Skip to main content
ಮನರೂಪ ಸಿನಿಮಾಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳ ಸುರಿಮಳೆ.

ಮನರೂಪ ಸಿನಿಮಾಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳ ಸುರಿಮಳೆ.

ಮನರೂಪ ಸಿನಿಮಾಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳ ಸುರಿಮಳೆ.

Mnaroopa Peime film

ಟರ್ಕಿಯ ಇಸ್ತಾನ್ ಬುಲ್ ಫಿಲ್ಮ್ ಅವರ್ಡ್ಸ್ ಚಿತ್ರೋತ್ಸವದಿಂದ ಮನರೂಪ ಸಿನಿಮಾಕ್ಕೆ 4 ಪ್ರಶಸ್ತಿಗಳ ಸುರಿಮಳೆ ಮಿಲೇನಿಯಲ್ ಎಂದು ಕರೆಯುವ ಯುವ ಪೀಳಿಗೆಯ ಅಸ್ವಸ್ಥ ಮನಸುಗಳು ಕತೆ. ಬೆಂಗಳೂರು, ಮರ್ಚ್ 30 2020 :ಅಮೇಜಾನ್ ಪ್ರೆಮ್ ನಲ್ಲಿ ತಾಳ್ಮೆಯಿಂದ ನೋಡಬಯಸುವ ಪ್ರೇಕ್ಷಕರಿಗೆ ಇಷ್ಟ ವಾಗುತ್ತಿರುವ ಮನರೂಪ ಸಿನಿಮಾಗೆ ಅಂತರರಾಷ್ಟ್ರೀಯ ಪ್ರಶಸ್ತಿಗಳ ಸುರಿಮಳೆಯಾಗುತ್ತಿದೆ. ಟರ್ಕಿ ದೇಶದ ಇಸ್ತಾನ್ ಬುಲ್ ಫಿಲ್ಮ್ ಅವಾರ್ಡ್ಸ್ ಚಲನಚಿತ್ರೋತ್ಸವದಲ್ಲಿ 4 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಅತ್ಯುತ್ತಮ ವಿದೇಶಿ ಚಲನಚಿತ್ರ ಪ್ರಶಸ್ತಿ.ಅತ್ಯುತ್ತಮ ಥ್ರೀಲ್ಲರ್ ಚಲಚಿತ್ರ ಪ್ರಶಸ್ತಿ ಅತ್ಯುತ್ತಮ ಕಲ್ಟ್ ಚಲನಚಿತ್ರ ಪ್ರಶಸ್ತಿ ಮತ್ತು ಚಿತ್ರದ ಸಂಗೀತ ನಿರ್ದೇಶಕ ಪ್ರಶಸ್ತಿಗಳನ್ನು ನೀಡಲಾಗಿದೆ.ನಾರ್ಸೀಸಿಸಂ ಮತ್ತು ಒಂಟಿತನದ ಹಿನ್ನೆಲೆಯನ್ನಿಟ್ಟುಕೊಂಡು ಕಿರಣ್ ಹೆಗೆಡೆ ನಿರ್ಮಾಣ ಮತ್ತು ನಿರ್ದೇಶನವಿರುವ ಮನರೂಪ ಚಿತ್ರಕ್ಕೆ ಇತ್ತೀಚೆಗಷ್ಟೇ ಇರಾನಿ ಕೆಫೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಿಂದ “ಅತ್ಯುತ್ತಮ ಪ್ರಯೋಗಾತ್ಮಕ ಚಲನಚಿತ್ರ ಪ್ರಶಸ್ತಿ ಮತ್ತು ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಸರವಣ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗಳನ್ನು ನೀಡಲಾಗಿದೆ.ನಾರ್ಸೀಸಿಸಂ ಮತ್ತು ಒಂಟಿತನದ ಹಿನ್ನೆಲೆಯನ್ನಿಟ್ಟುಕೊಂಡು ಕಿರಣ್ ಹೆಗೆಡೆ ನಿರ್ಮಾಣ ಮತ್ತು ನಿರ್ದೇಶನವಿರುವ ಮನರೂಪ ಚಿತ್ರಕ್ಕೆ ಇತ್ತೀಚೆಗಷ್ಟೇ ಇರಾನಿ ಕೆಫೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಿಂದ “ಅತ್ಯುತ್ತಮ ಪ್ರಯೋಗಾತ್ಮಾಕ ಚಲನಚಿತ್ರ “ ಪ್ರಶಸ್ತಿ ದೊರಕಿತ್ತು.ಇದೀಗ ಮತ್ತೆ ಟರ್ಕಿ ದೇಶದ ಚಲನಚಿತ್ರೋತ್ಸವವೊಂದು ಮನರೂಪ ಚಿತ್ರದ ಕಲಾತ್ಮಕತೆ ಮತ್ತು ಚಿತ್ರದ ಆಂತರ್ಯವನ್ನು ಗುರತಿಸಿ ನಾಲ್ಕು ಪ್ರಶಸ್ತಿಗಳನ್ನು ನೀಡಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

manaroopa

ಇಸ್ತಾನ್ ಬುಲ್ ಫಿಲ್ಮ್ ಅವಾರ್ಡ್ಸ್ ಚಿತ್ರೋತ್ಸವ ಮನರೂಪ ಬಗ್ಗೆ ಹೀಗೆ ಹೇಳಿದೆ ನಿರ್ದೇಶಕ ಕಿರಣ್ ಹೆಗೆಡೆ ತಮ್ಮ ಹಳ್ಳಿಯ ಪರಿಸರ ಮತ್ತು ಅರಣ್ಯದಲ್ಲಿ ಚಿತ್ರಕರಿಸಿದ್ದಾರೆ.ಚಿತ್ರದ ಕಲಾತ್ಮಕತೆಯಲ್ಲಿ ತೀವ್ರವಾದ ಅಸ್ವಸ್ಥವಾದ, ವಿಕ್ಷೀಪ್ತವಾದ ಭಾವಗಳನ್ನು ಕುಟುಂಬ ಮತ್ತು ಒಂಟಿತನದ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ.ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಗಮನ ಸೆಳೆದಿದ್ದಾರೆ”.ಮನರೂಪವನ್ನು ಕಲ್ಟ್ ಚಿತ್ರ ಎಂದು ಚಿತ್ರೋತ್ಸವದ ಜ್ಯೂರಿಗಳು ತಿಳಿಸಿದ್ದಾರೆ” ನಮ್ಮ ಚಿತ್ರತಂಡದ ಪ್ರಯತ್ನ ಮತ್ತು ಸಹಕಾರಕ್ಕೆ ಎಲ್ಲಾ ನಟಿಯರು ಮತ್ತು ತಂತ್ರಜ್ಞರಿಗೆ ಕೃತಜ್ಞತೆಗಳು ನಾಲ್ಕು ಅವಾರ್ಡ್ಸ್ ಬಂದಿದ್ದು ಖುಷಿ ತಂದಿದೆ. ಮನರೂಪ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ನಾನು ಹೇಳುವುದಿಲ್ಲ.ಒಂಟಿತನ ಉದ್ದೇಶವಿಲ್ಲದ ನಿರರ್ಥಕತೆಯಲ್ಲಿ ಅಲೆಯುವುದು,ಹಿಂಸಿಸುವುದು ಅದನ್ನೇ ಬಂಡವಾಳ ಮಾಡಿಕೊಳ್ಳುವುದು ಮನರೂಪ ಚಿತ್ರದಲ್ಲಿ ತೋರಿಸಿದ್ದೇನೆ. ಅನೇಕ ಸೀನ್ ಗಳು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಿದರೂ,ಒಂಟಿತನ ಮತ್ತು ನಿರರ್ಥಕ ಭಾವವನ್ನು ತೋರಿಸಲು ನಿಧಾನಗತಿಯಲ್ಲಿ ಚಿತ್ರವನ್ನು ರೂಪಿಸಲಾಗಿದೆ.ಮನರೂಪದಲ್ಲಿ ಕುಟುಂಬದಿಂದ ಮತ್ತು ತಂದೆ-ತಾಯಿಯರ ಪ್ರೀತಿಯಿಂದ ವಂತಿತವಾದ ಮಕ್ಕಳು ಹಿಂಸಾತ್ಮಕ ಪ್ರತಿಕ್ರಿಯೆ ಇದೆ.ಅನೇಕ ಪ್ಲಾಟ್ ಗಳು ಅಸಂಗತವಾಗೇ ಇರುತ್ತವೆ.

manaroopa

ಮನರೂಪ ಆಕರ್ಷಣೆಗಳು ಕಿರಣ್ ಹೆಗೆಡೆ ಅವರ ವಿಭಿನ್ನ ಕಥೆ ಮತ್ತು ನಿರೂಪಣೆ,ಗೋವಿಂದರಾಜ್ ಅವರ ಕ್ಯಾಮೆರಾ ಕೈಚಳಕ ಸರವಣ ಅವರ ಥ್ರಿಲ್ ಮೂಡಿಸುವ ಸಂಗೀತ ,ಲೋಕಿ ಮತ್ತು ಸೂರಿ ಅವರ ಸಂಕಲನ ಮತ್ತು ನಾಗರಾಜ್ ಅವರ ಶಬ್ದ ವಿನ್ಯಾಸ ಮನರೂಪದ ಅಂದವನ್ನು ಹೆಚ್ಚಿಸಿದೆ.ಗಜಾ ನೀನಾಸಂ ಒಂದೇ ಟೇಕ್ ನಲ್ಲಿ 7ನಿಮಿಷದ ಅಭಿನಯ ಮಾಡಿರುವುದು,ಮುಖ್ಯವಾಗಿ ಕಟ್ ಇಲ್ಲದ ದೃಶ್ಯ ಇದು.ಕ್ಯಾಮೆರಾ ಓಡಾಡುವ ಬದಲು ನಟ ಇಡೀ ಅರಣ್ಯವನ್ನು ಓಡಾಡಿ ಅಭಿನಯಿಸಿರುವುದು ಮತ್ತು ಎಮೋಷನ್ ನ್ನು ಕಟ್ಟಿಕೊಟ್ಟಿರುವುದು,ದಿಲೀಪ್ ಕುಮಾರ್ ಮತ್ತು ಅಮಘ್ ಸಿದ್ದಾರ್ಥ್ ಅವರ ಮನೋಜ್ಞ ಅಭಿನಯ ಮತ್ತು ಭಯಂಕರ ಕಾಡು ಈ ಕಾಲದ ಹುಡುಗರ ಒಂಟಿತನ ಅಸಹಜತೆ ನೆಮ್ಮದಿಯ ಹುಡುಕಾಟದ ಛಾಯೆ ಮನರೂಪದ ಆಕರ್ಷಣೆ .ಅಮೇಜಾನ್ ಪ್ರೈಮ್ ನಲ್ಲಿ ನೋಡಿದ ಅನೇಕ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.ಇದು ಮಿಲೆನಿಯಲ್ ಎಂದು ಕರೆಯುವ ಯುವ ಪೀಳಿಗೆಯ ಅಸ್ವಸ್ಥ ಮನಸುಗಳ ಕಥೆ.ಎಂದು ಚಿತ್ರದ ನಿರ್ಧೇಶಕ ಕಿರಣ್ ಹೆಗಡೆ ತಿಳಿಸಿದರು.ಮನರೂಪ ಚಿತ್ರದಲ್ಲಿ ಹೊಸಬರೇ ಬಣ್ಣ ಹಚ್ಚಿದ್ದರು ದಿಲೀಪ್ ಕುಮಾರ್,ಅನೂಷಾ ರಾವ್,ನಿಷಾ ಯಶ್ ರಾಮ್,ಆರ್ಯನ್ ,ಶಿವಪ್ರಸಾದ್,ಅಮೋಘ್ ಸಿದ್ದಾರ್ಥ್,ಪ್ರಜ್ವಲ್ ಗೌಡ,ಗಜಾ ನೀನಾಸಂ,ರಮಾನಂದ ಐನಕೈ,ಸತೀಶ್ ಗೋಳಿಕೊಪ್ಪ.ಬಿ.ಸುರೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಗೋವಿಂದರಾಜ್ ಛಾಯಾಗ್ರಹಣ,ಸರ್ವಣ ಅವರ ಸಂಗೀತ ,ಲೋಕಿ-ಸೂರಿ ಅವರ ಸಂಕಲನ ಮತ್ತು ಹುಲಿವಾನ್ ನಾಗರಾಜ್ ಅವರ ಸೌಂಡ್ ಡಿಸೈನ್ ಈ ಚಿತ್ರಕ್ಕಿದೆ.ಸಾಹಿತಿ ಮತ್ತು ಪತ್ರಕರ್ತ ಮಹಾಬಲ ಸೀತಾಳಭಾವಿ ಅವರ ಸಂಭಾಷಣೆ ಇದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.