Skip to main content
ಗಾಂಧಿನಗರಕ್ಕೆ “ ಟೆಂಪರ್ “ ಎಂಟ್ರಿ.

ಗಾಂಧಿನಗರಕ್ಕೆ “ ಟೆಂಪರ್ “ ಎಂಟ್ರಿ.

ಗಾಂಧಿನಗರಕ್ಕೆ “ ಟೆಂಪರ್ “ ಎಂಟ್ರಿ. ಚಿತ್ರತಂಡಕ್ಕೆ ನಂದ ಕಿಶೋರ್ ಶುಭಹಾರಕೈ.

ಆರ್ಯನ್

ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಪ್ರತಿವಾರ ವಿವಿಧ ಟೈಟಲಗಳನ್ನ ಹೊತ್ತು ಕನ್ನಡ ಚಿತ್ರರಂಗಕ್ಕೆ ಏನನ್ನಾದರು, ಚಿತ್ರಗಳ ಮೂಲಕ ಕೊಡುಗೆ ನಿಡಬೇಕೆಂಬ ಉದ್ದೇಶವಿಟ್ಟು ಹೊಸ ನಾಯಕ ನಟಿಯರು ಎಂಟ್ರಿ ಕೊಡ್ತಾರೆ. ಇಂತಹ ಉದ್ದೇಶವನ್ನಿಟ್ಟು ಮೈಸೂರಿನ ಚಿತ್ರತಂಡವೊಂದು ಸ್ಯಾಂಡಲ್ ವುಡ್ನಲ್ಲಿ ಟೆಂಪರ್ ಎಂಬ ಸಿನಿಮಾ ನಿರ್ಮಾಣಕ್ಕೆ ಸಿದ್ದತೆ ನಡೆಸಿದೆ, ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾದ ಮುಹೂರ್ತ ನೆರವೇರಿಸಿದ್ದು, ಚಿತ್ರ ತಂಡಕ್ಕೆ ಡೈರೆಕ್ಟರ್ ನಂದ ಕಿಶೋರ್ ಕ್ಲಾಪ್ ಮಾಡುವ ಮೂಲಕ ಶುಭ ಕೊರಿದ್ದಾರೆ.

Temper Team

ಟೆಂಪರ್ ಚಿತ್ರದ ಮೂಲಕ ಆರ್ಯನ್ ಮೊದಲ ಚಿತ್ರದ ಮೂಲಕ ರಗಡ್ ಅವತಾರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಟೆಂಪರ್ ಹೀರೋಗೆ ತಮಿಳಿನ ನಾಯಕಿ ಕಾಶಿಮಾ ಜೊತೆಯಾಗಿದ್ದು ಈಗಾಗಲೇ ಒಂದು ಸಿನಿಮಾದಲ್ಲಿ ಇವರು ನಟಿಸಿದ್ದಾರೆ. ಇನ್ನೂ ಸಿನಿಮಾದಲ್ಲಿ ತಬಲ ನಾಣಿ, ಮಜಾ ಟಾಕೀಸ್ ಪವನ್,ಪತ್ರಕರ್ತ ಧನು, ಲಕ್ಷೀ ಸಿದ್ದಯ್ಯ,ಲಯನ್ ಪ್ರಭಾಕರ್ ಸೇರಿದಂತೆ ಹಲವರು ಬಣ್ಣ ಹಚ್ಚಲಿದ್ದಾರೆ. ಇನ್ನೂ ಈ ಚಿತ್ರ ಪಕ್ಕ ಪ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿರಲಿದ್ದು , ಚಿತ್ರಕ್ಕೆ ಖ್ಯಾತ ಲಿರಿಕ್ ರೈಟರ್ ಮಂಜು ಕವಿ ಫಸ್ಟ್ ಟೈಮ್ ಅಕ್ಷನ್ ಕಟ್ ಹೇಳಲಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.