆಲ್ಬಂ ನಿರ್ಮಾಣ ಮಾಡಿದವರು *ಆಂಜಿ ಬಾಬು* ಎಂಬುವವರು, ಅವರಿಗೆ ಬೆಂಬಲವಾಗಿ ನಿಂತವರು *ಫೈಯಿಂಗ್ ಕಿಂಗ್ ಮಂಜು* ಎಂಬುವವರು. ಈ ಮೊದಲು *ಮಯೂರ್ ಪಟೇಲ್* ಅಭಿನಯದ *ರಾಜೀವ* ಚಿತ್ರವನ್ನೂ *ಮಂಜು* ನಿರ್ದೇಶಿಸಿದ್ದಾರೆ.

ಈ ಹಾಡನ್ನು ನಿರ್ದೇಶಿಸಿರುವವರು *ಎಂ. ವೈ. ಕೃಷ್ಣ,* ಇವರಿಗೆ ನಿರ್ದೇಶನದ ಅನುಭವವೂ ಇದೆ, ಅವರು ಮುಂದಿನ ದಿನಗಳಲ್ಲಿ ಸ್ವತಂತ್ರ ನಿರ್ದೇಶಕನಾಗುವ ಕನಸೂ ಇದೆ, ಅದರ ಮೊದಲ ಹೆಜ್ಜೆಯಾಗಿ ಈ ಆಲ್ಬಂ ಹಾಡನ್ನು ನಿರ್ದೇಶಿಸಿದ್ದಾರೆ. ತುಂಬಾ ಸುಂದರವಾಗಿ ಚಿತ್ರೀಕರಿಸಿದ್ದಾರೆ, ಹಾಡಿನಲ್ಲಿ ಕಾಶ್ಮೀರದ ಮನಮೋಹಕ ಸನ್ನಿವೇಶಗಳು ಕಣ್ಣಿಗೆ ಮುದ ನೀಡುತ್ತಲೇ ಸಾಗುತ್ತದೆ. ಈ ಹಾಡಿನ ಮತ್ತೊಂದು ಹೆಚ್ಚುಗಾರಿಕೆ ಎಂದರೆ *ವಾಸುಕಿ ವೈಭವ್* ಅವರ ಸುಮಧುರ ಗಾಯನ ಹಾಗೂ *ರೋಹಿತ್ ಸೊವಾರ್* ಅವರ ಸಂಗೀತ ನಿರ್ದೇಶನ.

Kannada new film

ಹಾಡಿನ ಛಾಯಾಗ್ರಹಣ ಮಾಡಿದವರು *ಕಾರ್ತಿಕ್* . ಈ ಹಾಡನ್ನು ನಿರ್ಮಾಣ ಮಾಡಿದ್ದು *ಚಾಣಕ್ಯ* ಪಿಲಂಸ್. ಆಲ್ಬಂ ಬಿಡುಗಡೆಗೆ ರಾಜಕಾರಣಿ *ನರೇಂದ್ರ ಬಾಬು* , ನಿರ್ಮಾಪಕ *ಸಯ್ಯದ್ ಸಲಾಂ* , *ರಮೇಶ್* ಆಗಮಿಸಿದ್ದರು. ಈ ಹಾಡಿನ ಸಾಹಿತ್ಯ, ಚಿತ್ರೀಕರಣವಾದ ಶೈಲಿ, ಅದಕ್ಕೆ ಆಯ್ಕೆ ಮಾಡಿಕೊಂಡ ಸುಂದರ ಸ್ಥಳಗಳು, ಖರ್ಚು ಮಾಡಿರುವ ರೀತಿ ನೋಡಿದರೆ *ನಿನದೇ ನೆನೆಪು* ಆಲ್ಬಂ ಸಾಂಗ್ ಕನ್ನಡದಲ್ಲಿ ನಂ. ಒನ್ ಸ್ಥಾನದಲ್ಲಿ ನಿಲ್ಲಬಹುದು, ಅಷ್ಟು ಸುಂದರ ಮತ್ತು ಮಧುರವಾಗಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.