Skip to main content
ಗಾಂಧಿ ನಗರಕ್ಕೆ “ಸಿಗ್ನೇಚರ್” ಹೆಸರಿನ ಚಿತ್ರ…………

ಗಾಂಧಿ ನಗರಕ್ಕೆ “ಸಿಗ್ನೇಚರ್” ಹೆಸರಿನ ಚಿತ್ರ…………

ಗಾಂಧಿ ನಗರಕ್ಕೆ “ಸಿಗ್ನೇಚರ್” ಹೆಸರಿನ ಚಿತ್ರ…………

ಗಾಂಧಿ ನಗರಕ್ಕೆ “ಸಿಗ್ನೇಚರ್” ಹೆಸರಿನ ಚಿತ್ರ…………
ಚಿತ್ರತಂಡ……..

ಚಿತ್ರರಂಗ ಸಿನಮಾ ಲೋಕ ಅಂದ್ರೇನೇ ಡಿಫರೆಂಟ್,ಅದರಲ್ಲಿಯೂ ಇವತ್ತಿನ ಕಾಂಪಿಟೇಶನ್ ಯುಗದಲ್ಲಿ ಚಿತ್ರನಿರ್ಮಾಣ ಮಾಡಲು ಅದೆಷ್ಟೋ ಚಿತ್ರ ನಿರ್ಮಾಪಕರು ,ನಿರ್ದೇಶಕರು ಬರುತ್ತಾರೆ,ಹೋಗುತ್ತಾರೆ ಅಂತಹುದರಲ್ಲಿ “ವಿರಾಟ್ ಪ್ರೊಡಕ್ಷನ್ ಮತ್ತು ಎಂ.ಎಂ.ಕೆ.ಮೂವೀಸ್.” ಬ್ಯಾನರ್ ಅಡಿಯಲ್ಲಿ, “ಸಿಗ್ನೇಚರ್” ಎಂಬ ಹೆಸರಿನ ವಿಶೇಷ ಕಾನ್ಸಪ್ಟ್ ನೊಂದಿಗೆ, ಅಲ್ಲದೆ ಹೊಸ ಯುವ ನಿರ್ದೇಶಕರಿಗೆ ಅವಕಾಶ ಕೊಡುವುದರ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಚಿತ್ರವೊಂದನ್ನ ನಿರ್ಮಾಣ ಮಾಡಲು ತಯಾರಿ ನಡೆಸಿದ್ದಾರೆ.ನಗರದ  ಗ್ರೀನ್ ಹೌಸ್ ನಲ್ಲಿ ನಡೆದ ಪತ್ರಿಕಾ ಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಿತ್ರತಂಡ ವಿರಾಟ್ ಪ್ರೊಡಕ್ಷನ್ ಮತ್ತು ಎಂ.ಎಂ.ಕೆ.ಮೂವೀಸ್.ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರ ಇದಾಗಿದೆ ಎಂದು ಹೇಳಿದರು.

ಚಿತ್ರದಲ್ಲಿನ ನಾಯಕ ಮತ್ತು ನಾಯಕಿ ಪರಿಚಯ…..

ನಾಯಕಿಯಾಗಿ ಮುಯೂರಿ ಚಿತ್ರ ನಾಯಕ ನಟ ರಂಜಿತ್

“ಸಿಗ್ನೇಚರ್” ಚಿತ್ರದಲ್ಲಿನ ನಾಯಕ ನಟನಾಗಿ ರಂಜಿತ್ ಮತ್ತು ನಾಯಕಿಯಾಗಿ ಮುಯೂರಿ ಯವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ,ಇನ್ನೂ ಚಿತ್ರದ ನಾಯಕಿಯಾದ ಮಯೂರಿ ಮಾತನಾಡಿ ತಾವು ನಟಿಸುತ್ತಿರುವ ಚಿತ್ರದಲ್ಲಿನ ಪಾತ್ರದ ಬಗ್ಗೆ ಪರಿಚಯಿಸಿ, ಚಿತ್ರದಲ್ಲಿ ಒಬ್ಬ ಮಾಜಿ ಸಿ.ಎಂ.ರವರ ಪುತ್ರಿಯಾಗಿ “ಸೋನ” ಅನ್ನೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ತುಂಬಾ ಗರ್ವ ಮತ್ತು ದುಡ್ಡಿನ ಅಂತಸ್ಥಿನಿಂದ ಜೀವನ ನಡೆಸಿದ ಸೋನಳಿಗೆ ಸಡನ್ ಹಾಗಿ ಕಷ್ಟಬಂದಾಗ ಹೇಗೆ ಅದನ್ನ ನಿಭಾಯಿಸುತ್ತಾಳೆ ಅನ್ನೋ ಪಾತ್ರ ವಾಗಿದೆ,ಅಲ್ಲದೆ ಈ ಹಿಂದಿನ ಚಿತ್ರಗಳಲ್ಲಿ ನಟಿಸಿದ ಪಾತ್ರಗಳಿಗಿಂತ ಇದು ವಿಭಿನ್ನವಾಗಿದೆ, ವೆಸ್ಟರ್ನ್  ಕಲ್ಚರ್ ಮತ್ತು ಈಗಿನಾ ಟ್ರೆಂಡ್ ಇಷ್ಟಪಡುವಂತಹ ಪಾತ್ರವಾಗಿದೆ ಎನ್ನುತ್ತಾರೆ ನಟಿ ಮಯೂರಿ. ಚಿತ್ರ ನಾಯಕ ನಟ ರಂಜಿತ್ ಮಾತನಾಡಿ ಈ ಹಿಂದೆ ಪ್ರೋಡಕ್ಷನ್ ನಂ:01 ಚಿತ್ರದಲ್ಲಿ ನಟಿಸಿದ್ದು ಈ ಚಿತ್ರದಲ್ಲಿ ಮೇಕ್ಯಾನಿಕ್ ಪಾತ್ರದ ಮಧ್ಯಮ ಕುಟುಂಬದ ಸಾಮಾನ್ಯ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಾರೆ.

ಚಿತ್ರದಲ್ಲಿನ ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರು……

ನಿರ್ದೇಶಕರಾದ “ಮದ್ಲೇ ಸರ”
ನಿರ್ದೇಶಕರಾದ “ಮದ್ಲೇ ಸರ”

ಚಿತ್ರದ ಕಥೆ,ಸಂಭಾಷಣೆ,ಚಿತ್ರಕಥೆಯ ಜವಾಬ್ದಾರಿಯನ್ನ ನಿರ್ದೇಶಕರಾದ “ಮದ್ಲೇ ಸರ” ಅವರು ವಹಿಸಿಕೊಂಡಿದ್ದಾರೆ.ಅಲ್ಲದೆ ಈ ಹಿಂದೆ 16 ವರ್ಷಗಳ ಕಾಲ ಚಿತ್ರರಂಗದಲ್ಲಿ ಅನುಭವ ವಿರುವ ಇವರು “ಮಿಲನ ಪ್ರಕಾಶ್” “ರಾಜೀವ್ ಮುಖರ್ಜಿ ” ಅವರುಗಳ ಜೊತೆ ಕೆಲಸ ಮಾಡಿರುವ ಅನುಭವವಿದೆ ಎನ್ನುತ್ತಾರೆ. ಅಲ್ಲದೆ ಚಿತ್ರದ ಬಗ್ಗೆ ಪರಿಚಯಿಸಿದ ಇವರು ಎರಡು ಕುಟುಂಬಗಳ ನಡುವೆ ನಡೆಯುವ ಚಿತ್ರವಾಗಿದ್ದು ಒಬ್ಬರು ಡಿಸಿ ಮತ್ತು  ಸಿ.ಎಂ ಕುಟುಂಬ

 ನಡುವೆ ಒಂದು ಸಿಗ್ನೇಚರ್ ಅನ್ನೋ ಕಾನ್ಸಪ್ಟ್ ನೊಂದಿಗೆ ಚಿತ್ರ ಮುಂದುವರೆಯುತ್ತದೆ ಅನ್ನುತ್ತಾರೆ ನಿರ್ದೇಶಕರು. ಚಿತ್ರಕ್ಕೆ ಸಂಗಿತ ನಿರ್ದೇಶಕರಾಗಿ ವಿ.ಮನೋಹರ್ ರವರು ಆರು ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಇನ್ನೂ ವಿಶೇಷ ಪ್ರಮುಖ ಪಾತ್ರದಲ್ಲಿ “ಬೇಬಿ ಮಾನ್ಯ” ಡಿಸಿಯವರ ಮಗಳಾಗಿ ಬೇರೆ ಬೇರೆ ಕಾಸ್ಟುಮ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರತಂಡ……..

ಚಿತ್ರತಂಡ……..

ಚಿತ್ರತಂಡ……..

ನಿರ್ಮಾಪಕರು: ಗುರು ಮದ್ಲೇ ಸರ ,ಸಂಗೀತ: ವಿ.ಮನೋಹರ್ ,ಛಾಯಗ್ರಹಣ:ಜೀವನ್ ಗೌಡ,ಸಂಭಾಷಣೆ: ರಾಜೇಶ್ ಪಾಲುಂಡಿ ಸಹನಿರ್ದೇಶನ:ರವಿಕುಮಾರ್ ನಿರ್ಮಾಣ ನಿರ್ವಾಣೆ: ಗಜೇಂದ್ರ ವಿ.ಎಸ್.

ಕಲಾವಿದರಾಗಿ.

ಮಯೂರಿ ನಾಯಕಿ,ರಂಜಿತ್ ನಾಯಕ, ಬೇಬಿ ಮಾನ್ಯ ಸೂರ್ಯಕಿರಣ್, ಆರ್ಯ (ಬಾಂಚಿ), ಸುನೀಲ್, ಪುರಾಣಿಕ್

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.