Skip to main content
ಹಾಸನ ನನಗೆ ಜನ್ಮ ಕೊಟ್ಟ ಜಿಲ್ಲೆ ಕುಮಾರ ಪರ್ವ ಸಮಾವೇಶದಲ್ಲಿ ಹೆಚ್ ಡಿ ಕೆ ಮಾತು.

ಹಾಸನ ನನಗೆ ಜನ್ಮ ಕೊಟ್ಟ ಜಿಲ್ಲೆ ಕುಮಾರ ಪರ್ವ ಸಮಾವೇಶದಲ್ಲಿ ಹೆಚ್ ಡಿ ಕೆ ಮಾತು.

ಹಾಸನ ನನಗೆ ಜನ್ಮ ಕೊಟ್ಟ ಜಿಲ್ಲೆ ಕುಮಾರ ಪರ್ವ ಸಮಾವೇಶದಲ್ಲಿ ಹೆಚ್ ಡಿ ಕೆ ಮಾತು.

ಹಾಸನ ಜಿಲ್ಲೆಯಲ್ಲಿ ನಡೆದ ಕುಮಾರ ಪರ್ವ ಸಮಾವೇಶದಲ್ಲಿ ಮಾಜಿ ಸಿ ಎಂ. ಹೆಚ್ ಡಿ ಕುಮಾರಸ್ವಾಮಿಯವರು,ಈ ಕ್ರೀಡಾಂಗಣದಲ್ಲಿ ನಾವೆಲ್ಲರೂ 1989- 90 ರಲ್ಲಿ ಅಂದಿನ ಪ್ರಧಾನಿ ಸಮಾವೇಶದಲ್ಲಿ ಮಾತನಾಡಿದ್ದನ್ನ ನೋಡಿದ್ದೇನೆ,ಆದರೆ ಅಂದಿನ ಸಮಾವೇಶ ಬಿಟ್ಟರೆ ಇದು ಎರಡನೇ ಐತಿಹಾಸಿಕ ಸಮಾವೇಶ ಇದಾಗಿದೆ ಇಲ್ಲಿ ನಿಮ್ಮ ಜೊತೆ ಮಾತನಾಡತ್ತಿರುವುದು ನನ್ನ ಪುಣ್ಯ.ನನಗೆ ಜನ್ಮ ಕೊಟ್ಟ ಜಿಲ್ಲೆಯಲ್ಲಿ ಈ ಸಮಾವೇಶ ನಡೆಯುತ್ತಿರುವುದು ಸಂತೋಷ.https://youtu.be/-pHn0mNBKrE

ಹಾಸನ ನನಗೆ ಜನ್ಮ ಕೊಟ್ಟ ಜಿಲ್ಲೆ ಕುಮಾರ ಪರ್ವ ಸಮಾವೇಶದಲ್ಲಿ ಹೆಚ್ ಡಿ ಕೆ ಮಾತು.
ಹಾಸನ ನನಗೆ ಜನ್ಮ ಕೊಟ್ಟ ಜಿಲ್ಲೆ ಕುಮಾರ ಪರ್ವ ಸಮಾವೇಶದಲ್ಲಿ ಹೆಚ್ ಡಿ ಕೆ ಮಾತು.https://youtu.be/-pHn0mNBKrE

ಎರಡೂ ರಾಷ್ಟ್ರೀಯ ಪಕ್ಷಗಳು ಜನರ ಸಮಸ್ಯೆಯನ್ನ ಆಲಿಸಿಲ್ಲ, ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮನ್ನ ಟೀಕೆ ಮಾಡಲು ಸಮಾವೇಶವನ್ನ ಬಳಸಿಕೊಂಡವು, ರಾಜ್ಯದ ಜನ್ರ ಸಮಸ್ಯೆಯ ಬಗ್ಗೆ ಕಿಂಚಿತ್ತೂಮಾತನಾಡಲಿಲ್ಲ, ಹಾಸನದಲ್ಲಿ ತೆಂಗಿನ ಬೆಳೆ, ಆಲೂಗಡ್ಡೆಯ ಸಮಸ್ಯೆಯ ಬಗ್ಗೆ ಮಾತನಾಡಲಿಲ್ಲ,ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ದ ಸಿಎಂ. ಮತ್ತು ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದ ಹೆಚ್,ಡಿಕೆ.ಸಿಎಂ ಮತ್ತು ರಾಹುಲ್ ಗಾಂಧಿ ಹಾಸನದ ಜನ್ರನ್ನ ಕೆಣಕಿದ್ದಾರೆ ಕಾಂಗ್ರೆಸ್ ಸರ್ಕಾರ ಜಾಹೀರಾತಿನ ಸರ್ಕಾರವಾಗಿ ಮಾರ್ಪಟ್ಟಿದೆ,ಎಂದು ಪದೇ ಪದೇ ಜಾಹೀರಾತಿನ ಸರ್ಕಾರ ಎಂದು ಉಚ್ಚರಿಸಿದರು. ಈ ರಾಜ್ಯದ ಜನ್ರು ಕಾಂಗ್ರೆಸ್ ಮತ್ತು ಬಿಜೆಪಿಯನ್ನ ಕಿತ್ತೊಗೆಯಬೇಕು.

ನಾನು ರೇವಣ್ಣ ಸೇರಿ ವಿಜಯನಗರ ಸಾಮ್ರಾಜ್ಯ ಮಾಡಿತ್ತೇವೆ,ಹಿಂದಿನ ಇತಿಹಾಸದ ವಿಜಯನಗರ ಸಾಮ್ರಾಜ್ಯ ಮಾಡುತ್ತೇವೆ ಎಂದ ಹೆಚ್,ಡಿಕೆ,ಮಾತನಾಡಿದರು.

ಇನ್ನೂ ತಮ್ಮ ತಂದೆಯವರ ಬಗ್ಗೆ ಮಾತನಾಡಿ ನನ್ನ ತಂದೆಯ ಆರೋಗ್ಯ ಮುಖ್ಯವಲ್ಲಾ,ಮುಂದಿನ ಐದು‌ ವರ್ಷದ ಸರ್ಕಾರದಲ್ಲಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ. ನಾವು ಅಧಿಕಾರಕ್ಕೆಬರುತ್ತೇವೆ ಎಂಬ ಭವಿಷ್ಯದಿಂದ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ದೇವೇಗೌಡರು ಹುಟ್ಟಿದ ದಿನ ಮೇ 18 ಕ್ಕೆ ಜಾತ್ಯಾತೀತ ಜನತಾದಳ ಸರ್ಕಾರ ಬರಲಿದೆ, ಮೇ 18 ರಂದು ನಾನು ಪ್ರಮಾಣ ಸ್ವೀಕರಿಸುತ್ತೇನೆ, ಹಾಸನದ ನಿಮ್ಮ ಮನೆಯ ಮಗ ಮುಖ್ಯಮಂತ್ರಿಯಾಗುತ್ತಾನೆ, ನಮ್ಮ ತಂದೆ ದೇವೇಗೌಡ ಮತ್ತು ತಾಯಿ ಚೆನ್ನಮ್ಮ, ವಿಧಾನಸೌಧಕ್ಕೆ ಬಂದು ನನ್ನ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುತ್ತಾರೆ, ನಮ್ಮ ತಂದೆ ತಾಯಿ ಇಬ್ಬರೂ ವಿಧಾನಸೌಧದ ಮೆಟ್ಟಿಲು ಹತ್ತುತ್ತಾರೆ,ಎಂದು ಚುನಾವಣೆಗೂ ಮುನ್ನ ಭವಿಷ್ಯದ ಮುಖ್ಯಮಂತ್ರಿಯಾಗುವುದಾಗಿ ಮಾತನಾಡಿದರು.ಇನ್ನೂ ಸಮಾವೇಶ ಮುಗಿಸಿ ಹೊರನಡೆದ ಜೆಡಿಎಸ್ ಗಣ್ಯರು, ಹಾಸನದಲ್ಲಿ ನಡೆದ ಐತಿಹಾಸಿಕ ಸಮಾವೇಶದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.