Skip to main content
ಬ್ರಾವೋ ಅಬ್ಬರದಿಂದ ಮುಂಬೈಗೆ ಶಾಕ್: ರೋಚಕ ಅಂತ್ಯ ಕಂಡ ಐಪಿಎಲ್ ಆರಂಭಿಕ ಪಂದ್ಯ.

ಬ್ರಾವೋ ಅಬ್ಬರದಿಂದ ಮುಂಬೈಗೆ ಶಾಕ್: ರೋಚಕ ಅಂತ್ಯ ಕಂಡ ಐಪಿಎಲ್ ಆರಂಭಿಕ ಪಂದ್ಯ.

ಬ್ರಾವೋ ಅಬ್ಬರದಿಂದ ಮುಂಬೈಗೆ ಶಾಕ್: ರೋಚಕ ಅಂತ್ಯ ಕಂಡ ಐಪಿಎಲ್ ಆರಂಭಿಕ ಪಂದ್ಯ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌‌ 11ನೇ ಆವೃತ್ತಿಯ ಟಿ-20 ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್‌‌ ಕಿಂಗ್ಸ್‌ ಶುಭಾರಂಭ ಮಾಡಿದೆ. ಎಸ್..ರೋಚಕ ತಿರುವು ಕಂಡ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್‌‌ ಕಿಂಗ್ಸ್‌ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಒಂದು ವಿಕೆಟ್ ಗೆಲುವು ಸಾಧಿಸಿತು. ಮುಂಬೈ ಇಂಡಿಯನ್ಸ್ ನೀಡಿದ್ದ 166 ರನ್ ಗಳ ಗುರಿ ಬೆನ್ನಟ್ಟಿದ ಸಿಎಸ್‌ಕೆ 19. 5 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಇನ್ನು ಚೆನ್ನೈ ಪರ ಒಪನಿಂಗ್ ಮಾಡಿದ ಶೆನ್ ವಾಟ್ಸನ್ ಮತ್ತು ಅಂಬಟಿ ರಾಯಡು ಉತ್ತಮವಾಗಿ ಆಡುತ್ತಿದ್ದರು. 4ನೇ ಓವರ್ ನಲ್ಲಿ ವಾಟ್ಸನ್ 16 ರನ್ ಗಳಿಸಿ ಹಾರ್ದಿಕ್ ಬೌಲಿಂಗ್ ನಲ್ಲಿ ಕ್ಯಾಚ್ ಔಟ್ ಆದರು. ಬಳಿಕ ಬಂದ ರೈನಾ ಕೇವಲ ನಾಲ್ಕು ರನ್ ಗಳಿಸಿ ಹಾರ್ದಿಕ್ ಬೌಲಿಂಗ್ ನಲ್ಲಿ ಕ್ಯಾಚ್ ಗೆ ಬಲಿಯಾದರು. ನಂತರ ಬೌಲಿಂಗ್ ಆರಂಭಿಸಿದ ಮಾರ್ಕಂಡ್ ಒಂದರ ಬಳಿಕ ಒಂದರಂತೆ ಮೂರು ವಿಕೆಟ್ ಕಬಳಿಸಿ ಚೆನ್ನೈ ಸೂಪರ್‌‌ ಕಿಂಗ್ಸ್‌ ತಂಡಕ್ಕೆ ಆಘಾತ ನೀಡಿದ್ರು..ಮಿಡಲ್ ಆಡರ್ ರೈನಾ, ಧೋನಿ ಮತ್ತು ಜಡೇಜಾ ಉತ್ತಮ ಆಟ ತೋರುವಲ್ಲಿ ವಿಫಲರಾದರು. ಹೀಗಾಗಿ ನಿರಂತರವಾಗಿ ವಿಕೆಟ್ ಕಳೆದುಕೊಂಡ ಸಿಎಸ್‌ಕೆ ರನ್ ಗಳಿಸುವಲ್ಲಿ ಒತ್ತಡಕ್ಕೆ ಬಿತ್ತು.

ಅಬ್ಬರಿಸಿದ ಡಿಜೆ ಬ್ರಾವೋ .....

ಬ್ರಾವೋ ಅಬ್ಬರದಿಂದ ಮುಂಬೈಗೆ ಶಾಕ್.

 

ಆದರೆ ಕೊನೆ ಹಂತದಲ್ಲಿ ಅಬ್ಬರಿಸಿದ ಡೆರ್ರೆನ್ ಬ್ರಾವೋ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಸೋಲಿನ ಭೀತಿಯಲ್ಲಿದ್ದ ತಂಡಕ್ಕೆ ಕೊನೆಯ ಮೂರು ಓವರ್ ಗಳಲ್ಲಿ ಬ್ರಾವೋ ಭರ್ಜರಿ ಹೊಡೆತಗಳನ್ನು ಭಾರಿಸಿ ಗೆಲುವಿನ ತುದಿಗೆ ತಂದರು. ಬ್ರಾವೋ 30 ಬೌಲ್ ಗಳಲ್ಲಿ 68 ರನ್ ಗಳಿಸಿದರು. 7 ಸಿಕ್ಸರ್ ಮತ್ತು 3 ಬೌಂಡರಿ ಭಾರಿಸಿದ ಬ್ರಾವೋ 68 ರನ್ ಗಳಿಸಿ ಔಟಾದರು. ಕೊನೆಯ ಓವರ್ ನಲ್ಲಿ ಗೆಲುವಿಗೆ 7 ರನ್ ಬೇಕಿತ್ತು. ಈ ವೇಳೆ ಮೂರು ಬೌಲ್ ಗಳಲ್ಲಿ ಯಾವುದೇ ರನ್ ಗಳಿಸಲು ಆಗಲಿಲ್ಲ. ನಾಲ್ಕನೇ ಬೌಲ್ ನಲ್ಲಿ ಜಾಧವ್ ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 165ಕ್ಕೆ ಸಮವಾಗಿ ತಂದರು. ಐದನೇ ಬೌಲ್ ನ್ನು ಬೌಂಡರಿಗೆ ಅಟ್ಟುವ ಮೂಲಕ ಜಾಧವ್ ಚೆನ್ನೈ ತಂಡಕ್ಕೆ ಗೆಲುವು ತಂದು ಕೊಟ್ಟರು.ಜಾಧವ್ 24 ರನ್ ಗಳಿಸಿ ಅಜೇಯರಾಗುಳಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡರು. ಇದರಂತೆ ಬ್ಯಾಟಿಂಗ್‌ ಮಾಡಲು ಇಳಿದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಎವಿನ್ ಲೂವಿಸ್ ಉತ್ತಮ ಪ್ರದರ್ಶನ ನೀಡಲಿಲ್ಲ. ದೀಪಕ್ ಚಹರ್ ಎಸೆದ ಪಂದ್ಯದ ಮೂರನೇ ಓವರ್‌ನಲ್ಲಿ ಎವಿನ್‌ ಲೂಯಿಸ್‌ ಖಾತೆ ತೆರೆಯುವ ಮುನ್ನವೇ ಎಲ್‌ಬಿ ಬಲೆಗೆ ಸಿಲುಕಿದರು. ಡಿಆರ್‌ಎಸ್ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದಾದ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಸಹ ಪೆವಿಲಿಯನ್‌ಗೆ ಸೇರಿಕೊಂಡರು.

ಶೇನ್ ವಾಟ್ಸನ್ ಎಸೆತದಲ್ಲಿ ರಾಯುಡುಗೆ ಕ್ಯಾಚಿತ್ತು ರೋಹಿತ್ ಮರಳಿದರು. 18 ಎಸೆತಗಳನ್ನು ಎದುರಿಸಿದ ರೋಹಿತ್ 15 ರನ್ ಗಳಿಸಿದರು. ಇದರೊಂದಿಗೆ 3.5 ಓವರ್‌ಗಳಲ್ಲೇ 20 ರನ್‌ಗೆ 2 ವಿಕೆಟ್‌ ಕಳೆದುಕೊಳ್ತು. ಈ ಹಂತದಲ್ಲಿ ಜತೆಗೂಡಿದ ವಿಕೆಟ್ ಕೀಪರ್ ಇಶಾನ್ ಕಿಶಾನ್ ಹಾಗೂ ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದರು. ಸಿಎಸ್‌ಕೆ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿಯು ಮೂರನೇ ವಿಕೆಟ್‌ಗೆ 78 ರನ್‌ಗಳ ಮಹತ್ವದ ಜತೆಯಾಟ ನೀಡಿತು.

ಈ ಹಂತದಲ್ಲಿ 43 ರನ್ ಗಳಿಸಿದ ಸೂರ್ಯಕುಮಾರ್, ವ್ಯಾಟ್ಸನ್‌ ದಾಳಿಯಲ್ಲಿ ಹರಭಜನ್‌ಗೆ ಕ್ಯಾಚಿತ್ತು ಮರಳಿದರು. ಇದಾದ ಸ್ವಲ್ಪದರಲ್ಲೇ ಉತ್ತಮವಾಗಿ ಆಡುತ್ತಿದ್ದ ಇಶಾನ್ ಕಿಶಾನ್ 40 ಸಹ ದೊಡ್ಡ ಮೊತ್ತಕ್ಕೆ ಮುಂದಾಗಿ ಇಮ್ರಾನ್ ತಾಹೀರ್ ಎಸೆತದಲ್ಲಿ ಮಾರ್ಕ್ ವುಡ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ತದನಂತರ ಬಂದ ಪಾಂಡ್ಯಾ ಬ್ರದರ್ಸ್ ಉತ್ತಮ ಪ್ರದರ್ಶನ ನೀಡಿದರು. ಕೇವಲ 22 ಎಸೆತಗಳಲ್ಲಿ ಕೃನಾಲ್‌ 41ರನ್‌ ಹಾಗೂ ಹಾರ್ದಿಕ್‌ ಪಾಂಡ್ಯ 22ರನ್‌ ಗಳಿಸಿದರು. ಕೊನೆಯದಾಗಿ ತಂಡ 20 ಓವರ್‌ಗಳಲ್ಲಿ 4ವಿಕೆಟ್‌ ಕಳೆದುಕೊಂಡು 165ರನ್‌ಗಳಿಸಿತು. ಸಿಎಸ್‌ಕೆ ಪರ ದೀಪಕ್‌ ಚಹರ್‌, ಇಮ್ರಾನ್ ತಾಹೀರ್ ತಲಾ 1ವಿಕೆಟ್‌ ಪಡೆದುಕೊಂಡರೆ, ಶೇನ್‌ ವ್ಯಾಟ್ಸನ್‌ 2 ವಿಕೆಟ್‌ ಪಡೆದುಕೊಂಡರು. ಇನ್ನು ಇಂದು ಕೆಕೆಆರ್‌ ವಿರುದ್ಧ ಆರ್‌ಸಿಬಿ, ಪಂಜಾಬ್‌ ವಿರುದ್ಧ ಡೆಲ್ಲಿ ತಂಡಗಳ ನಡುವೆ ಫೈಟ್‌ ನಡೆಯಲಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.