ಆರ್. ಕೆ.ಸಾಹುಕಾರ ಕುಟುಂಬದವರ ವತಿಯಿಂದ ಆಹಾರ ಕಿಟ್ ವಿತರಣೆ.
ಆರ್. ಕೆ.ಸಾಹುಕಾರ ಕುಟುಂಬದವರ ವತಿಯಿಂದ ಆಹಾರ ಕಿಟ್ ವಿತರಣೆ.
ಸಿರವಾರ: ಕೊರೋನ ಭಿತಿಯಿಂದಾಗಿ ಲಾಕ್ ಡೌನ್ ಬಲೆಯಲ್ಲಿ ಬಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡಕುಟುಂಬದವರು,ನಾನಾ ತೊಂದರೆಗೆ ಒಳಗಾಗುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ತಾಲುಕಿನ ಈ ಬಡ ಕುಟುಂಬಗಳಿಗೆ ಆಸರೆಯಾಗಲು ಆರ್,ಕೆ.ಸಾಹುಕಾರ ,ಕುಟುಂಬದವರ ವತಿಯಿಂದ ಉಚಿತವಾಗಿ ಆಹಾರ ಕಿಟ್ ನ್ನು ಕೊಡುವುದರ ಮೂಲಕ ಬಡವರಿಗೆ ಆಸರೆ ಯಾಗಿದ್ದಾರೆ. ತಾಲೂಕಿನ ತಾಹಸಿಲ್ದಾರ್ ಶ್ರುತಿ .ಕೆ ಮತ್ತು ಪಿಎಸ್ಐ ಸುಜಾತ ಡಿ ಎನ್ ಅವರ ಸಮ್ಮುಖದಲ್ಲಿ ಪುಡ್ ಕಿಟ್ ವಿತರಣೆಮಾಡುವ ಮೂಲಕ ಚಾಲನೆ ನಿಡಿದರು.
ಆಹಾರ ಕಿಟ್ ವಿತರಣೆ ಮಾಡಿ ಕುಟುಂಬದ ಪರವಾಗಿ ಮಾತನಾಡಿದ ಆರ್ .ಕೆ.ಅಮರೇಶ್ ಅವರ ತಮ್ಮನವರನ್ನು ನೇನಪಿಸಿಕೊಳ್ಳುತ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಆರ್ .ಕೆ.ಕುಟುಂಬದವರ ವತಿಯಿಂದ ಸಾಮೂಹಿಕ ವಿವಾಹಮಾಡುವ ಎಲ್ಲಾ ಸಿದ್ದತೆಗಳು ನಡೆದಿದ್ದವು ಆದರೆ ಈ ಕೊರೋನಾ ಮತ್ತು ಇನ್ನೀತರ ಕಾರಣಗಳಿಂದ ಮಾಡಲು ಆಗಿಲ್ಲ ಎಂದರು.ಇನ್ನೂ ದೇಶಕ್ಕೆ ಹಬ್ಬಿರುವ ಈ ಮಹಾಮಾರಿ ಕೊರೋನಾ ಆದಷ್ಟು ಬೇಗಾ ತೊಲಗಲಿ ಎಲ್ಲಾ ನಾಡಿಜನತೆ ನೆಮ್ಮದಿಯಿಂದ ಬಾಳುವಂತೆಯಾಗಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಬಂಧಿ ಉದಯ್ ಸಾಹುಕಾರ್, ಮಕ್ಕಳಾದ ಶ್ರೀ ಡಾ. ಸಂದಿಪ್ ಪಾಟೀಲ್ ಆರ್.ಕೆ ಮತ್ತು ರಾಜು ಪಾಟೀಲ್ ಆರ್.ಕೆ ಇವರು ಭಾಗಿಯಾಗಿದ್ದರು. ಜೊತೆಗೆ ತಾಲುಕಿನ ಗಣ್ಯರಾದ ಪ್ರಕಾಶಪ್ಪ, ಜ್ಞಾನಮಿತ್ರ ಸಂಜೀವಿನ ಟ್ಟಸ್ಟ್ ಅದ್ಯಕ್ಷರು, ಹನುಮಂತ ಬಡ್ಡಪ್ಪ, ರಾಜಪ್ಪ ಹೊನ್ನಟಗಿ,ಅರಳಪ್ಪ, ಇನ್ನೀತರರು ಭಾಗಿಯಾಗಿದ್ದರು.
Recent comments