Skip to main content
ಲಾಡಮುಗಳಿಯ ವಿರುಪಾಕ್ಷೇಶ್ವರ ರಥೋತ್ಸವ.........

ಲಾಡಮುಗಳಿಯ ವಿರುಪಾಕ್ಷೇಶ್ವರ ರಥೋತ್ಸವ.........

ಲಾಡಮುಗಳಿಯ ವಿರುಪಾಕ್ಷೇಶ್ವರ ಅದ್ದೂರಿ ಜಾತ್ರ ರಥೋತ್ಸವ.......

ಅಳಂದ: ಲಾಡಮುಗಳಿಯ ಗ್ರಾಮದ ಶತಮಾನಗಳ ಇತಿಹಾಸವಿರುವ ವಿರುಪಾಕ್ಷೇಶ್ವರ ದೇವಸ್ಥಾನದ ಜಾತ್ರ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಮಂಗಳವಾರ ಸಾಯಂಕಾಲ ಜಾತ್ರ ಮಹೋತ್ಸವದ ನಿಮ್ಮಿತ್ತ. ಗ್ರಾಮದಲ್ಲಿ ಬೆಳಿಗ್ಗೆ ವಿರುಪಾಕ್ಷೇಶ್ವರ ಗದ್ದುಗೆಗೆ ಮಹಾರುದ್ರಾಭಿಷೇಕ ಅಲಂಕಾರ ಕಾರ್ಯಕ್ರಮ ನೇರವೆರಿಸಲಾಗಿತ್ತು. ನಂತರ ಮಧ್ಯಾಹ್ನ 3ಕ್ಕೆ ಡೊಳ್ಳು ಕುಣಿತ ದೊಂದಿಗೆ ವಿರುಪಾಕ್ಷೇಶ್ವರ ಪಲ್ಲಕ್ಕಿ ಉತ್ಸವ ಜರುಗಿತು. ಇನ್ನು ಪಲ್ಲಕ್ಕಿ ದೇವಸ್ಥಾನ ತಲುಪಿದ ನಂತರ ಸಾಯಂಕಾಲ 6:30ಕ್ಕೆ ಮಹಾರಥೋತ್ಸವ ನಡೆಯಿತು. ಗ್ರಾಮದ ರಥೋತ್ಸವ ನಿಮ್ಮಿತ್ತ ಜಾತ್ರೆಯಲ್ಲಿ ಶ್ರೀ ಗುರುಪಾದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಾವೈಕ್ಯ ಧರ್ಮ ಸಭೆ ನಡೆದಿದ್ದು ವಿಷೇಶವಾಗಿತ್ತು. ಲಾಡಮುಗಳಿಯ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿದವು.ಶ್ರೀ ನಿವಾಸ ಸರಡಗಿಯ ಪೂಜ್ಯ ಅಪ್ಪಾರಾವ ದೇವಿ ಮುತ್ಯ, ಶ್ರೀ ಸಂಗಮೇಶ್ವರ ಶಿವಾಚಾರ್ಯರು,ಶ್ರೀಸಿದ್ದಾರಾಮ ಮಹಾಸ್ವಾಮಿಗಳು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುರುಶಾಂತ್ ಕಲಶಟ್ಟಿ ಉಪಸ್ಥಿತರಿದ್ದರು.

ಲಾಡಮುಗಳಿಯ ವಿರುಪಾಕ್ಷೇಶ್ವರ ಅದ್ದೂರಿ ಜಾತ್ರ ರಥೋತ್ಸವ

 

ಶ್ರೀನಿವಾಸ ಸರಡಗಿಯ ಪೂಜ್ಯ ಅಪ್ಪಾರಾವ ದೇವಿ ಮುತ್ಯ ಇವರ ಸಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳಿಗೆ ಮೆಚ್ಚಿ ಚೆನೈ ಯೂನಿರ್ವಸಿಟಿಯಿಂದ ಡಾಕ್ಟರೇಟ್ ಪಡೆದ ಪೂಜ್ಯ ಇವರಿಗೆ ಗ್ರಾಮಸ್ಥರಿಂದ ಸನ್ಮಾಮಾಡಲಾಯಿತು. ಗ್ರಾಮದ ಯುವ ಚಿತ್ರಕಲಾವಿದ ಸಂಗಪ್ಪ ನಾಗೂರೆ ಲಿಂಗಕೈ ಶ್ರೀ ವಿರೂಪಾಕ್ಷೇಶ್ವರ ಮಹಾಸ್ವಾಮಿಗಳ ಭಾವ ಚಿತ್ರವನ್ನು ಊಡುಗರೆಯಾಗಿ ನೀಡಿದರು.

ಗ್ರಾಮದ ಯುವ ಚಿತ್ರಕಲಾವಿದ ಸಂಗಪ್ಪ ನಾಗೂರೆ

 

ನಿಂಗಪ್ಪ ನಾಗೂರೆ,ಮತ್ತು ರೇವಣಸಿದ್ದ ಕಲರ್ಬುಗಿ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಹಾಗೂ ಸಂತೋಷ ಹಿರಮ್ ಶಟ್ಟಿ, ನಾಗರಜ್ ಕಲರ್ಬುಗಿ, ಶರಣು ಹಿರಮ್ ಶಟ್ಟಿ, ರಮೇಶ ಖೇಳಗಿ, ಶಿವ ಪೂಜಾರಿ, ಬಿರಪ್ಪ ಪೂಜಾರಿ, ಚಂದ್ರು ಕ್ಷತ್ರಿಯ, ಸಂಜು ಮಾಸ್ಟರ್, ಬಂಡಪ್ಪ ಪೋಲಿಸ್.ಗುಂಡಪ್ಪ ನಾಗೂರೆ.ಬಾಗಣ್ಣ ಪೂಜಾರಿ ಗ್ರಾಮದ ಎಲ್ಲಾ ಯುವಕರು ಕಾರ್ಯಕ್ರಮ ಯಶಸ್ಸಿಯಾಗಿ ನಡೆಸಿಕೊಟ್ಟರು.

ಲಾಡಮುಗಳಿಯ ವಿರುಪಾಕ್ಷೇಶ್ವರ ಅದ್ದೂರಿ ಜಾತ್ರ ರಥೋತ್ಸವ.......

 

ಪ್ರತಿ ವರ್ಷ ನಡೆಯುವ ಊರ ಜಾತ್ರೆಯಲ್ಲಿ ಗ್ರಾಮದವರಲ್ಲದೆ, ನೇರೆ ಹೋರೆ ಗ್ರಾಮಗಳಾದ, ಅಂಬಲಗಿ, ಲೆಂಗಟಿ, ವಿ.ಕೆ.ಸಲ್ಗರ, ಮುದ್ದುಡಿಗಿ, ಮಡಿಕಿ, ಕುದುಮುಡಾ, ಮಡಿಕಿ ತಾಂಡ, ಮಾಹಗಾಂವ್, ಹಾಗು ವಿವಿಧ ನಗರಳಾದ ಕಲುರ್ಬುಗಿ, ಸೋಲ್ಲಪುರ, ಮುಂಬೈಯಿ ಮತ್ತು ಇನ್ನಿತರ ಪ್ರದೇಶಗಳಿಂದ ಭಕ್ತಾದಿಗಳು ಸೇರಿದ್ದು ವಿಷೇಶವಾಗಿತ್ತು. ಅಲ್ಲದೆ ಗ್ರಾಮದ ಎಲ್ಲಾ ನಾಗರಿಕರು ಮತ್ತು ಹಿರಿಯರು, ವಿಷೇಶವಾಗಿ ಗ್ರಾಮದ ಯುವಕರು ಜಾತ್ರಮಹೋತ್ಸದಲ್ಲಿ ಪಾಲ್ಗೋಗೊಂಡಿದ್ದರು. ಸಂಜೆ ದೇವಸ್ಥಾನದ ಅವರಣದ ಭಜನ ಕಾರ್ಯಕ್ರಮದಲ್ಲಿ ನರೂಣ,ಮತ್ತು ಬಿಲುಗುಂದಿ ತಂಡಗಳ ನಡುವೆ ಭಜನ ಪದಗಳ ಜುಗಲ್ ಬಂದಿ ನಡೆದಿದ್ದು ವಿಷೇಶವಾಗಿತ್ತು. ಬುದುವಾರದಂದು ಕುಸ್ತಿ ಪಂದ್ಯಗಳು ಜರುಗಿದವು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.