Skip to main content
ಸೇಲ್ಸ್ ಮ್ಯಾನ್ ಆಗಿದ್ದ ಕುರಿಬಾಂಡ್ ಯಾರ್ ಗೊತ್ತ. ?

ಸೇಲ್ಸ್ ಮ್ಯಾನ್ ಆಗಿದ್ದ ಕುರಿಬಾಂಡ್ ಯಾರ್ ಗೊತ್ತ. ?

ಸೇಲ್ಸ್ ಮ್ಯಾನ್ ಆಗಿದ್ದ ಕುರಿಬಾಂಡ್ ಯಾರ್ ಗೊತ್ತ. ?

ಕಲೆ ಎಂಬುದು ನಮ್ಮಲ್ಲಿದ್ದರೆ ಸಾಕು ಒಂದಲ್ಲ ಒಂದು ದಿನ ಪ್ರತಿಭೆಗೆ ತಕ್ಕ ಪ್ರಶಂಸೆ ನಮಗೆ ಒಲೆಯುತ್ತದೆ ಎಂದು ತಮ್ಮ ಮನದಳಾದ ಮಾತು ಪ್ರಾರಂಭಿಸಿದ ಕುರಿಬಾಂಡ್ ಖ್ಯಾತಿಯ ಸುನೀಲ್. ಹುಬ್ಬಳ್ಳಿ ಮೂಲದ ಒಂದು ಸಣ್ಣ ಹಳ್ಳಿಯಿಂದ ಕೆಲಸ ಹರಿಸಿ ಬೆಂಗಳೂರಿಗೆ ಬಂದ ಇವರು, ತಾನು ನಟನಾಗಬೇಕೆಂಬ ಆಸೆ ಇದ್ದರು ಜೀವನ ನಿರ್ವಹಣೆಗೆ ತಮಗೆ ಸಿಕ್ಕ ಕೆಲಸವನ್ನು ಶ್ರದ್ದೆಯಿಂದ ಮಾಡಲಾರಂಭಿಸಿದರು,ಅವರ ಶ್ರಮವೇ ಇಂದಿನ ಯಶಸ್ಸಿಗೆ ಕಾರಣ. ಬೆಂಗಳೊರಿನ ಚಿಕ್ಕಪೇಟೆಯ ಬಟ್ಟೆ ಅಂಗಡಿಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಪ್ರಾರಂಭಿಸಿದ ಇವರು ಪ್ರತಿಷ್ಟಿತ ವ್ಯಾಪರ ಮಳಿಗೆಗಳಾದ ,ಅಲಂಕಾರ್ ಪ್ಲಾಜ,ನ್ಯಾಷನಲ್ ಮಾರ್ಕೆಟ್ (ಹಾಂಕಾಂಗ್ ಬಜಾರ್),ಒನ್ಲಿ ವಿಮಲ್ ಕ್ಲಾತ್ ಷೊರೋಂ,ಸೇರಿದಂತೆ ವಿವಿಧಡೆ ಹನ್ನೊಂದು ವರ್ಷಗಳ ಕಾಲ ಕೆಲಸ ಮಾಡಿದ್ದರು.

ಕುರಿಬಾಂಡ್ ಖ್ಯಾತಿಯ ಸುನೀಲ್.
ಕುರಿಬಾಂಡ್ ಖ್ಯಾತಿಯ ಸುನೀಲ್.

 

ರಾಜೇಂದ್ರ ಸಿಂಗ್ ಬಾಬು ನನ್ನ ಗುರುಗಳು:

ಯಥಾಪ್ರಕಾರ ಕೆಲಸ ನಿರ್ವಹಿಸುತ್ತಿದ್ದ ಇವರು ಒಮ್ಮೆ ಪ್ರತಿಕೆಗಳಲ್ಲಿ ಅಭಿನಯಕ್ಕೆ ಕಲಾವಿದರು ಬೇಕಾಗಿದ್ದಾರೆ, ಎಂಬ ಜಾಹಿರಾತು ನೋಡಿ ಅವಕಾಶಕ್ಕಾಗಿ ಪ್ರಯತ್ನಿಸಿದರಾದರು ಅದರೇ ಅದರಲ್ಲಿ ಅವಕಾಶ ಸಿಗದೇ ವಾಪಸಾಗಿದ್ದರು, ಇದಾದ ನಂತರ 2002ರಲ್ಲಿ ಗಾಂಧಿಭವನದಲ್ಲಿ ಹಿರಿಯ ನಿರ್ದೆಶಕ ರಾಜೇಂದ್ರ ಸಿಂಗ್ ಬಾಬು ತಮ್ಮ ಲವ್ ಚಿತ್ರಕ್ಕೆ ಕಲಾವಿದರ ಆಯ್ಕೆಗಾಗಿ ನೆಡೆಸುತ್ತಿದ್ದ ಆಡಿಷನಲ್ಲಿ ಬಾಗವಹಿಸಿದ್ದ ಸುನಿಲ್ ಸುಮಾರು 1500 ಹೆಚ್ಚು ಮಂದಿ ಬಾಗವಹಿಸಿದ್ದ ಆಡಿಷನ್ ನಲ್ಲಿ ತಮ್ಮಲ್ಲಿದ್ದ ಕಲಾವಿದನನ್ನು ಗುರಿತಿಸಿ ಇವರಿಗೆ ಅವಕಾಶ ನೀಡಿದ ಕೊ ಡೆರೆಕ್ಟರ್ “ಮಂಜು” ರವರು ಸಹ ನನ್ನ ಗುರುಗಳೆಂದರು. ಸುನಿಲ್ ರವರು ಇದೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದಾದ ನಂತರ ಕೊ ಡೆರೆಕ್ಟರ್ “ಮಂಜು” ರವರ  ಮತ್ತೊಂದು ಚಿತ್ರ “ಗೀಯ ಗೀಯ” ಚಿತ್ರದಲ್ಲಿಯು ಹಾಸ್ಯಕಲಾವಿದರಾಗಿ ಅಬಿನಯಿಸಿದ್ದಾರೆ...

ಕುರಿಬಾಂಡ್ ಖ್ಯಾತಿಯ ಸುನೀಲ್.
ಕುರಿಬಾಂಡ್ ಖ್ಯಾತಿಯ ಸುನೀಲ್.

 

. ಚಿತ್ರರಂಗಕ್ಕೆ ಪ್ರವೇಶಿಸಿದ ಸುನಿಲ್ ರವರಿಗೆ ಅಷ್ಟು ಯಶಸ್ಸು ಸಿಗಲಿಲ್ಲವಾದರು,ನಂತರ 2003ರಲ್ಲಿ ಸುಧಾಕರ್ ಭಂಡಾರಿ ಯವರ ನೇತ್ರತ್ವದಲ್ಲಿ ಉದಯ ಟಿವಿಯಲ್ಲಿ ಪ್ರಾರಂಭವಾದ “ಕುರಿಗಳು ಸಾರ್ ಕುರಿಗಳು” ಹಾಸ್ಯ ಕಾರ್ಯಕ್ರಮದಲ್ಲಿ ವಿವಿಧ ಪಾತ್ರಗಳಲ್ಲಿ ಜನರನ್ನು ಕುರಿ ಮಾಡುವಲ್ಲಿ. ಸೈ ಏನಿಸಿಕೊಂಡ ಸುನಿಲ್ ರವರು ಸುಮಾರು 10 ವರ್ಷಗಳಕಾಲ ಸುರ್ದಿಘ ಪಯಣದಲ್ಲಿ ಕುರಿಬಾಂಡ್ ಸುನಿಲ್ ಎಂದೇ ಪ್ರಖ್ಯಾತಿಯಾದರು.

ಅಜಯ್ ಚಿತ್ರದ ಮೊಲಕ ಯಶಸ್ವಿಹಾಸ್ಯ ನಟರಾಗಿ ಗುರಿತಿಸಿಕೊಂಡ ಇವರು ಸುಮಾರು 80 ಕ್ಕೊ ಹೆಚ್ಚು ಕನ್ನಡ ಹಾಗು 5 ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ… ಕನ್ನಡದಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಇವರಿಗೆ ಸ್ಪೂರ್ತಿಯಾದರೆ “ಸಾಧುಕೋಕಿಲ” ಅದ್ಯಗುರುಗಳು. ತೆಲುಗಿನ “ ಎವಡ್ರ ಹೀರೊ” ಚಿತ್ರದಲ್ಲಿ ಹಾಸ್ಯ ದಿಗ್ಗಜರಾದ “ಬ್ರಹ್ಮನಂದ್” ಹಾಗು “ವೇಣು ಮಾದವ್” ರೊಂದಿಗೆ ಅಬಿನಯಿಸಿದ್ದಾರೆ.

ಕುರಿಬಾಂಡ್ ಖ್ಯಾತಿಯ ಸುನೀಲ್.
ಕುರಿಬಾಂಡ್ ಖ್ಯಾತಿಯ ಸುನೀಲ್.

 

ಹಾಸ್ಯಕಲಾವಿದನಾಗಿ ಪ್ರೇಕ್ಷಕರನ್ನು ನಗಿಸುವ ಸುನಿಲ್ ರವರಿಗೆ ಕರ್ನಾಟಕ ಭೂಷಣ, ಹಾಸ್ಯರತ್ನ, ನಾಕೌಟ್ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರೆ. ದರ್ಶನ್ ಪುನೀತ್ ರೊಂದಿಗೆ ಅಭಿನಯಿಸಿರುವ ಇವರು ಮುಂಬರುವ ದಿನಗಳಲ್ಲಿ ಶಿವರಾಜ್ ಕುಮಾರ್, ರವಿಚಂದ್ರನ್, ಯಶ್ ,ಹಾಗು ಮುರಳಿ ಸೇರಿದಂತೆ ಉಳಿದ ನಾಯಕ ನಟರೊಂದಿಗೆ ಅಭಿನಯಿಸುವ ಹಂಬಲಹೊಂದಿದ್ದಾರೆ. ಇವರ ತಂದೆ ಕೇಶವ, ತಾಯಿ ಕಮಲ ,ಸಹೋದರ ಕಿರಣ್, ತಂಗಿ ಶಾರದ,  ಇವರ ಅಭಿನಯಕ್ಕೆ ಪ್ರೋತ್ಸಾಹ ನೀಡಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.