Skip to main content
ವಿರಾಟ್ ಕೊಹ್ಲಿ ನಂಬರ್ 1.

2019 ರಲ್ಲಿಯೂ ವಿರಾಟ್ ಕೊಹ್ಲಿ ಯೇ ವಿಶ್ವ ಕ್ರಿಕೆಟ್ಗೆ ಕಿಂಗ್ .

2019ರಲ್ಲಿಯೂ ವಿರಾಟ್ ಕೊಹ್ಲಿಯೇ ವಿಶ್ವ ಕ್ರಿಕೆಟ್‌ಗೆ ಕಿಂಗ್

ವಿರಾಟ್ ಕೊಹ್ಲಿ

ನವದೆಹಲಿ,: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಒಂದು ದಶಕ ಸವೆಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್‌ , ಏಕದಿನ ಹಾಗೂ ಟಿ-20 ಕ್ರಿಕೆಟ್‌ನಲ್ಲಿ ಹಲವು ದಾಖಲೆ ಮಾಡಿದ್ದಾರೆ. ವಿಶೇಷವಾಗಿ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 242 ಪಂದ್ಯಗಳಿಂದ 59.8 ಸರಾಸರಿಯಲ್ಲಿ 11,609 ರನ್ ಗಳಿಸಿದ್ದಾಾರೆ. ಇದರಲಲಿ 55 ಅರ್ಧಶತಕ ಹಾಗೂ 43 ಶತಕಗಳ ಒಳಗೊಂಡಿವೆ. 2019ರ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇದ್ದಾರೆ.

ವೆಸ್ಟ್‌ ಇಂಡೀಸ್ ವಿರುದ್ಧ ಭಾನುವಾರ ಮುಕ್ತಾಯವಾದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇವರಿಬ್ಬರೂ ಅತ್ಯುತ್ತಮ ಪ್ರದರ್ಶನ ತೋರಿದ್ದರು. 2019ರ ವರ್ಷದಲ್ಲಿ ವಿರಾಟ್ ಕೊಹ್ಲಿ ಟೆಸ್ಟ್‌, ಏಕದಿನ ಹಾಗೂ ಟಿ-20 ಮೂರು ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲನೇ ಬ್ಯಾಟ್ಸ್‌‌ಮನ್ ಆಗಿದ್ದಾರೆ. 2016 ರಿಂದ ಸತತವಾಗಿ ನಾಲ್ಕು ವರ್ಷಗಳಿಂದ ವಿರಾಟ್ ಕೊಹ್ಲಿ ಎಲ್ಲಾಾ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸುತ್ತಲೇ ಬಂದಿದ್ದಾರೆ. 2016ರಲ್ಲಿ 2,595 ರನ್, 2017 ಮತ್ತು 18ರಲ್ಲಿ ಕ್ರಮವಾಗಿ 2,818 ಮತ್ತು 2,735 ರನ್ ದಾಖಲಸಿದ್ದಾರೆ.

ಪ್ರಸ್ತುತ ವರ್ಷದಲ್ಲಿ 2,443 ರನ್ ಗಳಿಸಿದ್ದಾರೆ. ಆ ಮೂಲಕ ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಕಟಕ್ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಅವರು ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಇದ್ದರು. ಆದರೆ, ವಿರಾಟ್, ಕಳೆದ ಪಂದ್ಯದಲ್ಲಿ 85 ರನ್ ಗಳಿಸಿದ್ದರು. ಈ ಹಿನ್ನೆೆಲೆಯಲ್ಲಿ ಕೊಹ್ಲಿ 9ರನ್ ಮುನ್ನಡೆಯೊಂದಿಗೆ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ರೋಹಿತ್ ಶರ್ಮಾ (2442 ರನ್) ಎರಡನೇ ಸ್ಥಾನದಲ್ಲಿದ್ದಾರೆ.

ಪಾಕಿಸ್ತಾನದ ಬಾಬರ್ ಅಜಮ್ ಅವರು 36 ಪಂದ್ಯಗಳಿಂದ 2,082 ರನ್‌ಗಳೊಂದಿಗೆ ಮೂರನೇ ಸ್ಥಾಾನದಲ್ಲಿದ್ದಾರೆ. ನ್ಯೂಜಿಲೆಂಡ್ ತಂಡದ ಹಿರಿಯ ಆಟಗಾರ ರಾಸ್ ಟೇಲರ್ (1820 ರನ್) ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಂಗ್ಲೆೆಂಡ್‌ನ ಜೋ ರೂಟ್ (1790) ಐದನೇ ಸ್ಥಾನದಲ್ಲಿದ್ದಾರೆ

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.