Skip to main content
ಹೀಗೊಂದು ದಿನದ ಸಾಂಗ್ ಕಂಪೋಸರ್........ಅಭಿಲಾಶ್ ಗುಪ್ತ.

ಹೀಗೊಂದು ದಿನದ ಸಾಂಗ್ ಕಂಪೋಸರ್........ಅಭಿಲಾಶ್ ಗುಪ್ತ.

ಹೀಗೊಂದು ದಿನದ ಸಾಂಗ್ ಕಂಪೋಸರ್........ಅಭಿಲಾಶ್ ಗುಪ್ತ.

ಹೀಗೊಂದು ದಿನದ ಸಾಂಗ್ ಕಂಪೋಸರ್........ಅಭಿಲಾಶ್ ಗುಪ್ತ.

ಬೆಂಗಳೂರಿನ ಜೆಪಿನಗರದಿಂದ ಕನ್ನಡಕ್ಕೆ ಯುವ ಪ್ರತಿಭಾನ್ವಿತ ಸಂಗೀತ ನಿರ್ದೇಶಕರಾಗಿ ಅಭಿಲಾಶ್ ಗುಪ್ತ ಲಗ್ಗೆ ಇಟ್ಟಿದ್ದಾರೆ. ಸಾಗರದಷ್ಟು ಆಳವಿರುವ ಸಂಗೀತ ಅನ್ನೋ ಕ್ಷೇತ್ರದಲ್ಲಿ , ಮ್ಯೂಸಿಕ್ ಕಂಪೋಸರ್, ಹಾಡುಗಾರ ಸಾಹಿತ್ಯ ಬರಹಗಾರ ಬಹು ಮುಖಿ ಪ್ರತಿಭೆಯಾಗಿ ಕಾಣಿಸಿಕೊಳ್ಳುತ್ತಿರುವ ಹೊಸ ಪ್ರತಿಭೆ ಅಭಿಲಾಶ್ ಗುಪ್ತ. ಚಿಕ್ಕಂದಿನಿಂದಲೂ ಸಂಗೀತದಲ್ಲಿ ಶ್ರದ್ದೆ ಇಟ್ಟು “ಕರ್ನಾಟಕ ಕೋಳಲು ಶಾಸ್ತ್ರಿಯ” ಸಂಗೀತ, “ಹಿಂದೂಸ್ತಾನಿ ಶಾಸ್ತ್ರಿಯ” ಸಂಗೀತವನ್ನು ಕಲಿತ ಇವರು ಹಿನ್ನೆಲೆ ಗಾಯಕರಲ್ಲದೆ, ಗಿಟಾರ್, ಕೀಬೋರ್ಡ್ ಗಳಂತಹ ಮ್ಯೂಸಿಕ್ ವಾಧ್ಯಗಳನ್ನೂ ನುಡಿಸಬಲ್ಲ ಪ್ರತಿಭೆ ಇವರದು. ಮ್ಯೂಸಿಕ್ ಜೊತೆಗೆ ಇಂಜಿನಿಯರಿಂಗ್ ಇನ್ ಕಂಪ್ಯೂಟರ್ ಸೈನ್ಸ್ ಅಭ್ಯಾಸ ಮುಗಿಸಿ ಖಾಸಗಿ ಕಂಪನಿ ಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ಅಭಿಲಾಶ್ ಗುಪ್ತ ಅವರ ಮನಸ್ಸು ಮಾತ್ರ ಸಂಗೀತದ ಕಡೆ ಸೆಳೆಯುತಿತ್ತು. ಇವರು ಪ್ರಸಿದ್ದ ಹಿನ್ನೆಲೆ ಗಾಯಕರದ ಮಂಜುಳಾ ಗುರುರಾಜ್ ಅವರ ವಿದ್ಯಾರ್ಥಿಯಾಗಿ ಸಂಗೀತ ಅಭ್ಯಾಸ ಮಾಡಿದ್ದಾರೆ. ಇದುವರೆಗು ಹಲವಾರು ಸಂಗೀತ ಪ್ರದರ್ಶನಗಳನ್ನು ನಡೆಸಿಕೊಟ್ಟಿದ್ದಾರೆ, ಅಲ್ಲದೇ “ಜಿಂಗಲ್ಸ್ ವಾಯ್ಸ್ ಒವರ್ ಗಳು ವಿಶೇಷವಾಗಿ ಕನ್ನಡದ ಕೋಕೋ ತೆಲುಗು, ಹೆಚ್ಚಾಗಿ ಹಿಂದಿ ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ.

ಸಂಗೀತ ಬಗ್ಗೆ ಆಸಕ್ತಿ…….

ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಅಭಿಲಾಶ್ ಗುಪ್ತ ಸಂಗಿತ ನಿರ್ದೇಶನಕ್ಕಿಂತ ಒಬ್ಬ ದೊಡ್ಡ ಹಿನ್ನೇಲೆ ಗಾಯಕರಾಗ ಬೇಕೆಂಬ ಹಂಬಲ ಹೊಂದಿದ್ದಾರೆ. ಈಗಾಗಲೆ ಸ್ವತಹ ತಾವೇ “ಹೀಗೊಂದು ದಿನ” ಚಿತ್ರಕ್ಕೆ ಸಂಗಿತ ನಿರ್ದೇಶನಮಾಡಿ ಕೇಳುಗರಿಂದ ಸೈ ಎನಿಸಿಕೊಂಡಿದ್ದು, ಮೆಲೋಡಿ ಆಧಾರಿತ ಸಂಗೀತಕ್ಕೆ ಹೆಚ್ಚು ಒಲವು ತೋರುವ ಇವರು, ಸಂಗೀತ ಕ್ಷೇತ್ರದಲ್ಲಿ ಹೊಸ ಟ್ರೆಂಡ್ ಗೆ ಇಷ್ಟವಾಗುವ ಹಾಡುಗಳನ್ನು ನಿಡಬೇಕಾಗಿದೆ ಎನ್ನುತ್ತಾರೆ ಅಭಿಲಾಶ್ ಗುಪ್ತ. ಸಂಗೀತ ಕ್ಷೇತ್ರದಲ್ಲಿನ ಸಾಧಕರುಗಳ ಜೊತೆ ಕೆಲಸ ಮಾಡಿರುವ ಇವರು ಎ ಆರ್ ರೆಹಮಾನ್ ನವರ ಜೊತೆ ಕೆಲಸ ಮಾಡುವ ಮಹದಾಸೆ ಹೊಂದಿದ್ದಾರೆ.

ಮ್ಯೂಸಿಕ್ ಕಂಪೋಸಿಂಗ್ ಮತ್ತು ಹಿನ್ನೆಲೆ ಗಾಯನ..

ಹೀಗೊಂದು ದಿನದ ಸಾಂಗ್ ಕಂಪೋಸರ್........ಅಭಿಲಾಶ್ ಗುಪ್ತ.

 

ಸಂಗೀತವೇ ನನ್ನ ಉಸಿರು, ಎನ್ನುವ ಅಭಿಲಾಶ್ ಗುಪ್ತ ಸಂಗೀತದಲ್ಲಿಯೇ ಸಾಧನೆ ಮಾಡಬೇಕು ಅಷ್ಟೇ ಅಲ್ಲದೇ ಜನರಿಗೆ ಇಷ್ಷವಾಗುವ ಸಂಗೀತವನ್ನು ಸಂಯೋಜಿಸ ಬೇಕು ಎನ್ನುತ್ತಾರೆ. ಇತ್ತಿಚಿಗೆ ಸಂಗೀತದಲ್ಲಿ ತನ್ನದೇ ಆದ ಒಂದು ಟ್ರೆಂಡ್ ಹುಟ್ಟು ಹಾಕುತ್ತಿರುವ ರಪ್ಯಾರ್ ಸಾಂಗ್ ಗಳು ಜನರಿಗೆ ಇಷ್ಟವಾದ್ರೇ ಅಂತಹ ಪ್ರಯತ್ನವನ್ನು ಕೂಡ ಮಾಡುತ್ತೇನೆ ಎನ್ನುತ್ತಾರೆ. ಕರ್ನಾಟಕ ಸಂಗೀತವನ್ನು ಬಳಸಿ ಪಾಶ್ಚಾತ್ಯ ಸಂಗೀತಕ್ಕೆ ಹೊಸ ಆಯಾಮದ ಮ್ಯೂಸಿಕ್ ಕಂಪೋಸಿಂಗ್ ಮಾಡುವ ಪ್ರಯತ್ನಮಾಡುತ್ತಿದ್ದಾರೆ. ನಾಧಬ್ರಹ್ಮ ಹಂಸಲೇಖ, ಹಿನ್ನೆಲೆ ಗಾಯಕರಾದ ವಿಜಯ್ ಪ್ರಕಾಶ್ , ಅರ್ಜುನ್ ಜನ್ಯ ಅವರ ಜೊತೆ ಕೂಡ ಕೆಲಸ ಹಂಬಲ ಹೊಂದಿದ್ದಾರೆ.

ಪ್ರತಿಯೊಬ್ಬ ಯಶಸ್ವಿ ವ್ಯಕ್ತಿ ,ಸಾಧಕರ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುತ್ತಾರೆ ಆದರೆ ಗುಪ್ತ ಅವರ ಸಾಧನೆಯ ಹಿಂದೆ ಇಬ್ಬರು ಮಹಿಳೆಯರು ಇದ್ದಾರೆ, ಅದು ತಮ್ಮ ಸಂಗೀತದ ಸಾಧನೆಗೆ ಸ್ಪೂರ್ತಿಯಾಗಿ ತಾಯಿಯಾದರೆ, ಮತ್ತು ಬೆನ್ನೆಲುಬಾಗಿ ಪತ್ನಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಹಿಂದಿಯಲ್ಲಿ ಎರಡು ಚಿತ್ರಗಳು ಮತ್ತು ಕನ್ನಡದಲ್ಲಿ ಎರಡು ಹೊಸ ಚಿತ್ರಗಳು ಇವರ ಕೈಯಲ್ಲಿ ಇವೆ ಅಲ್ಲದೇ ಕೆಲವು ನಿರ್ದೇಶಕರು ತಮ್ಮ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಲು ಅಹ್ವಾನಿಸಿದ್ದಾರೆ .ಇವರ ಮುಂದಿನ ಚಿತ್ರದ ಹಾಡುಗಳು ಜನರಿಗೆ ಮೇಚ್ಚುಗೆಯಾಗಿ ಇವರ ಸಂಗೀತ ಪಯಣ ಮುಂದೇ ಸಾಗಲಿ ಎಂದು ಹಾರೈಕೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.