Skip to main content
ತಬಲ ನಾಣಿ ಯವರ ಹೊಸ ಅವತಾರ

ತಬಲ ನಾಣಿ ಯವರ ಹೊಸ ಅವತಾರ

ತಬಲನಾಣಿ ಯವರ ಹೊಸ ಅವತಾರ .

ತಬಲ ನಾಣಿ .

Present ಪ್ರಪಂಚದಲ್ಲಿ ಕರಿಯಪ್ಪ ಕಳೆದ ವರ್ಷ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿ ಕರಿಯಪ್ಪನ ಪಾತ್ರ ನಿರ್ವಹಿಸಿದ್ದ ತಬಲನಾಣಿ, present ಪ್ರಪಂಚ ೦% ಲವ್ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಿರ್ವಹಿಸಿದ್ದಾರೆ. ತಬಲನಾಣಿ ಯಾವ ಪಾತ್ರ ನಿರ್ವಹಿಸಿದ್ದಾರೆ ಎನ್ನುವ ಕುತೂಹಲಕ್ಕೆ ಉತ್ತರ ಚಿತ್ರ ಬಿಡುಗಡೆಯ ನಂತರ ಸಿಗುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ... ಫ್ರೆಂಡ್ಸ್ ಮೀಡಿಯಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೃಷ್ಣಮೂರ್ತಿ ಹಾಗೂ ರವಿಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ ಸಂಯುಕ್ತ ೨ ಚಿತ್ರವನ್ನು ನಿರ್ದೇಶಿಸಿದ್ದ ಅಭಿರಾಮ್ ಈ ಚಿತ್ರದ ನಿರ್ದೇಶಕರು. ರವಿತೇಜಸ್ವಿ ಸಂಗೀತ ನಿರ್ದೇಶನ, ಈಶ್ವರಿ ಸುರೇಶ್ ಛಾಯಾಗ್ರಹಣ, ವೆಂಕಿ ಸಂಕಲನ ಈ ಚಿತ್ರಕ್ಕಿದೆ.. ಕೆಮಿಸ್ಟ್ರಿ ಆಫ್ ಕರಿಯಪ್ಪ ಹಾಗೂ ಸಂಯುಕ್ತ ೨ ಚಿತ್ರಗಳ ನಿರ್ಮಾಪಕ ಅರ್ಜುನ್ ಮಂಜುನಾಥ್ ಈ ಚಿತ್ರದ ನಾಯಕ. ಯಶಸ್ ಅಭಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಭ್ರಮ ಶ್ರೀ, ಅಕ್ಷತ ಈ ಚಿತ್ರದ ನಾಯಕಿಯರು. ಸೆಂಟಿಮೆಂಟ್, ಕಾಮಿಡಿ, ಲವ್ ಹಾಗೂ ಕೌಟುಂಬಿಕ ಕಥಾಹಂದರವಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.