Skip to main content
ಕ್ರಿಸ್ಮಸ್ ದಿನ‌ ಬೈ ಟೂ ಲವ್ ಚಿತ್ರಕ್ಕೆ ಚಾಲನೆ.

ಕ್ರಿಸ್ಮಸ್ ದಿನ‌ ಬೈ ಟೂ ಲವ್ ಚಿತ್ರಕ್ಕೆ ಚಾಲನೆ.

ಕ್ರಿಸ್ಮಸ್ ದಿನ‌ ಬೈ ಟೂ ಲವ್ ಚಿತ್ರಕ್ಕೆ ಚಾಲನೆ.

Kannada new film

ಹರಿ ಸಂತೋಷ್ ನಿರ್ದೇಶನದ ಚಿತ್ರದಲ್ಲಿ ಧನ್ವೀರ್ - ಶ್ರೀಲೀಲಾ ನಾಯಕ - ನಾಯಕಿ.

ಕೊರೋನ ಕಾರ್ಮೋಡ ಸರಿದು, ಎಲ್ಲೆಡೆ ಉತ್ಸಾಹ ಮರುಕಳಿಸುತ್ತಿದೆ. ಇದಕ್ಕೆ ಕನ್ನಡ ಚಿತ್ರರಂಗ ಕೂಡ ಹೊರತಲ್ಲ. ಒಂದರ ಹಿಂದೆ ಒಂದು ನೂತನ ಸಿನಿಮಾಗಳು ಆರಂಭವಾಗುತ್ತಿದೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ 'ಬೈ ಟೂ ಲವ್' . ಕ್ರಿಸ್ಮಸ್ ಹಬ್ಬದ ದಿನ ಈ ಚಿತ್ರದ ಮುಹೂರ್ತ ಸಮಾರಂಭ ಶ್ರೀ ಬಂಡಿಮಹಾಂಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಕಾಶ್ವಿ ವೆಂಕಟ್ ಆರಂಭ ಫಲಕ ತೋರಿದರು. ಸಿದ್ದು ವೆಂಕಟ್ ಕ್ಯಾಮೆರಾ ಚಾಲನೆ ಮಾಡಿದರು. ಹರಿ ಸಂತೋಷ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಬಜಾರ್ ಖ್ಯಾತಿಯ ಧನ್ವೀರ್ ನಟಿಸುತ್ತಿದ್ದಾರೆ.

ಬೆಡಗಿ ಶ್ರೀಲೀಲಾ ಈ ಚಿತ್ರದ ನಾಯಕಿ. ಸಾಧುಕೋಕಿಲ, ಅಚ್ಯುತಕುಮಾರ್, ಶಿವರಾಜ್ ಕೆ ಆರ್ ಪೇಟೆ ಮುಂತಾದವರ ತಾರಾಬಳಗ ಬೈ ಟೂ ಲವ್ ನಲ್ಲಿದೆ. ಇದು ಹರಿ ಸಂತೋಷ್ ನಿರ್ದೇಶನದ 9 ನೇ ಚಿತ್ರ. ಕೆ.ವಿ.ಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿಶಾ ವೆಂಕಟ್ ಹಾಗೂ ಸುಪ್ರೀತ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬೈ ಟೂ ಲವ್ ಈ ಸಂಸ್ಥೆ ನಿರ್ಮಾಣದ ಮೂರನೇ ಚಿತ್ರ.

ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ. ಜನವರಿ 4 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಈಗಾಗಲೇ ಹೆಚ್ ಎಂ ಟಿ ಬಳಿ ಅದ್ದೂರಿ ಸೆಟ್ ನಿರ್ಮಾಣವಾಗುತ್ತಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.