Skip to main content
*ಶಾನ್ವಿ ಶ್ರೀವಾತ್ಸವ್ & ರಘು ದೀಕ್ಷಿತ್* ಅಭಿನಯದ *"ಬ್ಯಾಂಗ್"* ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಬಿಡುಗಡೆ.

*ಶಾನ್ವಿ ಶ್ರೀವಾತ್ಸವ್ & ರಘು ದೀಕ್ಷಿತ್* ಅಭಿನಯದ *"ಬ್ಯಾಂಗ್"* ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಬಿಡುಗಡೆ.

ಶಾನ್ವಿ ಶ್ರೀವಾತ್ಸವ್ & ರಘು ದೀಕ್ಷಿತ್* ಅಭಿನಯದ "ಬ್ಯಾಂಗ್" ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಬಿಡುಗಡೆ.

Kannada new film

ಖ್ಯಾತ ನಟಿ ಶಾನ್ವಿ ಶ್ರೀವಾಸ್ತವ್ ಹಾಗೂ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ "ಬ್ಯಾಂಗ್" ಚಿತ್ರದ ಟೀಸರ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಫಸ್ಟ್ ಲುಕ್ ನಿರ್ಮಾಪಕ ವಸಂತ್ ಕುಮಾರ್ ಅವರ ಪುತ್ರರಾದ ನಕುಲ್ ಹಾಗೂ ತೇಜಸ್ ಅನಾವರಣಗೊಳಿಸಿದರು. ಟೀಸರ್ ನಿರ್ಮಾಪಕಿ ಪೂಜಾ ವಸಂತ್ ಕುಮಾರ್ ಬಿಡುಗಡೆ ಮಾಡಿದರು. ಇದೊಂದು ಡಾರ್ಕ್‌ ಕಾಮಿಡಿ ಹಾಗೂ ಆಕ್ಷನ್ ಥ್ರಿಲ್ಲರ್ ಚಿತ್ರ. ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ಎಲ್ಲರಿಗೂ ಹಿಡಿಸುವ ಕಥೆಯಿದೆ. ಮೊದಲು ಬಾರಿಗೆ ಶಾನ್ವಿ ಶ್ರೀವಾಸ್ತವ್ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಇದೇ ಪ್ರಥಮ ಬಾರಿಗೆ ಡ್ಯಾಡಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಲವತ್ತೆಂಟು ಘಂಟೆಗಳಲ್ಲಿ ನಡೆಯುವ ಘಟನೆಯೊಂದನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ಈ ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ. ಅದಕ್ಕೂ‌ ಮುನ್ನ ‌ಜನವರಿಯಲ್ಲಿ ಟ್ರೇಲರ್ ಬರಲಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ನಿರ್ಮಾಪಕರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ದೇಶಕ ಶ್ರೀ ಗಣೇಶ್ ಪರಶುರಾಮ್. ನಾನು ಈ ರೀತಿ ಪಾತ್ರ ಯಾವತ್ತೂ ಮಾಡಿಲ್ಲ.‌ ಮೊದಲು ಯೋಚನೆ ಮಾಡಿದ್ದೆ. ನನಗೆ ಈ ಪಾತ್ರ ಸರಿ ಹೊಂದುತ್ತದೊ ಇಲ್ಲವೋ? ಎಂದು. ಮೊದಲ ದಿನ ಚಿತ್ರೀಕರಣಕ್ಕೆ ಹೋದಾಗ, ನಾನು‌ ನಿರ್ಧಾರ ಸರಿ ಅನಿಸಿತು. ನಾಯಕಿಯಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಇಂತಹ ಪಾತ್ರಗಳು ಬರುವುದು ಕಡಿಮೆ. ಕಥೆ ತುಂಬಾ ಚೆನ್ನಾಗಿದೆ ಎಂದು ಶಾನ್ವಿ ಶ್ರೀವಾಸ್ತವ್ ತಮ್ಮ ಪಾತ್ರ ಹಾಗೂ ಸಿನಿಮಾದ ಬಗ್ಗೆ ಮಾತನಾಡಿದರು. ಗೆಳೆಯ ರಿತ್ವಿಕ್ ಹಾಗೂ ನಿರ್ದೇಶಕ ಗಣೇಶ್ ಮಾತನಾಡಲು ಮನೆಗೆ ಬಂದರು. ನಾನು ಸಂಗೀತ ನಿರ್ದೇಶನ ಅಥವಾ ಹಾಡು ಹಾಡಿಸುವುದಕ್ಕಾಗಿ ಕೇಳಲು ಮನೆಗೆ ಬಂದಿದ್ದಾರೆ ಅಂದು ಕೊಂಡೆ. ನಂತರ ಅವರು ನೀವು ಈ ಚಿತ್ರದಲ್ಲಿ ನಟಿಸಬೇಕೆಂದರು.‌ ಒಂದು ಸಲ ಆಶ್ಚರ್ಯವಾಯಿತು. ಮೊದಲು ನಾನು ಒಪ್ಪಲಿಲ್ಲ. ನಂತರ ಅವರ ಒತ್ತಡಕ್ಕೆ ಮಣಿದು ಒಪ್ಪಿಕೊಂಡೆ. ಡ್ಯಾಡಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಒಳ್ಳೆಯ ನಿರ್ಮಾಪಕರೊಂದಿಗೆ ಹಾಗೂ ಚಿತ್ರತಂಡದೊಂದಿಗೆ ಕೆಲಸ ಮಾಡಿದ ಖುಷಿ ಇದೆ ಎಂದರು ರಘು ದೀಕ್ಷಿತ್. ಚಿತ್ರದಲ್ಲಿ ನಾಲ್ಕು ಸ್ನೇಹಿತರ ಪಯಣದಲ್ಲಿ ಈ ಕಥೆ ನಡೆಯುತ್ತದೆ. ಚಿತ್ರದ‌ ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್ ಆರವ್ ಪಾತ್ರದಲ್ಲಿ, ಸುನೀಲ್ ತಮ್ಮದೇ ಹೆಸರಿನ ಪಾತ್ರದಲ್ಲಿ, ನಾಟ್ಯ ರಂಗ ಭೂಷಣ್ ಆಗಿ‌ ಹಾಗೂ ಸಾತ್ವಿಕ ಅವರು ಸಿರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ನಾಲ್ಕು ಜನರು ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು. ಛಾಯಾಗ್ರಹಕ ಉದಯಲೀಲ, ಸಂಕಲನಕಾರ ಹಾಗೂ‌ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿರುವ ವಿಜೇತ್ ಚಂದ್ರ ಚಿತ್ರದ ತಮ್ಮ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಯು.ಕೆ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.‌ ಈಗಾಗಲೇ ಆನ ಹಾಗೂ ನಾನು, ಅದು ಮತ್ತು ಸರೋಜ ಚಿತ್ರಗಳನ್ನು ನಿರ್ಮಾಣ ಮಾಡಿರುವ ಪೂಜಾ ವಸಂತಕುಮಾರ್ ಅವರ ನಿರ್ಮಾಣದ ಮೂರನೇ ಚಿತ್ರ 'ಬ್ಯಾಂಗ್'. ಶ್ರೀಗಣೇಶ್ ಪರಶುರಾಮ್ ಈ ಚಿತ್ರದ ನಿರ್ದೇಶಕರು. ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ಉದಯಲೀಲ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ. ಸೌಂಡ್ ಡಿಸೈನ್ ನವೀನ್ ಕುಮಾರ್ ಅವರದು. ಕಾಸ್ಟಿಂಗ್ ಡೈರೆಕ್ಟರ್ ಹಾಗೂ ವಸ್ತ್ರವಿನ್ಯಾಸ ಮಾಧುರಿ ಪರಶುರಾಮ ಮಾಡಿದ್ದಾರೆ. .

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.