ಯುವಕರು ತಮ್ಮ ಬರ್ತ್ಡೆಗೆ ಪಟಾಕಿ ಹಚ್ಚುವ ಬದಲು ಒಂದು ಸಸಿ ನಡಿ ಕುಮಾರಿ ಅಕ್ಕ ಪ್ರ.ಪೀತ.ಬ್ರ,ಈ.ವಿಶ್ವಾವಿದ್ಯಾಲಯ.
ಯುವಕರು ತಮ್ಮ ಬರ್ತ್ಡೆಗೆ ಪಟಾಕಿ ಹಚ್ಚುವ ಬದಲು ಒಂದು ಸಸಿ ನಡಿ ಕುಮಾರಿ ಅಕ್ಕ ಪ್ರ.ಪೀತ.ಬ್ರ,ಈ.ವಿಶ್ವಾವಿದ್ಯಾಲಯ.

ಸಿರವಾರ: ಸಿರವಾರ :ಪರಿಸರ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಆಫ್ ಸಿರವಾರ ಹಾಗೂ ಪಟ್ಟಣ ಪಂಚಾಯತ ಕಾರ್ಯಾಲಯ ಸಿರವಾರ ಮತ್ತು ಸಾಮಾಜಿಕ ಅರಣ್ಯ ವಲಯ ಮಾನವಿ ಇವರುಗಳ ಸಹಯೋಗದಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ತಾಲೂಕಿನ ಬಯಲು ಆಂಜನೇಯ ದೇವಸ್ಥಾನ ಸಿರವಾರ ಸ್ಥಳದಿಂದ ಮೇನ್ ರೋಡ್ ಡಿವೈಡ್ರ್ ಸಸಿನೆಡುವ ಜಾಗದಲ್ಲಿ ದೇವದುರ್ಗ ಕ್ರಾಸ್ - ಕೇಂದ್ರ ಬಸ್ ಸ್ಟಾಂಡ್ ವರೆಗೂ ಸಸಿಗಳನ್ನು ನೆಡುವುದರ ಮೂಲಕ ಮಾದರಿ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಯುವಕರು ತಮ್ಮ ಬರ್ತ್ಡೆಗೆ ಪಟಾಕಿ ಹಚ್ಚುವ ಬದಲು ಒಂದು ಸಸಿ ನಡಿ .
ಕುಮಾರಿ ಅಕ್ಕ ಪ್ರ.ಪೀತ.ಬ್ರ,ಈ.ವಿಶ್ವಾವಿದ್ಯಾಲಯ. ಪರಿಸರ ದಿನಾಚರಣೆಯ ಸಸಿ ನೆಡುವ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ್ದ ಪ್ರಜಾ ಪೀತ ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಕುಮಾರಿ ಅಕ್ಕ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ,ಇತ್ತಿಚಿನ ದಿನಮಾನಗಳಲ್ಲಿ ಹುಟ್ಟು ಹಬ್ಬದಂತಹ ಕಾರ್ಯಕ್ರಮಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ ದುಂದುವೆಚ್ಚೆ ಮಾಡುವಂತಹ ಪದ್ದತ್ತಿಗಳು ಹೆಚ್ಚಾಗುತ್ತಿವೆ , ಹಾಗೂ ಇದರಿಂದ ಯಾವುದೇ ಪ್ರಯೋಜನವಿಲ್ಲ ಬದಲಿಗೆ ಶಬ್ದ ಮಾಲಿನ್ಯದ ಜೊತೆಗೆ ಪರಿಸ ಮಾಲಿನ್ಯ ಉಂಟಾಗುವುದಲ್ಲದೇ ಜನ ಸಾಮನ್ಯರಿಗೆ ತೊಂದರೆಗಳು ಹೆಚ್ಚಗುತ್ತೀವೆ.
ಆದೂದರಿಂದ ಪಟಾಕಿಸಿಡಿಸಿ ಸಂಭ್ರಮಿಸುವಂತಹ ಕಾರ್ಯಕ್ರಮಗಳನ್ನು ಕೈಬಿಟ್ಟು ಹುಟ್ಟು ಹಬ್ಬದಂತಹ ದಿನದಂದು ಒಂದ್ ಒಂದು ಸಸಿ ನೆಡುವ ಪದ್ದತ್ತಿಯನ್ನು ಅಳವಡಿಸಿಕೊಳ್ಳ ಬೇಕಾಗಿದೆ ಎಂದರು.
ಇನ್ನೂ ಮಂಗಳೂರು ಉಡುಪಿಗಳಂತಹ ಪ್ರದೇಶಗಳಲ್ಲಿ ಗಿಡ ಮರಗಳು ಎಚ್ಚೆತ್ತವಾಗಿವೆ ಇದರಿಂದ ಅಲ್ಲಿನ ಪ್ರದೇಶ ಸಮೃದ್ದ ಭರಿತ ಮಳೆ ಆಮ್ಲ ಜನಕ, ತಂಪಾತ ವಾತರಣದಿಂದ ಕೂಡಿದೆ ಅಂದರು, ಅದರಿಂದ ನಮ್ಮ ಪ್ರದೇಶದಲ್ಲಿಯೂ ಕೂಡ ಗಿಡ ಮರಗಳನ್ನು ಬೆಳಸಿ ಬಿಸಲ ನಾಡನ್ನು ಹಸಿರುನಾಡನ್ನಗಿಸ ಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮುಂಗಾರು ಸಿರಿ ಸಂಪಾದ ಸಂಸ್ಕೃತಿ ಹಬ್ಬ ರಾಯಚೂರು ಸಮಾಜ ಸೇವೆ ಪ್ರಶಸ್ತಿಗೆ ಭಾಜನರಾದ ಸಂಜೀವಿನಿ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಜ್ಞಾನ ಮಿತ್ರ ಇವರಿಗೆ ಸನ್ಮಾನಿಸಿ ಗೌವವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಉದಯ ಸಾಹುಕಾರ ಮತ್ತು ಲಯನ್ಸ್ ಕ್ಲಬ್ ಆಫ್ ಸಿರವಾರದ ಪದಾಧಿಕಾರಿಗಳು ಮತ್ತು ಪಟ್ಟಣ ಪಂಚಾಯತ ಅಧ್ಯಕ್ಷರಾದ ಶ್ರೀ ವೈ ಎನ್ ಭೂಪನಗೌಡ ಉಪಾಧ್ಯಕ್ಷರಾದ ಶ್ರೀ ಮತಿ ಲಕ್ಸ್ಮಿ ಅದ್ಯಾಪ್ಪ ತಾಲೂಕಿನ, ಸಿರವಾರ ಪೊಲೀಸ್ ಠಾಣೆಯ ಪಿ ಸ್ ಐ ಯವರಾದ ಅಮರೇಗೌಡ, ಶ್ರೀ ಶಿವಶರಣ ಅರಕೇರಾ , ಶ್ರೀ ಉಮಾಪತಿ ಚುಕ್ಕಿ ಸಹೂಕಾರ ,ಶ್ರೀ ನರಸಿಂಹ ರಾವ್ ಕುಲಕರ್ಣಿ ಮತ್ತು ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
Recent comments