Skip to main content
ಕನ್ನಡ ಸಿನಿ ರಂಗಕ್ಕೆ ಎನಿ ಟೈಮ್‍ ಥಿಯೇಟರ್ ಪ್ರವೇಶ

ಕನ್ನಡ ಸಿನಿ ರಂಗಕ್ಕೆ ಎನಿ ಟೈಮ್‍ ಥಿಯೇಟರ್ ಪ್ರವೇಶ

ಕನ್ನಡ ಸಿನಿ ರಂಗಕ್ಕೆ ಎನಿ ಟೈಮ್‍ ಥಿಯೇಟರ್ ಪ್ರವೇಶ

Shreyash media

ದಕ್ಷಿಣ ಭಾರತದ ನ. 1 ಸಿನಿಮಾ ಇವೆಂಟ್‍ ಮತ್ತು ಪ್ರಚಾರದ ಸಂಸ್ಥೆಯಾದ ಶ್ರೇಯಸ್‍ ಇದೀಗ ಹೊಸ ಕನಸಿನೊಂದಿಗೆ ಮತ್ತಷ್ಟು ಸಿನಿಮಾ ರಂಗಕ್ಕೆ ಹತ್ತಿರವಾಗಿದೆ. ಶ್ರೇಯಸ್‍ ಗ್ರೂಪ್‍ ಆಫ್‍ ಕಂಪೆನಿಸ್‍ ಆರಂಭಿಸಿರುವ ಎಟಿಟಿ (ಎನಿ ಟೈಮ್‍ ಥಿಯೇಟರ್)ಗೆ ಎಲ್ಲೆಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಾಗಿ ಟಾಲಿವುಡ್‍ ಜಗತ್ತನ್ನು ಕನ್ನಡದ ಪ್ರೇಕ್ಷಕರ ಹೃದಯಕ್ಕೆ ತರುವ ಪ್ರಯತ್ನಕ್ಕೆ ಶ್ರೇಯಸ್‍ ಕಂಪೆನಿ ಮುಂದಾಗಿದೆ. ಶ್ರೇಯಸ್ ET, ಕನ್ನಡದಲ್ಲಿ ವೆಬ್ ಸೀರೀಸ್, ಕಿರು ಚಲನಚಿತ್ರಗಳು ಹಾಗೂ ಇನ್ನಿತರ ಮನೋರಂಜನಾ ಕಾರ್ಯಕ್ರಮಗಳ ತಯಾರಿಕೆಗೆ ಹಣ ಹೂಡಲಿದೆ. ಭಾರತೀಯ ಸಿನಿಮಾ ರಂಗದಲ್ಲಿ ಗೇಮ್‍ಚೇಂಜರ್ ಎಂದು ಶ್ಲ್ಯಾಘಿಸಲ್ಪಟ್ಟಿರುವ ಶ್ರೇಯಸ್‍  ಇಟಿ ಮತ್ತು ಎಟಿಟಿ ಫ್ಲ್ಯಾಟ್‍ಫಾರ್ಮ್‍, ಖ್ಯಾತ ನಿರ್ದೇಶಕ ರಾಮ್‍ಗೋಪಾಲ್‍ ವರ್ಮಾ ಅವರ ಕ್ಲೈಮ್ಯಾಸ್‍ ಚಿತ್ರವನ್ನು ಮೊದಲ ಬಾರಿಗೆ ನೇರವಾಗಿ ಎಟಿಟಿ ಮೂಲಕ ಪ್ರೇಕ್ಷಕರಿಗೆ ತಲುಪಿಸಿತು. ಈ ಸಿನಿಮಾ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರಿಗೆ ತಲುಪಿ, ದಾಖಲೆ ಮೂಡಿಸಿತು. "ಆರ್‍ಜಿವಿ ಅವರ ಕ್ಲೈಮ್ಯಾಸ್‍ ಸಿನಿಮಾ 50,000 ಸಾವಿರ ಜನರಿಗೆ ತಲುಪಿದರೆ ಸಾಕು ಎನ್ನುವ ನಿರೀಕ್ಷೆ ನಮ್ಮದಾಗಿತ್ತು. ಆದರೆ, ಬಿಡುಗಡೆಯಾದ 12 ಗಂಟೆಯೊಳಗೆ 2,75000 ಲಾಗಿನ್‍ಗಳನ್ನು ಮತ್ತು 168596 ಜನರು ಹಣ ಪಾವತಿಸಿ ಚಿತ್ರ ನೋಡಿದ್ದಾರೆ. ಈವರೆಗೂ ಈ ಚಿತ್ರವನ್ನು 289565 ಜನರು ಚಿತ್ರವನ್ನು ವೀಕ್ಷಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ" ಎಂದು ಹೇಳುವ ಹೆಮ್ಮೆ ಅನಿಸುತ್ತಿದೆ ಎನ್ನುತ್ತಿದೆ ಶ್ರೇಯಸ್‍ ಕಂಪೆನಿ ಉತ್ತಮ ಸರ್ವರ್, ಮೂಲಸೌಕರ್ಯ ಮತ್ತು ಸುಗಮ ಬಳಕೆದಾರ ಅನುಭವದೊಂದಿಗೆ ಸಿನೆಮಾ ಜಗತ್ತಿನಲ್ಲಿ ಆನ್‌ಲೈನ್ ಥಿಯೇಟರ್ ಪರಿಕಲ್ಪನೆಯನ್ನು ಪರಿಚಯಿಸಿದ ನಂತರ, ಹೊಸ ಆವೃತ್ತಿಯ ಶ್ರೇಯಸ್ ಇಟಿ ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ. ಅಲ್ಲದೇ, ಬ್ಲಾಕ್‍ ಬಸ್ಟರ್‍ ಚಿತ್ರಗಳನ್ನು ನೇರವಾಗಿ ನಿಮ್ಮ ಮನೆಗೆ ತಲುಪಿಸುವ ಗುರಿಯನ್ನು ಇದು ಹೊಂದಿದೆ. ಮಾರ್ಚ್ 2021ರೊಳಗೆ ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಪಯತ್ನ ಸಂಸ್ಥೆಯದ್ದು. ಅಲ್ಲದೇ, ಈ ಸಿನಿಮಾಗಳನ್ನು ಕನ್ನಡಕ್ಕೂ ಡಬ್‍ ಮಾಡಿ, ಪ್ರೇಕ್ಷಕರಿಗೆ ಕೊಡುವ ಪ್ಲ್ಯಾನ್‍ ಕೂಡ ಸಂಸ್ಥೆಯದ್ದಾಗಿದೆ. ಕನ್ನಡ ಸಿನಿಮಾಗಳನ್ನೂ ಎಟಿಟಿ ಮೂಲಕ ಹಂಚುವ ಗುರಿಯನ್ನೂ ಕೂಡ ಹೊಂದಲಾಗಿದೆ. ಆರ್‌ಜಿವಿ ವರ್ಲ್ಡ್ ಅಡಿಯಲ್ಲಿ ಜೂನ್ 27 ರಂದು ಎಟಿಟಿ ಪ್ಲಾಟ್‌ಫಾರ್ಮ್‌ನಲ್ಲೇ ನೇರವಾಗಿ ಅವರ ಮತ್ತೊಂದು ಸಿನಿಮಾ ನೆಕೆಡ್‍ ನಂಗಾ ನಾಗ್ನಮ್‍ ಸಿನಿಮಾ ಕೂಡ ರಿಲೀಸ್‍ ಆಗಲಿದೆ. ಈ ಚಿತ್ರವು ಏಕಕಾಲಕ್ಕೆ ತೆಲುಗು, ತಮಿಳು, ಕನ್ನಡ, ಮಲೆಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಆಗುತ್ತಿರುವುದು ವಿಶೇಷ. ಈ ವೇದಿಕೆಯಲ್ಲಿ ಬಿಡುಗಡೆಯಾದ ಐದು ಭಾಷೆಯ ಮೊದಲ ಸಿನಿಮಾ ಕೂಡ ಇದಾಗಲಿದೆ. ಆರ್‌ಜಿವಿ ವರ್ಲ್ಡ್ ಜೊತೆಗೆ, ಇತರ 10 ಕ್ಕೂ ಹೆಚ್ಚು ಟಾಲಿವುಡ್ ಚಿತ್ರಗಳು ಕೂಡ ನೇರವಾಗಿಯೇ ಎಟಿಟಿ ಮೂಲಕ ರಿಲೀಸ್‍ ಆಗುತ್ತಿದ್ದು 302, ಶಿವನ್  ಸೇರಿದಂತೆ ಹಲವು ಚಿತ್ರಗಳು ಈ ಲಿಸ್ಟ್‍ನಲ್ಲಿವೆ. ಅಲ್ಲದೇ, ಮುಂಬರುವ ದಿನಗಳಲ್ಲಿ ನಯನತಾರಾ ನಟನೆಯ ತಮಿಳು ಸಿನಿಮಾ, ತೆಲುಗು ಆವೃತ್ತಿಯಲ್ಲಿ ನೇರವಾಗಿ ನಮ್ಮ ಎಟಿಟಿಯಲ್ಲೇ ರಿಲೀಸ್‍ ಆಗಲಿದೆ. ದಕ್ಷಿಣ ಭಾರತದಲ್ಲಿ ಈಗಾಗಲೇ ತನ್ನದೇ ಛಾಪು ಮೂಡಿಸಿರುವ ಇಟಿ ಮತ್ತು ಎಟಿಟಿ ಇದೀಗ ಸ್ಯಾಂಡಲ್‍ವುಡ್‍ಗೂ ಕಾಲಿಟ್ಟಿದೆ. ಅತ್ಯುತ್ತಮ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರಿಗೂ ಕೊಡಲು ಮುಂದಾಗಿದೆ. ಶ್ರೇಯಸ್ ಇಟಿಯನ್ನು ಡೌನ್‍ಲೋಡ್‍ ಮಾಡಿಕೊಳ್ಳಲು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ಗೆ ಭೇಟಿ ಮಾಡಿ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.