ಶ್ರೀ .ಎನ್ .ಎಸ್ .ಬೋಸ್ ರಾಜ್ ರೈತರ ನಿಯೋಗದಿಂದ ಜಿಲ್ಲಾಧಿಕಾರಿಗಳ ಭೇಟಿ .
ಇಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಶ್ರೀ.ಎನ್.ಎಸ್.ಬೋಸ್ ರಾಜ್, ಮಾನ್ಯ ವಿಧಾನಪರಿಷತ್ ಸದಸ್ಯರು ನೇತೃತ್ವದಲ್ಲಿ ರೈತರ ನಿಯೋಗದೊಂದಿಗೆ ಮಾನ್ಯ ಜಿಲ್ಲಾಧಿಕಾರಿ ಗಳೊಂದಿಗೆ ತುಂಗಭದ್ರೆ ನದಿಯ ನೀರಿನ ಕುರಿತು ಚರ್ಚಿಸಲಾಯಿತು.

ತುಂಗಭದ್ರಾ ಎಡದಂಡ ಕಾಲುವೆಯ 69 ನೇ ಮೈಲಿಗೆ ಕನಿಷ್ಠ 1000 ಕ್ಯೂಸೆಕ್ ನೀರು ಬಿಡುಗಡೆ ಮಾಡಿದರೆ ಸ್ಟ್ಯಾಂಡಿಂಗ್ ಬೆಳೆಗಳಿಗೆ ಅನುಕೂಲವಾಗುತ್ತದೆ ಇಲ್ಲವಾದರೆ ರೈತರು ಸಂಕಷ್ಟಕ್ಕೆ ಈಡಾಗುತ್ತಾರೆ ಅನ್ನುವ ರೈತರ ವಾಸ್ತವ ಸಮಸ್ಯೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು ಸಮಸ್ಯೆಯನ್ನು ಹಾರಿದ್ದ ಮಾನ್ಯ ಜಿಲ್ಲಾಧಿಕಾರಿಗಳು ಸಮಸ್ಯೆ ಬಗೆಹರಿಸುವುದಾಗಿ ಸ್ಪಂದಿಸಿದರು. ಈ ಸಂದರ್ಭದಲ್ಲಿ ಶ್ರೀ. ಜಿ.ಹಂಪಯ್ಯ ನಾಯಕ, ಮಾಜಿ ಶಾಸಕರು ಮಾನವಿ, ಶ್ರೀ. ಚಾಮರಾಜ ಪಾಟೀಲ್ ಬೆಟ್ಟದೂರು, ಶ್ರೀ. ರಾಘವೇಂದ್ರ ಕುಷ್ಟಗಿ, ಶ್ರೀ ಚುಕ್ಕಿ ಸೂಗಪ್ಪ ಸೌಕರ್, ಶ್ರೀನಿವಾಸ್ ಜಾಲಾಪುರ ಕ್ಯಾಂಪ್ ಹಾಗೂ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು
Recent comments