ರಾಜ್ಯದ ಚುನಾವಣೆಯ ದಿನಾಂಕ ಪ್ರಕಟ . ಇಂದಿನಿಂದ ನೀತಿ ಸಂಹಿತೆ ಜಾರಿ.
ರಾಜ್ಯದ ಚುನಾವಣೆಯ ದಿನಾಂಕ ಪ್ರಕಟ . ಇಂದಿನಿಂದ ನೀತಿ ಸಂಹಿತೆ ಜಾರಿ.
ರಾಜ್ಯದಲ್ಲಿ ಇವತ್ತಿನಿಂದ ಚುನಾವಣೆಯ ಹಬ್ಬ ಪ್ರಾರಂಭ,ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಅಂಚಿಕೆಯ ಲೆಕ್ಕಾಚಾರ ಶುರು, ಈಗಾಗಲೆ ಬಹು ನೀರಿಕ್ಷಿತ ವಿಧಾನಸಭಾ ಚುನಾವಣೆಗಾಗಿ ಎಲ್ಲ ಪಕ್ಷಗಳ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪ್ರಚಾರದಲ್ಲಿ ಬಾಗಿಯಾಗಿ ಜನರ ಮೇಚ್ಚುಗೆ ಪಡೆಯುವ ಕಸರತ್ತನ್ನ ನಡೆಸುತ್ತೀರುವ ರಾಜಕೀಯ ಪಕ್ಷಗಳಿಗೆ ಕೋನೆಗೂ ಚುನಾವಣೆ ವೇದಿಕೆ ಸಿದ್ದವಾಗಿದೆ. ಇದರ ಹೊರತಾಗಿ ಚುನಾವಣಾ ಅಯೋಗ ದಿನಾಂಕ ಪ್ರಕಟಿಸಿದ ಬೇನಲ್ಲೆ ಇಂದಿನಿಂದ ಅಂದರೆ ದಿನಾಂಕ ಮಾರ್ಚ್ 27 ನೀತಿ ಸಂಹಿತೆ ಜಾರಿಯಲ್ಲಿದೆ.
ಏನಿದು ನೀತಿ ಸಂಹಿತಿ ಜಾರಿ:
ಭಾರತ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆಯ ಪ್ರಕಾರ ರಾಜ್ಯದಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ಮುಕ್ತವಾಗಿ ನಡೆಸುವ ನಡೆಸುವ ಉದ್ದ್ದೇಶ ದಿಂದ ಕೇಲವೊಂದು ನೀತಿಗಳನ್ನು ಜಾರಿ ಗೊಳಿಸಿದ್ದಾರೆ.ಅಂತಹವುಗಳಲ್ಲಿ ಆಯಾ ವಿದಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈಗಾಗಲೆ ಬ್ಯಾನರ್,ಪೋಸ್ಟರ್,ಬಂಟಿಂಗ್ಸ್ ಗಳನ್ನು ಕಾಯ್ದೆ 1981ರ ಪ್ರಕಾರ ಕೂಡಲೆ ಇಂತಹ ಬ್ಯಾನರ್ ಮತ್ತು ಪೋಸ್ಟ್ ರಗಳನ್ನ ತೆಗೆದು ಹಾಕಲು ಕ್ರಮ ಕೈಗೋಳ್ಳಲಾಗುವುದು. 1.ಇತರೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ,ಬಸ್ ನಿಲ್ದಾಣಗಳಲ್ಲಿ ಹಾಗೂ ಸ್ವಾಗತ ಕಮಾನುಗಳಲ್ಲಿ ಪ್ರಕಟಿಸಿರುವ ರಾಜಕೀಯ ಪಕ್ಷಗಳ ಎಲ್ಲಾ ವ್ಯಕ್ತಿಗಳ ಭಾವಚಿತ್ರಗಳನ್ನು ಕಾಣಿಸದಂತೆ ಕ್ರಮಕೈಗೊಳ್ಳುವುದು. 2.ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳ ಮೇಲೆ ಸಂಘನೆಗಳು ಬರೆಸಿರುವಂತಹ ಹೆಸರುಗಳನ್ನು ಬಣ್ಣ ಹೊಡೆದು ಕಾಣದಂತೆ ಕ್ರಮಗೊಳ್ಳುವುದು. 3. ಸಕಾಲ ಯೋಜನೆಯಡಿ ಮತ್ತು ಇತರೆ ಎಲ್ಲಾ ಇಲಾಖೆಯ ಸರ್ಕಾರಿ ಯೋಜನೆಯಡಿ ಹಾಕಲಾದ ಬ್ಯಾನರ್,ಪೋಸ್ಟರ್ ಮತ್ತು ಕಟೌಟ್ ಗಳನ್ನು ಮತ್ತು ಕಛೇರಿ ,ಸರ್ಕಾರಿ ಕಛೇರಿ ಹಾಗೂ ಇತರ ಸ್ಥಳಗಳಲ್ಲಿ ಹಾಕಿರುವ ಎಲ್ಲಾ ಬಂಟಿಂಗ್,ಬ್ಯಾನರ್ ,ಪೋಸ್ಟ್ ರಗಳನ್ನು,ಮತ್ತು ಕಟೌಟ್ ಗಳನ್ನು ಕೂಡಲೇ ವ್ಯವಸ್ಥೆ ಮಾಡುವುದು.
Recent comments