Skip to main content
ಪರಿಸರ ರಕ್ಷಣೆ ನಮ್ಮ ಹೊಣೆ ಸಾಲುಮರದ ತಿಮ್ಮಕ್ಕ ನಮಗೆ ಆದರ್ಶ .

ಪರಿಸರ ರಕ್ಷಣೆ ನಮ್ಮ ಹೊಣೆ ಸಾಲುಮರದ ತಿಮ್ಮಕ್ಕ ನಮಗೆ ಆದರ್ಶ .

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ,ಸಾಲುಮರದ ತಿಮ್ಮಕ್ಕನವರು ನಮಗೆ ಆದರ್ಶ.ಶ್ರೀ ರಾಜಾವೆಂಕಟಪ್ಪ ನಾಯಕ ಶಾಸಕರು.

Raichur

ಸಿರವಾರ:ಇಂದು ಸಿರವಾರ ಪಟ್ಟಣದಲ್ಲಿ "ಸಂಕಲ್ಪ ಸೇವಾ ಸಮಿತಿ" ಇವರ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಸಸಿ ನೆಟ್ಟು ನೀರು ಹಾಕುವ ಮುಖಾಂತರ ಮಾನವಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಮಾನವಿ ಇವರು ಕಾರ್ಯಕ್ರಮ ನೆರವೇರಿಸಿದರು,ಬಿವಿ ಪಾಟೀಲ್ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿ ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಪ್ರತಿಯೊಬ್ಬರು ಸಸಿ ನೆಡುವ ಮುಖಾಂತರ ಪರಿಸರ ಕಾಳಜಿಯನ್ನು ವಹಿಸಿದರೆ ಮುಂದಿನ ದಿನಗಳಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿದೆ ಎಂದು ಶಾಸಕರು ಹೇಳಿದರು,ಜೊತೆಗೆ ನಮ್ಮ ಭಾಗದಲ್ಲಿ ಗಿಡ ಮರಗಳ ಕೊರತೆ ಇದ್ದು ಸಸಿಗಳನ್ನು ನೆಡುವುವ ಮೂಲಕ ನಮ್ಮ ಭಾಗಕೂಡ ಮಲೆನಾಡ ಪ್ರದೇಶದಂತೆ ಕಾಣಬಹುದು ಎಂದರು ಜೊತೆಗೆ ಸಾಲುಮರದ ತಿಮ್ಮಕ್ಕನಂತವರು ನಮಗೆ ಸ್ಫೂರ್ತಿ ಯಾಗಿದ್ದಾರೆ ಎಂದು ಹೇಳಿದರು .

Raichur

ಇದೇ ವೇಳೆ ಪಟ್ಟಣದ ಬಿವಿ ಪಾಟೀಲ್ ಕಾಲೋನಿಗೆ ಶಾಸಕರ ವಿಶೇಷ ಅನುಧಾನದಲ್ಲಿ ಸಿ ಎ ಸೈಟ್ ನಲ್ಲಿ ದೇವಸ್ಥಾನ ಕಟ್ಟಿಕೊಳ್ಳಲು ಹಣ ಬಿಡುಗಡೆ ಮಾಡಿಸುವ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು. ತಾಲೂಕಿನ ತಹಸೀಲ್ದಾರ್ ಶ್ರೀ ಮತಿ ಶ್ರುತಿ ಕೆ ಇವರು ಮಾತನಾಡಿ ನಾವೆಲ್ಲ ಸಸಿಗಳನ್ನು ನೆಟ್ಟು ಸ್ಫೂರ್ತಿ ಯಾಗಬೇಕು ,ಇಂತಹ ಕಾರ್ಯಕ್ರಮಗಳು ನಮಗೆ ಅವಶ್ಯಕತೆ ಇದೇ ಎಂದು ಹೇಳಿದರು.

Raichur

ಹಾಗೂ ತಾಲೂಕಿನ ಫಾರೆಸ್ಟ್ ಆಫೀಸ್ಇರ್ ರಾಜೇಶ್ ನಾಯ್ಕ್ ಇವರು ಮಾತನಾಡಿ ಸಸಿಗಳನ್ನು ನೆಡುವುದು ಮುಖ್ಯವಲ್ಲ ಅವುಗಳ ಪೋಷಣೆ ಪ್ರಾಮುಖ್ಯ ಎಂದು ಹೇಳಿದರು.

ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಮುಂಖಡರಾದ ಶ್ರೀ ರಾಜಾ ರಾಮಚಂದ್ರ ನಾಯಕ,ತಾಲ್ಲೂಕು ಜೆಡಿಎಸ್ ಅದ್ಯಕ್ಷ ಮಲ್ಲಿಕಾರ್ಜುನ ಪಾಟೇಲ ಬಲ್ಲಟಿಗಿ,ಜೆಡಿಎಸ್ ಹಿರಿಯ ಮುಂಖಡರಾದ ಜಿ ಲೋಕರೆಡ್ಡಿ ಸಿರವಾರ,ನಾಗರಾಜ ಭೋಗಾವತಿ,ಆರ್ ಬಸವರಾಜ ಶೆಟ್ಟಿ, ಕಾಶಿನಾಥ ಸರೋದ್,ಗೋಪಾಲ ನಾಯಕ ಹರವಿ,ಗ್ಯಾನಪ್ಪ ಸಿರವಾರ,ದಾನಪ್ಪ ಸಿರವಾರ,ಪ್ರಭು ಗೌಡ, ಪ್ರಕಾಶಪ್ಪ ಸಿರವಾರ, ಪಟ್ಟಣ ಪಂಚಾಯತ ಸದ್ಯಸರಾದ ಇಮಾಮ,ಚನ್ನಬಸವ ಗಡ್ಲ, ತಹಸೀಲ್ದಾರರಾದ ಶೃತಿ ಕೆ,ಅರಣ್ಯ ಅಧಿಕಾರಿಯಾದ ರಾಜೇಶ್ ನಾಯಕ,ಪಟ್ಟಣ ಪಂಚಾಯತ ಮುಖ್ಯ ಅಧಿಕಾರಿಯಾದ ಮುನಿ ಸ್ವಾಮಿ, ಪಿ ಎಸ್ ಐ ಸುಜಾತ ನಾಯಕ, ಅರೋಗ್ಯ ಇಲಾಖೆಯ ಅಧಿಕಾರಿಯಾದ ಸುನೀಲ್ ಸರೋದ್,ಉಪಸ್ಥಿತಿರಿದ್ದರು

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.