Skip to main content
'ಗುಳ್ಟು' ನೋಡಿ ಮೆಚ್ಚಿಕೊಂಡ ಸಿಂಪಲ್ ಸುನಿ.!

'ಗುಳ್ಟು' ನೋಡಿ ಮೆಚ್ಚಿಕೊಂಡ ಸಿಂಪಲ್ ಸುನಿ.!

'ಗುಳ್ಟು' ನೋಡಿ ಮೆಚ್ಚಿಕೊಂಡ ಸಿಂಪಲ್ ಸುನಿ.!

ಕಳೆದ ವಾರವಷ್ಟೇ ತೆರೆಕಂಡಿದ್ದ 'ಗುಳ್ಟು' ಚಿತ್ರವನ್ನ ನೋಡಿದ ಪ್ರೇಕ್ಷಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸಿನಿಮಾದ ಬಗ್ಗೆ, ಚಿತ್ರದ ಕಲಾವಿದರ ಬಗ್ಗೆ ಹಾಗೂ ನಿರ್ದೇಶಕರ ಕೆಲಸಕ್ಕೆ ಶಬ್ಬಾಶ್ ಎನ್ನುತ್ತಿದ್ದಾರೆ. ನಟ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಗೀತ ಭಟ್ ಸೇರಿದಂತೆ ಹಲವು ನಟ-ನಟಿಯರು ಹಾಗೂ ತಂತ್ರಜ್ಞರು ಗುಳ್ಟು ನೋಡಿ ಇಷ್ಟಪಟ್ಟಿದ್ದಾರೆ.

ಇದೀಗ ನಿರ್ದೇಶಕ ಸಿಂಪಲ್ ನಿರ್ದೇಶಕ ಸುನಿ 'ಗುಳ್ಟು' ಚಿತ್ರ ನೋಡಿ ಮನಸೋತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾ ನೋಡಿದ ಸುನಿ ಚಿತ್ರದ ಕಥೆ, ನಾಯಕ, ನಾಯಕಿ ಹಾಗೂ ಹಿನ್ನೆಲೆ ಸಂಗೀತ, ನಿರ್ದೇಶಕನ ಕೈಚಳಕ ಹೀಗೆ ಎಲ್ಲದಕ್ಕೂ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸುನಿ ''Internet ಕಥೆ ತಾಜತನದ online ನಿರೂಪಣೆ ನವಿರು data ಸಂಭಾಷಣೆ ಅಚ್ಚುಕಟ್ಟಾದ code ಅಭಿನಯ ದೃಶ್ಯಕ್ಕೆ ತಕ್ಕ encrypted ಸಂಗೀತ & decrypted ಬೆಳಕು ವಿನ್ಯಾಸ login ಆಗಿ ಚಿತ್ರ ನೋಡಿ gultoo(logout) ಆಗಿ ಅಷ್ಟರಲ್ಲಿ ಆ ಚಿತ್ರ ಮತ್ತು ನಿರ್ದೇಶಕ ನಿಮ್ಮನ್ನು hack ಮಾಡಿರುತ್ತಾರೆ'' ಎಂದಿದ್ದಾರೆ.

ನವೀನ್ ಶಂಕರ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಸೋನು ಗೌಡ, ಅವಿನಾಶ್, ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜರ್ನಾಧನ್ ಚಿಕ್ಕಣ್ಣ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.