Skip to main content
ಪುನೀತ್ ಮನೆಗೆ ತಮಿಳು ನಟ ಶಿವಕಾರ್ತಿಕೇಯನ್ ಭೇಟಿ ನೀಡಿ ಸಂತ್ವಾನ್.

ಪುನೀತ್ ಮನೆಗೆ ತಮಿಳು ನಟ ಶಿವಕಾರ್ತಿಕೇಯನ್ ಭೇಟಿ ನೀಡಿ ಸಂತ್ವಾನ್.

ಪುನೀತ್ ಮನೆಗೆ ತಮಿಳು ನಟ ಶಿವಕಾರ್ತಿಕೇಯನ್ ಭೇಟಿ ನೀಡಿ ಸಂತ್ವಾನ್.

Kannada new film

ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ನಟ ಶಿವಕಾರ್ತಿಕೇಯನ್.

* ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನಕ್ಕೆ ಕರ್ನಾಟಕ ಮಾತ್ರವಲ್ಲ ದೇಶದ ಇತರ ರಾಜ್ಯಗಳು ಮತ್ತು ವಿಶ್ವದ ಇತರ ದೇಶಗಳಿಂದಲೂ ವಿಷಾದ ವ್ಯಕ್ತವಾಗುತ್ತಿದೆ. ಅಭಿಮಾನಿಗಳಿ ತಮ್ಮ ನೆಚ್ಚಿನ ನಟನ ಅಕಾಲಿಕ ಮರಣದ ಬಗ್ಗೆ ಶೋಕ ವ್ಯಕ್ತಪಡಿಸಿದ್ದಾರೆ.

ದೇಶದ ಬಹುತೇಕ ಎಲ್ಲ ಪ್ರಮುಖ ತಾರೆಯರು ಬೆಂಗಳೂರಿಗೆ ಬಂದು ಪುನೀತ್ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಇಂದು‌ ತಮಿಳು ಖ್ಯಾತ ನಟ ಶಿವಕಾರ್ತಿಕೇಯನ್ ಬೆಂಗಳೂರಿಗೆ ಆಗಮಿಸಿ‌ ನಾಗವಾರದಲ್ಲಿರುವ ಶಿವಣ್ಣನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ನಂತರ ಪುನೀತ್ ಅವರ ಸದಾಶಿವನಗರದಲ್ಲಿರುವ ಮನೆಗೆ ಭೇಟಿ ನೀಡಿ ಪುನೀತ್ ಪತ್ನಿ ಅಶ್ವಿನಿ‌ಯವರಿಗೆ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲಿಂದ ನೇರವಾಗಿ ಕಂಠೀರವ ಸ್ಟುಡಿಯೊಗೆ ತೆರಳಿ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ತಮಿಳು ಚಿತ್ರರಂಗದ ಖ್ಯಾತ ನಟ ಎಸ್. ಕೆ ಶಿವಕಾರ್ತಿಕೇಯನ್. ಪುನೀತ್ ನಮ್ಮ ಜೊತೆಗೆ ಇಲ್ಲ ಅನ್ನೋದ್ದನ್ನ ನಂಬಕ್ಕೆ ಸಾಧ್ಯವಾಗ್ತಿಲ್ಲ. ಪುನೀತ್ ಒಬ್ಬ ಅದ್ಭುತ ನಟರಾಗಿದ್ದರು. ಈಗಲೂ ಕೂಡ ನಾವು ಶಾಕ್‌ನಲ್ಲಿಯೇ ಇದ್ದೇವೆ, ಅದರಿಂದ ಹೊರಗೆ ಬರೋಕೆ ಆಗ್ತಿಲ್ಲ. ನಾನು ಒಂದು ತಿಂಗಳ ಹಿಂದಷ್ಟೇ ಪುನೀತ್ ಜೊತೆ ಮಾತನಾಡಿದ್ದೆ.

ನನ್ನ ಚಿತ್ರಗಳಿಗೆ ಅವರು ವಿಶ್ ಮಾಡಿದ್ರು, ಅವರನ್ನು ಕಳೆದುಕೊಂಡಿದ್ದು ಇಡೀ ಸಿನಿಮಾ ರಂಗಕ್ಕೆ ಒಂದು ದೊಡ್ಡ ಲಾಸ್. ಆದ್ರೆ ಅವರು ಎಲ್ಲರ ಮನಸ್ಸಿನಲ್ಲೂ ಸದಾ ಚಿರಾಯು. ಅವರು ಎಲ್ಲಾ ನಟರಿಗೆ ದೊಡ್ಡ ಸ್ಪೂರ್ತಿ. ಅವರದು ತುಂಬಾ ಒಳ್ಳೆಯ ಮನಸ್ಸು ಎಲ್ಲರನ್ನೂ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ರು. ಅವರೊಬ್ಬ ಅತ್ಯದ್ಭುತ ನಟ ಅವರ ನಿಧನ ಬಹಳ ನೋವು ತಂದಿದೆ. ನನ್ನ ಡಾಕ್ಟರ್ ಸಿನಿಮಾ ನೋಡಿ‌ ಪುನೀತ್ ಮತ್ತು ಶಿವಣ್ಣ ಇಬ್ಬರೂ ವಿಶ್ ಮಾಡಿದ್ದರು. ಅವಾರ್ಡ್ ಕಾರ್ಯಕ್ರಮದಲ್ಲಿ ನಾನು ಪುನೀತ್ ಅವರನ್ನ ಭೇಟಿಯಾಗಿದ್ದೆ. ಬಹಳಷ್ಟು ಸಾರಿ ನಾನು ಅವರ ಜೊತೆ ಫೋನಿನಲ್ಲಿ ಮಾತನಾಡಿದ್ದೇನೆ ಬಹಳ ಸರಳ ವ್ಯಕ್ತಿತ್ವ ಅವರದು, ಬೆಂಗಳೂರಿಗೆ ಬಂದ್ರೆ ತಪ್ಪದೇ ಮನೆಗೆ ಬರುವಂತೆ ಆಹ್ವಾನಿಸಿದ್ರು. ಆದರೆ ಅವರನ್ನು ಬಂದು ಭೇಟಿ ಮಾಡಲು ಸಾಧ್ಯವೆ ಆಗಲಿಲ್ಲ. ಇಂದು ನಾನು ಅವರನ್ನ ಭೇಟಿಯಾಗಲು ಬಂದ್ರೆ ಅವರೇ ಇಲ್ಲ. ನಮ್ಮ ಮನದಲ್ಲಿ ಯಾವತ್ತು ಅವರು ಇರ್ತಾರೆ. ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ.

ಅಂಥದರಲ್ಲಿ ಅಭಿಮಾನಿಗಳು ಕುಟುಂಬದವರು ಹೇಗೆ ನಂಬುತ್ತಾರೆ. ಅವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಟ ಕಾರ್ತಿಕೇಯನ್ ಹೇಳಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.