Skip to main content
‘ಪುನರ್ಜೀವ ಸಿಗಲಿದೆ’ ಭರತ್ ಬಾಲ ರಾಷ್ಟ್ರ ಮಟ್ಟದ ಕಿರು ಚಿತ್ರ

‘ಪುನರ್ಜೀವ ಸಿಗಲಿದೆ’ ಭರತ್ ಬಾಲ ರಾಷ್ಟ್ರ ಮಟ್ಟದ ಕಿರು ಚಿತ್ರ

‘ಪುನರ್ಜೀವ ಸಿಗಲಿದೆ’ ಭರತ್ ಬಾಲ ರಾಷ್ಟ್ರ ಮಟ್ಟದ ಕಿರು ಚಿತ್ರ.

Short film

ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಭರತ್ ಬಾಲ ಕಿರು ಚಿತ್ರ, ಸಾಕ್ಷ್ಯ ಚಿತ್ರ, ಕಮರ್ಷಿಯಲ್ಸ್, ಮ್ಯೂಜಿಕ್ ವಿಡಿಯೋಸ್, ಚಲನ ಚಿತ್ರಗಳ ನಿರ್ದೇಶಕ, ನಿರ್ಮಾಪಕ. ‘ವಂದೇ ಮಾತರಂ, ಜನ ಗನ ಮನ (ಎ ಆರ್ ರೆಹಮಾನ್ ಸಂಗೀತ್) ಇಂಕ್ರೆಡಿಬಲ್ ಇಂಡಿಯ ಹಾಗೂ ಇನ್ನಿತರ ಕಥಾ ವಸ್ತು ಆಯ್ಕೆಯಲ್ಲಿ ಪರಿಣಿತಿ ಪಡೆದಿರುವವರು ಈಗ ‘ಪುನರ್ಜೀವ ಸಿಗಲಿದೆ’ ಎಂಬ ಕಿರು ಚಿತ್ರವನ್ನು ರಾಷ್ಟ್ರ ಮಟ್ಟದಲ್ಲಿ ತಯಾರಿ ಮಾಡಿದ್ದಾರೆ. ಈ ಪುನರ್ಜೀವ ಸಿಗಲಿದೆ 9 ವಾರಗಳಿಂದ ಕೋವಿಡ್ 19 ಇಂದ ಕುಗ್ಗಿ ಹೋಗಿರುವ ಭಾರತೀಯರಿಗೆ ಒಂದು ಪ್ರೋತ್ಸಾಹದಾಯಕ ಕಿರು ಚಿತ್ರ. ಪ್ರತಿಯೊಬ್ಬರಿಗೆ ಜೀವನ ಮತ್ತೆ ಇದೆ ಕಂಗಾಲಾಗುವುದು ಬೇಡ ಎನ್ನುವುದು ಈ ಕಿರು ಚಿತ್ರದ ಉದ್ದೇಶ.

Kannada short film

ಭರತ್ ಬಾಲ 500 ಟಿ ವಿ ಕಮರ್ಷಿಯಲ್ ಸಹ ಮಾಡಿರುವವರು ಇವರ ಕೃತಿಗಳು ಕ್ಯಾನ್ಸ್ ಹಾಗೂ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಕಳೆದ ಮಾರ್ಚ್ 24 ರಿಂದ ಭಾರತ ಅಲ್ಲದೆ ವಿಶ್ವ ಮಟ್ಟದಲ್ಲೂ ಸಹ ಲಾಕ್ ಡೌನ್ ಸಂದರ್ಭ ಒದಗಿಬಂತು. ನಿರ್ಜನ ಪ್ರದೇಶ, ಶಾಂತವಾದ ಸ್ಥಳಗಳು, ಮುಚ್ಚಿದ ಅಂಗಡಿಗಳು, ಶಾಲೆ, ಕಾಲೇಜುಗಳು, ಆಫೀಸು, ಮಾಲ್ಸ್....ಹೀಗೆ ಅನೇಕ ಆನೆಪೇಕ್ಷಿತ ಸ್ಥಬ್ದತೆ ಕಂಡಿತು. ಭರತ್ ಬಾಲ ತಂಡ ಈ ಸಂದರ್ಭವನ್ನು ಸೆರೆ ಹಿಡಿದು ಶತಮಾನಗಳು ಕಳೆದರೂ ಈ ಘಳಿಗೆ ಮುಂದಿನ ಪೀಳಿಗೆಗೆ ತಿಳಿಯುವಂತೆ ಭಾರತದ 1.3 ಬಿಲಿಯನ್ ಜನರ ಭವಣೆಯನ್ನು ಹೇಳುವುದು ಉದ್ದೇಶ.

Short film kannada

ಇದಕ್ಕಾಗಿ ಭರತ್ ಬಾಲ ಅವರ 117 ಜನರ ತಂಡ ಭಾರತ ಸರ್ಕಾರದ ಅನುಮತಿ ಇಂದ ದೇಶದ 14 ರಾಜ್ಯಗಳ ಮೂಲೆ ಮೂಲೆಗೆ 15 ಸದಸ್ಯರ ತಂಡವನ್ನು ಕಳುಹಿಸಿ ಚಿತ್ರೀಕರಣ ಮಾಡಿದೆ. ಈ ಭೂ ಮಂಡಲದಲ್ಲಿ ಘಟಿಸಿರುವ ವಿಚಾರವನ್ನು ಕ್ಯಾಮರದಲ್ಲಿ ತುಂಬಲು ಕಾಶ್ಮೀರ್ ಇಂದ ಕನ್ಯಾಕುಮಾರಿ, ಗುಜರಾತ್ ಇಂದ ಅಸ್ಸಾಮ್ ವರೆಗೂ ಭರತ್ ಬಾಲ ತಂಡ ಕ್ರಮಿಸಿದೆ. ಮುಂಬೈ ಅಂತ ಮಹಾ ನಗರದಲ್ಲಿ ಮಾಸ್ಟೆರ್ ಕಂಟ್ರೋಲ್ ರೂಂ ಸ್ಥಾಪನೆ ಮಾಡಿ ಹಗಲಿರುಳು ಒಂದು ತಂಡ ಕ್ಯಾಮರಗಳಲ್ಲಿ ಸೆರೆ ಆದ ದೃಶ್ಯಗಳನ್ನು ವ್ಹಾಟ್ಸ್ ಅಪ್ ಅಥವಾ ವೀಡಿಯೋ ಕಾಲ್ ಮುಖಾಂತರ ರವಾನಿಸಿದೆ.

Kannada short film

ಈ ಸಂದರ್ಭದಲ್ಲಿ ಭರತ್ ಬಾಲ ತಂಡಕ್ಕೆ ತಂತ್ರಜ್ಞಾನದ ಉಪಯೋಗ ಸಹಾಯಕ್ಕೆ ಬಂದಿದೆ. ಪುನರ್ಜೀವ ಸಿಗಲಿದೆ (ವಿ ವಿಲ್ ರೈಸ್) ಒಂದು ಆಶಾದಾಯಕ ಪ್ರಯತ್ನ 4 ನಿಮಿಷದಲ್ಲಿ ಕಟ್ಟಿ ಕೊಡುವ ಕಿರು ಚಿತ್ರ. ಇಲ್ಲಿ ತಂಡ ಅನುಭವಿಸದ ಸಂದರ್ಭಗಳು ಅನೇಕ ಆದರೆ, ಮಾನವೀಯತೆಯ ಪ್ರದರ್ಶನ ಕ್ಯಾಮರದಲ್ಲಿ ತುಂಬಲಾಗಿದೆ. ಕೆಲವು ಬೆಕ್ಕಸ ಬೆರಗಾಗುವ ಕ್ಷಣಗಳು ಸಹ ಭರತ್ ಬಾಲ ತಂಡಕ್ಕೆ ಲಭ್ಯವಾಗಿದೆ. ಎಂದಿಗೂ ಕಂಡು ಕೇಳರಿಯದ ಈ ಕೋವಿಡ್ 19 ಇಂದ ಆಗಿರುವ ಅನಾಹುತ ಇಂದ ಭಾರತ ದೇಶದ ಉದ್ದಗಲಕ್ಕೂ ‘ಪುನರ್ಜೀವ ಸಿಗಲಿದೆ’ ಲಾಕ್ ಡೌನ್ ಸಮಯವನ್ನು ಮೆಟ್ಟಿ ನಿಂತ ಭಾರತೀಯರಿಗೆ ಬೆಳಕಿನ ಜ್ಯೋತಿ ಇನ್ನೂ ಆರಿಲ್ಲ ಎಂದು ಪ್ರೋತ್ಸಾಹ ಹೇಳುವುದು ಆಗಿದೆ. ‘ಪುನರ್ಜೀವ ಸಿಗಲಿದೆ’ ಇದೆ ಜೂನ್ 6 ರಿಂದ 13 ಜೂನ್ 2020 ವರೆಗೂ ಎಲ್ಲ ಡಿಜಿಟಲ್ ವ್ಯವಸ್ಥೆಗಳಲ್ಲಿ ಲಭ್ಯವಿರಲಿದೆ. ಇದು ಟೀಮ್ ವರ್ಚ್ಯುಯಲ್ ಭಾರತ್ ಸಂಸ್ಥೆಯ ನಿರ್ಮಾಣ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.