Skip to main content
ಅನೇಕ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು ತಾಜ್ ಮಹಲ್ -2 ಚಿತ್ರದ ಟ್ರೇಲರ್.

ಅನೇಕ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು ತಾಜ್ ಮಹಲ್ -2 ಚಿತ್ರದ ಟ್ರೇಲರ್.

ಅನೇಕ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು ತಾಜ್ ಮಹಲ್ -2 ಚಿತ್ರದ ಟ್ರೇಲರ್.

ಅನೇಕ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು ತಾಜ್ ಮಹಲ್ -2 ಚಿತ್ರದ ಟ್ರೇಲರ್.

ಶ್ರೀ ಗಂಗಾಂಬಿಕೆ ಏಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ದೇವರಾಜ್ ಕುಮಾರ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ "ತಾಜ್ ಮಹಲ್ 2" ಚಿತ್ರದ ಟ್ರೇಲರ್ ಅನೇಕ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಯಾಗಿದೆ. ಟ್ರೇಲರ್ ಗೆ ಅಪಾರ ಮೆಚ್ಚುಗೆ ಸಹ ವ್ಯಕ್ತವಾಗಿದೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಡಾ||ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ನಾಗೇಂದ್ರ ಮಾಗಡಿ, ಜಿಮ್ ರವಿ, ವಿಕಾಸ್ ಪುಷ್ಪಗಿರಿ, ಚಿತ್ರದಲ್ಲಿ ಅಭಿನಯಿಸಿರುವ ತಬಲ ನಾಣಿ, ಕಾಕ್ರೋಜ್ ಸುಧಿ, ರಾಜ್ ಉದಯ್ ಸೇರಿದಂತೆ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ನೈಜಘಟನೆ ಆಧರಿಸಿ ಈ ಚಿತ್ರ ನಿರ್ದೇಶಿಸಿದ್ದೇನೆ.

ಈ ಹಿಂದೆ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿದ್ದೇನೆ. ಆದರೆ ನಾಯಕನಾಗಿಬೇಕೆಂಬ ಕನಸು ಹಾಗೆ ಇತ್ತು. ನಿರ್ಮಾಪಕರು ಈ ಚಿತ್ರದ ಮೂಲಕ ನನ್ನನ್ನು ನಾಯಕನಾಗಿ ಮಾಡಿದ್ದಾರೆ. ನಾನು ಜೀವನಪೂರ್ತಿ ಅವರಿಗೆ ಋಣಿ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ. ಚಿತ್ರದ ಮೊದಲ ಪ್ರತಿ ಸಿದ್ದವಾಗಿದೆ ಏಪ್ರಿಲ್ ನಲ್ಲಿ ಚಿತ್ರ ತೆರೆಗೆ ತರುತ್ತೇವೆ ಎಂದರು ದೇವರಾಜ್ ಕುಮಾರ್. ನಾನು ಈ ಚಿತ್ರದಲ್ಲಿ ನಾಯಕನ‌ ಸೋದರಮಾವ. ಆತ ನನ್ನ ಸಾಕುಮಗ. ಮದುವೆಯಿಲ್ಲದವರಿಗೆ ಮದುವೆ ಮಾಡಿಸುವುದೇ ನನ್ನ ಕಾಯಕ.‌ ಎಷ್ಟೋ ಮದುವೆ ಮಾಡಿಸಿದವನಿಗೆ ತನ್ನ ಮಗನ‌ ಮದುವೆ ಮಾಡಿಸಲು ಆಗಿರುವುದಿಲ್ಲ ಎಂದು ತಮ್ಮ‌ ಪಾತ್ರದ ವಿವರಣೆ ನೀಡಿದರು ತಬಲ ನಾಣಿ. ನಾನು ದೇವರಾಜ್ ಇಬ್ಬರೂ ಬ್ರಷ್ ಹಿಡಿದು ಬಂದವರು. ಮುಖಕ್ಕೆ ಬಣ್ಣ ಬಳಿಯುತ್ತಿದ್ದ. ನಾನು ಗೋಡೆಗೆ ಬಳಿಯುತ್ತಿದೆ.

ಈಗ ಇಬ್ಬರ ಕನಸು ನನಸ್ಸಾಗಿದೆ ಎಂದರು ಕಾಕ್ರೋಜ್ ಸುಧಿ. ಸಮಾರಂಭಕ್ಕೆ ಬರುವಾಗ ಪೋಸ್ಟರ್ ನೋಡಿಕೊಂಡು ಬಂದೆ. ನಾಯಕನ ಹೇರ್ ಸ್ಟೈಲ್ ಚೆನ್ನಾಗಿದೆ. ಮೊದಲು ಮೇಕಪ್ ದೇವು, ನಂತರ ದೇವರಾಜ್ , ಈಗ ದೇವರಾಜ್ ಕುಮಾರ್ ಹೀಗೆ ನಿಮ್ಮ ಕನಸು ಈಡೀರಿದೆ. ಚಿತ್ರ ಕೂಡ ಯಶಸ್ಸು ಕಾಣಲಿ ಎಂದು ಹಾರೈಸಿದರು ಡಾ|ವಿ.ನಾಗೇಂದ್ರ ಪ್ರಸಾದ್. ಆಗಮಿಸಿದ್ದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಮಾತನಾಡಿ ಶುಭ ಕೋರಿದರು. ಹಾಡು ಬರೆದಿರುವ ಮನ್ವರ್ಷಿ ನವಲಗುಂದ ಓಂ ಮ್ಯೂಸಿಕ್ ಎಂಬ ಆಡಿಯೋ ಸಂಸ್ಥೆ ತೆರೆದು ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ದೇವರಾಜ್ ಕುಮಾರ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ. ಮನ್ವರ್ಷಿ ನವಲಗುಂದ ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿದ್ದಾರೆ. ವಿಕ್ರಮ್ ಸೆಲ್ವ ಸಂಗೀತ ನಿರ್ದೇಶನ, ಚಂದ್ರು ಬಂಡೆ ಸಾಹಸ ನಿರ್ದೇಶನ ಹಾಗೂ ಧನಂಜಯ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ವಿಜಯ್ ಅವರ ಸಂಕಲನವಿದೆ. ಈ ಚಿತ್ರದ ತಾರಾಬಳಗದಲ್ಲಿ ದೇವರಾಜ ಕುಮಾರ್, ಸಮೃದ್ಧಿ, ಜಿಮ್ ರವಿ, ಶೋಭ್ ರಾಜ್, ಶಿವರಾಂ, ತಬಲಾ ನಾಣಿ, ಕಡ್ಡಿಪುಡಿ ಚಂದ್ರು, ರಾಜ್ ಉದಯ್ , ಕಾಕ್ರೋಜ್ ಸುಧೀ ಮುಂತಾದವರಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.