Skip to main content
ಟ್ರಾವಿಸ್ ಹೆಡ್ ಶತಕ

ಟ್ರಾವಿಸ್ ಹೆಡ್ ಶತಕ ಆಸ್ಟ್ರೇಲಿಯಾಗೆ ಉತ್ತಮ ಮೊತ್ತ .

ಟ್ರಾವಿಸ್ ಹೆಡ್ ಶತಕ, ಪೈನ್ ಅರ್ಧಶತಕ: ಆಸ್ಟ್ರೇಲಿಯಾಗೆ ಉತ್ತಮ ಮೊತ್ತ

ಆಸ್ಟ್ರೇಲಿಯಾ ಕ್ರಿಕೆಟ್

ಮೆಲ್ಬೋರ್ನ್: ಟ್ರಾವಿಸ್ ಹೆಡ್ (114 ರನ್ ) ಶತಕ ಹಾಗೂ ಟಿಮ್ ಪೈನ್ (79 ರನ್) ಅವರ ಅರ್ಧಶತಕದ ಬಲದಿಂದ ಆಸ್ಟ್ರೇಲಿಯಾ ತಂಡ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಉತ್ತಮ ಮೊತ್ತ ಕಲೆಹಾಕಿದೆ. ಇಲ್ಲಿನ, ಮೆಲ್ಬೋರ್ನ್ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಎರಡನೇ ದಿನವಾದ ಶುಕ್ರವಾರ ಬೆಳಗ್ಗೆ ನಾಲ್ಕು ವಿಕೆಟ್ ಕಳೆದುಕೊಂಡು 257 ರನ್ ಗಳಿಂದ ಪ್ರಥಮ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 155.1 ಓವರ್ ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 467 ರನ್ ಗಳಿಸಿದೆ. ನಂತರ, ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡ 18 ಓವರ್ ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದ್ದು, ಇನ್ನೂ 423ರನ್ ಹಿನ್ನಡೆಯಲ್ಲಿದೆ. ಮೊದಲನೇ ದಿನ ಅರ್ಧಶತಕ ಬಾರಿಸಿದ್ದ ಸ್ಟೀವನ್ ಸ್ಮಿತ್ ಇಂದು ಬೆಳಗ್ಗೆ 85 ರನ್ ಗಳಿಗೆ ಸೀಮಿತರಾದರು. 242 ಎಸೆತಗಳನ್ನು ಎದುರಿಸಿದ್ದ ಅವರು ಒಂದು ಸಿಕ್ಸರ್ ಹಾಗೂ ಎಂಟು ಬೌಂಡರಿಯೊಂದಿಗೆ 85 ರನ್ ಗಳಿಸಿ ವ್ಯಾಗ್ನರ್ ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಟ್ರಾವಿಸ್ ಹೆಡ್ ವೃತ್ತಿ ಜೀವನದ ಎರಡನೇ ಶತಕ ಪೂರೈಸಿದರು.

ಸೊಗಸಾಗಿ ಬ್ಯಾಟಿಂಗ್ ಮಾಡಿದ ಇವರು ಕಿವೀಸ್ ಬೌಲಿಂಗ್ ಪಡೆಯನ್ನು ಅತ್ಯುತ್ತಮವಾಗಿ ಎದುರಿಸಿದರು. 238ಎಸೆತಗಳಲ್ಲಿ 12 ಬೌಂಡರಿಯೊಂದಿಗೆ 114 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಹೆಡ್ ಅವರು ನಾಯಕ ಟಿಮ್ ಪೈನ್ ಅವರೊಂದಿಗೆ ಸೇರಿ ಮುರಿಯದ ಆರನೇ ವಿಕೆಟ್ ಗೆ 150 ರನ್ ಜತೆಯಾಟದ ಕಾಣಿಕೆ ನೀಡಿದರು. ಹೆಡ್ ಗೆ ಸಾಕಷ್ಟು ಸಮಯ ಸಾಥ್ ನೀಡಿದ ನಾಯಕ ಟಿಮ್ ಪೈನ್ ಅರ್ಧಶತಕ ಬಾರಿಸಿದರು. 138ಎಸೆತಗಳಲ್ಲಿ 9 ಬೌಂಡರಿಯೊಂದಿಗೆ 79 ರನ್ ಗಳಿಸಿ ವ್ಯಾಗ್ನರ್ ಗೆ ವಿಕೆಟ್ ಒಪ್ಪಿಸಿದರು.

ನ್ಯೂಜಿಲೆಂಡ್ ಅತ್ಯುತ್ತಮ ಬೌಲಿಂಗ್ ಮಾಡಿದ ಟಿಮ್ ಸೌಥ್ 3 ವಿಕೆಟ್ ಪಡೆದರೆ, ನೀಲ್ ವ್ಯಾಗ್ನರ್ ನಾಲ್ಕು ವಿಕೆಟ್ ಕಿತ್ತರು. ಪ್ರಥಮ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್‌ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಟಾಮ್ ಲಥಾಮ್ ಹಾಗೂ ಟಾಮ್ ಬ್ಲಂಡೆಲ್ ಜೋಡಿಯನ್ನು ಪ್ಯಾಟ್ ಕಮಿನ್ಸ್ ಬೇರ್ಪಡಿಸಿದರು.

ಟ್ರಾವಿಸ್ ಹೆಡ್

ಬ್ಲಂಡೆಲ್ 15 ರನ್ ಗಳಿಸಿ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೆ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಜೇಮ್ಸ್ ಪ್ಯಾಟಿನ್ಸನ್ ಪೆವಿಲಿಯನ್‌ಗೆ ಕಳುಹಿಸಿದರು. ಕ್ರೀಸ್‌ನಲ್ಲಿ ಟಾಮ್ ಲಥಾಮ್ (9) ಹಾಗೂ ರಾಸ್ ಟೇಲರ್ (2) ವಿಕೆಟ್ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್ ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್: 155.1 ಓವರ್ ಗಳಿಗೆ 467/10 (ಟ್ರಾವಿಸ್ ಹೆಡ್ 114, ಟಿಮ್ ಪೈನ್ 79; ನೀಲ್ ವ್ಯಾಗ್ನರ್ 83 ಕ್ಕೆ 4, ಟಿಮ್ ಸೌಥ್ 103 ಕ್ಕೆ 3, ಕಾಲಿನ್ ಡಿ ಗ್ರಾಂಡ್ಹೋಮ್ 68 ಕ್ಕೆ 2)

ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್: 18 ಓವರ್ ಗಳಿಗೆ 44/2 ( ಟಾಮ್ ಬ್ಲಂಡೆಲ್ 15, ಟಾಮ್ ಲಥಾಮ್ ಔಟಾಗದೆ 9; ಪ್ಯಾಟ್ ಕಮಿನ್ಸ್ 8 ಕ್ಕೆ 1, ಜೇಮ್ಸ್ ಪ್ಯಾಟಿನ್ಸನ್ 1 ಕ್ಕೆ 1)

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.