Skip to main content
ಬುಮ್ರಾ ಫಿಟ್ನೆೆಸ್ ಟೆಸ್ಟ್ಗೆ ಎನ್ಸಿಎ ನಿರಾಕರಣೆ :

ಬುಮ್ರಾ ಫಿಟ್ನೆೆಸ್ ಟೆಸ್ಟ್ಗೆ ಎನ್ಸಿಎ ನಿರಾಕರಣೆ :

ಬುಮ್ರಾ ಫಿಟ್ನೆೆಸ್ ಟೆಸ್ಟ್ಗೆ ಎನ್ಸಿಎ ನಿರಾಕರಣೆ : ದ್ರಾವಿಡ್ ಬಳಿ ಮಾತನಾಡುವೆ ಎಂದ ಗಂಗೂಲಿ

ಬುಮ್ರಾ ಫಿಟ್ನೆೆಸ್ ಟೆಸ್ಟ್ಗೆ ಎನ್ಸಿಎ ನಿರಾಕರಣೆ :

ಬೆಂಗಳೂರು,: ಗಾಯದಿಂದ ಚೇತರಿಸಿಕೊಂಡಿರುವ ಟೀಮ್ ಇಂಡಿಯಾ ಹಿರಿಯ ವೇಗಿ ಜಸ್ಪ್ರಿತ್ ಬುಮ್ರಾ ಅವರಿಗೆ ಫಿಟ್ನೆೆಸ್ ಪರೀಕ್ಷೆೆ ಮಾಡಲು ನಿರಾಕರಿಸುತ್ತಿರುವ ಎನ್ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಅವರ ಬಳಿ ಮಾತನಾಡುತ್ತೇನೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಭಾರತ ತಂಡದ ಸೇವೆಗೆ ಮರಳಲು ತುದಿಗಾಲಲ್ಲಿ ನಿಂತಿರುವ ಹಿರಿಯ ವೇಗಿ ಜಸ್ಪ್ರಿತ್ ಬುಮ್ರಾ ಅವರಿಗೆ ಫಿಟ್ನೆೆಸ್ ಪರೀಕ್ಷೆೆ ನಡೆಸಲು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರಾಕರಿಸಿದೆ. ಬುಮ್ರಾ ಗಾಯಕ್ಕೆೆ ತುತ್ತಾದಾಗ ಎನ್ಸಿಎಗೆ ಬಾರದೆ ಖಾಸಗಿಯಾಗಿ ತಮ್ಮದೇ ವಿಧಾನದಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದರು. ಈ ಹಿನ್ನೆೆಲೆಯಲ್ಲಿ ಇದೀಗ ರಾಹುಲ್ ದ್ರಾವಿಡ್ ನೇತೃತ್ವದ ಎನ್ಸಿಎ, ಅವರಿಗೆ ಫಿಟ್ನೆೆಸ್ ಪರೀಕ್ಷಿಸಲು ಹಿಂದೇಟು ಹಾಕುತ್ತಿದೆ. ಈ ಬಗ್ಗೆೆ ಫಿಸಿಯೋಥೆರಪಿಸ್ಟ್ ಕೌಶಿಕ್ ಮಾತನಾಡಿ,

ಬುಮ್ರಾ ಫಿಟ್ನೆೆಸ್ ಟೆಸ್ಟ್ಗೆ ಎನ್ಸಿಎ ನಿರಾಕರಣೆ :

‘‘ಬುಮ್ರಾ ಅವರ ಫಿಟ್ನೆೆಸ್ ಟೆಸ್ಟ್ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬುಮ್ರಾ ತಮ್ಮ ಗಾಯದ ಸಮಸ್ಯೆೆಯಿಂದ ಚೇತರಿಸಲು ಎನ್ಸಿಎ ನೆರವು ಪಡೆಯದೇ ತಮ್ಮದೇ ವಿಧಾನದಲ್ಲಿ ತಮ್ಮದೇ ಪರಿಣಿತರೊಂದಿಗೆ ಪುನರ್ವಸತಿ ಕೈಗೊಂಡಿದ್ದಾರೆ. ಹೀಗಿರುವಾಗ ಅವರನ್ನು ಎನ್ಸಿಎದಲ್ಲಿ ಫಿಟ್ನೆೆಸ್ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ‘‘ಎನ್ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಎನ್ಸಿಎಯನ್ನು ಪಾರದರ್ಶಕವಾಗಿ ಮುನ್ನಡೆಸುತ್ತಿದ್ದಾರೆ ಎಂಬ ನಂಬಿಕೆ ಇದೆ. ಏಕೆಂದರೆ, ಅವರೊಬ್ಬ ಪ್ರಚಂಡ ಆಟಗಾರರಾಗಿದ್ದವರು. ಅವರು ಪಡೆದಿರುವ ಜವಾಬ್ದಾರಿಯಲ್ಲಿ ಪರಿಪೂರ್ಣತೆ ಹಾಗೂ ಬದ್ಧತೆ ಇದ್ದೇ ಇರುತ್ತದೆ. ಸಂಘಟಿತವಾಗಿಯೇ ನಾವು ಅವರಿಗೆ ಎನ್ಸಿಎ ಮುಖ್ಯಸ್ಥ ಸ್ಥಾನ ನೀಡಿದ್ದೇವೆ. ಅವರ ಅವಧಿಯನ್ನೂ ಮುಂದೆ ವಿಸ್ತರಿಸಲಿದ್ದೇವೆ. ಇದೀಗ ಉದ್ಬವವಾಗಿರುವ ಎಲ್ಲ ಸಮಸ್ಯೆೆಗಳ ಸಂಪೂರ್ಣ ಮಾಹಿತಿಯನ್ನು ಒಂದು ವಾರದಲ್ಲಿ ಪಡೆಯಲಿದ್ದೇವೆ,’’ ಎಂದು ದಾದಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘‘ಪ್ರತಿಯೊಬ್ಬ ಅಂತಾರಾಷ್ಟ್ರೀಯ ಆಟಗಾರನಿಗೂ ಎನ್ಸಿಎ ಆರಂಭ ಹಾಗೂ ಅಂತಿಮವಾಗಿದೆ. ನಾನು ಬಿಸಿಸಿಐ ಅಧ್ಯಕ್ಷ ಸ್ಥಾನ ಸ್ವೀಕರಿಸಿ ಕೆಲವು ವಾರಗಳಷ್ಟೆೆ ಕಳೆದಿವೆ. ಹಲವು ಬಾರಿ ದ್ರಾವಿಡ್ ಅವರನ್ನು ಭೇಟಿಯಾಗಿದ್ದೇನೆ. ಇದೀಗ ಮತ್ತೊಮ್ಮೆ ಅವರನ್ನು ಭೇಟಿಯಾಗಿ ಉದ್ಭವವಾಗಿರುವ ಸಮಸ್ಯೆೆ ಬಗ್ಗೆೆ ಮಾಹಿತಿ ಪಡೆದುಕೊಳ್ಳುತ್ತೇನೆ,’’ ಎಂದಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.