Skip to main content
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ  ರಾಬ್ ಕಾಸೆಲ್ ಬೌಲಿಂಗ್ ಕೋಚ್

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರಾಬ್ ಕಾಸೆಲ್ ಬೌಲಿಂಗ್ ಕೋಚ್

ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆೆ ರಾಬ್ ಕಾಸೆಲ್ ವೇಗದ ಬೌಲಿಂಗ್ ಕೋಚ್

ರಾಬ್ ಕಾಸೆಲ್

ನವದೆಹಲಿ: ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆೆ ವೇಗದ ಬೌಲಿಂಗ್ ಕೋಚ್ ಆಗಿ ರಾಬ್ ಕಾಸೆಲ್ ನೇಮಕಗೊಂಡಿದ್ದಾರೆ. ರಾಬ್ ಕಾಸೆಲ್ ಅವರು 2002ರಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆಸಿದ್ದ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು.

ರೆಡ್‌ಬ್ಯಾಕ್ಸ್‌ ತಂಡದ ಕೇನ್ ರಿಚರ್ಡ್‌ಸನ್ ಹಾಗೂ ಜೋ ಮೆನಿ ಅವರನ್ನು ವಿಶ್ವ ಶ್ರೇಷ್ಠ ಬೌಲರ್‌ಗಳನ್ನು ರೂಪಿಸುವಲ್ಲಿ ರಾಬ್ ಮಹತ್ತರ ಪಾತ್ರವಹಿಸಿದ್ದರು. ದಕ್ಷಿಣ ಆಸ್ಟ್ರೇಲಿಯಾ ತಂಡದ ವೇಗದ ಬೌಲಿಂಗ್ ಕೋಚ್ ಆಗಿದ್ದ ರಾಬ್ ಕಾಸೆಲ್ ಅವರು ವೇಗದ ಬೌಲರ್‌ಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸಿದ್ದರು. ಜತೆಗೆ, ದಕ್ಷಿಣ ಆಸ್ಟ್ರೇಲಿಯಾ ಶೆಫೀಲ್ಡ್‌ ಶೀಲ್ಡ್‌ ಟೂರ್ನಿಯಲ್ಲಿ ಸತತವಾಗಿ ಫೈನಲ್‌ಗೇರುವಲ್ಲಿ ಇವರ ಕೊಡುಗೆ ಅಪಾರವಾಗಿದೆ.

ಐರ್ಲೆಂಡ್ ತಂಡದ ಸಹಾಯಕ ಕೋಚ್ ಹಾಗೂ ವೇಗದ ಬೌಲಿಂಗ್ ನೇತೃತ್ವ ವಹಿಸಿದ್ದರು. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡಕ್ಕೆೆ ಶ್ಟೆೆಫನ್ ಜೋನ್ಸ್‌ ವೇಗದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇವರನ್ನು ಮುಂದುವರಿಸಲಾಗಿದೆ. ಆದರೆ, ಆಫ್ ಸೀಸನ್‌ನಲ್ಲಿ ಬೆಳವಣಿಗೆಯ ಕೋಚ್ ಬಗ್ಗೆೆ ತಂಡ ಒಲವು ಹೊಂದಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.