Skip to main content
ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಭಾರತ.

ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಭಾರತ.

ಎರಡನೇ ಏಕದಿನ ಪಂದ್ಯ ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಭಾರತ.

ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಭಾರತ.

ವಿಶಾಖಪಟ್ಟಣಂ: ಮೊದಲ ಪಂದ್ಯದಲ್ಲಿ ಸೋತು ತವರು ಅಭಿಮಾನಿಗಳ ಎದುರು ಮುಖಭಂಗ ಅನುಭವಿಸಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ನಾಳೆ ಇಲ್ಲಿನ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಹಣಾಹಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲು ಸಿದ್ಧವಾಗಿದೆ. ಈಗಾಗಲೇ 0-1 ಹಿನ್ನಡೆ ಅನುಭವಿಸಿರುವ ಭಾರತ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡ್ಕಕೆ ಸಿಲುಕಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಬೇಕಾದರೆ ಎಂಟನೇ ಸ್ಥಾನದ ವೆಸ್ಟ್ ಇಂಡೀಸ್ ವಿರುದ್ಧ ನಾಳೆ ಗೆಲುವು ಅನಿವಾರ್ಯ.

ಕಳೆದ ಹಲವು ವರ್ಷಗಳಿಂದ ತವರು ನೆಲದಲ್ಲಿ ಅದ್ಭುತ ಪ್ರದರ್ಶನ ಮುಂದುವರಿಸಿರುವ ಆತಿಥೇಯರು ನಾಳೆ ಸ್ವಲ್ಪ ಎಚ್ಚರ ತಪ್ಪಿದರೂ ಕೆರಿಬಿಯನ್ ಯುವ ಪಡೆಯ ಎದುರು ಅಪಾಯ ಕಟ್ಟಿಟ್ಟ ಬುತ್ತಿ. ಚೆನ್ನೈ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ತಿಣುಕಾಡಿ 288 ರನ್ ಗುರಿಯನ್ನು ಪ್ರವಾಸಿಗರಿಗೆ ನೀಡಿತ್ತು. ಆದರೆ, ದ್ವಿತೀಯ ಇನಿಂಗ್ಸ್‌‌ನಲ್ಲಿ ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ವಿಫಲವಾಗಿತ್ತು, ಇದು ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಇನ್ನೂ 13 ಎಸೆತಗಳು ಬಾಕಿ ಇರುವಂತೆ ವಿಂಡೀಸ್ ಎಂಟು ವಿಕೆಟ್‌ಗಳಿಂದ ಗೆಲುವಿನ ತೋರಣ ಕಟ್ಟಿತ್ತು. ಕಳೆದ ಪಂದ್ಯದಲ್ಲಿ ಭಾರತ ಸಮಯೋಜಿತ ತಂಡದೊಂದಿಗೆ ಕಣಕ್ಕೆೆ ಇಳಿದಿರಲಿಲ್ಲ. ಶಿವಂ ದುಬೆ ಅವರನ್ನು ಐದನೇ ಬೌಲರ್ ಆಗಿ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆೆ ಪದಾರ್ಪಣೆ ಮಾಡಿಸಲಾಗಿತ್ತು. ಆದರೆ, ಅವರು ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದರು. ವೈಫಲ್ಯದ ಹೊರತಾಗಿಯೂ ಮತ್ತೊಂದು ಅವಕಾಶವನ್ನು ಅವರಿಗೆ ನಾಳೆ ನೀಡಬಹುದು. ಕರ್ನಾಟಕದ ಮನೀಷ್ ಪಾಂಡೆ ಹಾಗೂ ಮಯಾಂಕ್ ಅಗರ್ವಾಲ್ ಅವರೂ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ.

ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಭಾರತ.

ಇತ್ತೇಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಪಡೆ ಫೀಲ್ಡಿಂಗ್ ಸಮಾಧಾನ ತಂದಿಲ್ಲ. ಶಿಮ್ರಾನ್ ಹೆಟ್ಮೇರ್ ಅವರ ಸುಲಭ ಕ್ಯಾಚ್ ಅನ್ನು ಶ್ರೇಯಸ್ ಅಯ್ಯರ್ ಕೈ ಚೆಲ್ಲಿದ್ದರು. ಇದರ ಲಾಭ ಪಡೆದ ಅವರು 139 ರನ್ ಚಚ್ಚುವ ಮೂಲಕ ವಿಂಡೀಸ್ ಗೆಲುವಿನ ಪ್ರಮುಖ ಪಾತ್ರವಹಿಸಿದ್ದರು. ಜತೆಗೆ, ಭಾರತ ಬೌಲಿಂಗ್ ವಿಭಾಗವನ್ನು ದೂಳಿಪಟ ಮಾಡಿದ್ದರು. ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಬ್ಯಾಟಿಂಗ್ ಲಯಕ್ಕೆೆ ಮರಳಿರುವುದು ಪ್ಲಸ್ ಪಾಯಿಂಟ್. ಅವರು ಚೆನ್ನೈ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ್ದರು. ಇನ್ನುಳಿದ ಪಂದ್ಯಗಳಿಗೂ ಅವರು ಅದೇ ಲಯ ಮುಂದುವರಿಸುವ ತುಡಿತದಲ್ಲಿ ಇದ್ದಾರೆ. ಮತ್ತೊಂದೆಡೆ ಮೊದಲನೇ ಪಂದ್ಯದಲ್ಲಿ ತನಗಿಂತ ಮೇಲಿನ ಕ್ರಮಾಂಕದಲ್ಲಿರುವ ಬಲಿಷ್ಟ ಭಾರತ ವಿರುದ್ಧ ಭರ್ಜರಿ ಜಯ ದಾಖಲಿಸಿದ ವಿಶ್ವಾಸದಲ್ಲಿರುವ ವೆಸ್ಟ್ ಇಂಡೀಸ್ ನಾಳಿನ ಪಂದ್ಯದಲ್ಲಿ ಅದೇ ಲಯ ಮುಂದುವರಿಸಿ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ತುಡಿತದಲ್ಲಿದೆ.

ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಭಾರತ.

ಚೆನ್ನೈ ಪಂದ್ಯದಲ್ಲಿ ಪ್ರವಾಸಿಗರು ಆತಿಥೇಯರಿಗಿಂತ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಒಂದು ವೇಳೆ ನಾಳಿನ ಪಂದ್ಯದಲ್ಲಿ ವಿಂಡೀಸ್ ಗೆದ್ದರೆ 2006ರ ಬಳಿಕ ಭಾರತದ ವಿರುದ್ಧ ಮೊದಲ ಸರಣಿ ಜಯವಾಗಲಿದೆ. ಈಗಾಗಲೇ ಭಾರತದ ಬೌಲರ್‌ಗಳನ್ನು ಮೊದಲ ಪಂದ್ಯದಲ್ಲಿ ದಂಡಿಸಿರುವ ಹೆಟ್ಮೇರ್ ಹಾಗೂ ಹೋಪ್ ಅವರನ್ನು ಬಿಟ್ಟು ಇನ್ನುಳಿದವರು ನಾಳಿನ ಪಂದ್ಯದಲ್ಲಿ ಸಜ್ಜಾಗುವ ಅಗತ್ಯವಿದೆ. ತಂಡಗಳು ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ಕೇದರ್ ಜಾಧವ್, ಶಿವಂ ದುಬೆ, ರವೀಂದ್ರ ಜಡೇಜಾ, ಕೆ.ಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ದೀಪಕ್ ಚಾಹರ್, ಮೊಹಮ್ಮದ್ ಶಮಿ ಮತ್ತು ಶಾರ್ದೂಲ್ ಠಾಕೂರ್ ವೆಸ್ಟ್ ಇಂಡೀಸ್: ಕಿರೋನ್ ಪೊಲಾರ್ಡ್ (ನಾಯಕ), ಸುನಿಲ್ ಅಂಬ್ರಿಸ್, ಶಿಮ್ರಾನ್ ಹೆಟ್ಮೇರ್, ಬ್ರೆೆಂಡನ್ ಕಿಂಗ್, ಎವಿನ್ ಲೆವಿಸ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್, ಕೀಮೊ ಪೌಲ್, ಶಾಯ್ ಹೋಪ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶೆಲ್ಡನ್ ಕಾಟ್ರೆೆಲ್, ಅಲ್ಜಾರಿ ಜೋಸೆಫ್, ಖಾರಿ ಪಿಯರಿ, ರೊಮರಿಯೊ ಶೆಫರ್ಡ್ ಮತ್ತು ಹೇಡನ್ ವಾಲ್ಷ್ ಜೂ. ಸಮಯ: ನಾಳೆ ಮಧ್ಯಾಹ್ನ 01:30 ಸ್ಥಳ: ಡಾ. ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣ, ವಿಶಾಖಪಟ್ಟಣಂ

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.