ಕೊರೋನಾ ವಾರಿಯರ್ಸಗೆ ಆಹಾರ ತಲುಪಿಸಲು ಮುಂದಾದ ಓಗರಾ ಫುಡ್ಸ್.
ಕೊರೋನಾ ವಾರಿಯರ್ಸಗೆ ಆಹಾರ ತಲುಪಿಸಲು ಮುಂದಾದ ಓಗರಾ ಫುಡ್ಸ್.

ಕೊರೋನಾ ಸೋಂಕಿತರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯ,ಪೋಲಿಸ್,ನರ್ಸ್,ಹಾಲು ವಿತರಕರು,ಪೌರ ಕಾರರ್ಮಿಕರು ಮತ್ತು ಪತ್ರಕರ್ತರಿಗರ ಓಗರಾ ಫುಡ್ಸ್ ಕೃತಜ್ಞತೆ ಸಲ್ಲಿಸಿದೆ. ಕೊರೋನಾ ವಾರಿಯರ್ಸ್ ಗಾಗಿ ಆಹಾರ ಉತ್ಪನ್ನನಗಳನ್ನು ನೀಡುವ ಮೂಲಕ ಬೆಂಬಲ ಸೂಚಿಸಿದೆ,ಪೋಲೀಸ್ ಸಿಬ್ಬಂದಿ ಮತ್ತು ಪತ್ರಕರ್ತರ ಮನೆಗೆ ಆಹಾರ ತಲುಪಿಸವ ಕಾರ್ಯವನ್ನು ಓಗರಾ ಹಮ್ಮಿಕೊಂಡಿದೆ.ಇವರ ಕಾರ್ಯಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ.ಸಿ,ಎನ್.ಅಶ್ವತ್ ನಾರಯಣ್ ಅವರ ಸಹಕಾರ ಮತ್ತು ಮಾರ್ಗದರ್ಶನ ಇದೆ.ಈಗಾಗಲೇ ವೈದ್ಯಕೀಯ ಸಿಬ್ಬಂದಿ,ಪೋಲಿಸ್ ಮತ್ತು ಪತ್ರಕರ್ತರ ಮನೆಗಳನ್ನು ಗುರುತಿಸಲಾಗಿದ್ದು ,ರೆಡಿಮೆಡ್ ಫುಡ್ ಆಗಿರುವ ಪ್ಯಾಕೆಟ್ ಗಳನ್ನು ಆಯಾ ಸಿಬ್ಬಂದಿಗಳ ಮನೆಗೆ ಉಚಿತವಾಗಿ ತಲುಪಿಸುವ ಯೋಜನೆಯನ್ನು ಓಗರಾ ಮಾಡಿದೆ.

ಸಾಂಪ್ರದಾಯಿಕ ಆಹಾರಗಳಿಗೆ ಆಹಾರಗಳಿಗೆ ಹೆಸರಾಗಿರುವ ಓಗರಾ,ಪುಳಿಯೊಗರೆಯಿಂದ ರವಾ ಇಡ್ಲಿವರೆಗೂ ರೆಡಿಮೆಡ್ ಪ್ಯಾಕೆಟ್ ಗಳನ್ನು ಹೊಂದಿದ್ದು ,ಕೇವಲ ಬಿಸಿ ನೀರಿನಲ್ಲಿ ಹಾಕಿ ಆಹಾರ ತಯಾರಿಸಬಹುದಾಗಿದೆ.ಬೇಗ ಆಹಾರ ಮಾಡುವಂತಹ ಎಲ್ಲ ಮಿಶ್ರಣಗಳನ್ನು ಅದು ಹೊಂದಿದೆ.ಹಾಗಾಗಿ ಕಡಿಮೆ ಸಮಯದಲ್ಲೇ ಹಸಿವು ನೀಗಿಸುವಂಥ ಕಾರ್ಯ ಇದಗಿದೆ.ಈಗಾಗಲೇ ಪೊಲೀಸ್ ಇಲಾಖೆಯಿಂದ ಪರವಾನಿಗೆ ಪಡೆದಿರುವ ಓಗರಾ ಸಂಸ್ಥೆ,ಎಪ್ಪತ್ತೈದು ಲಕ್ಷ ರೂಪಾಯಿ ಮೌಲ್ಯದ ಆಹಾರ ಸಾಮಗ್ರಿಗಳನ್ನು ಆಯಾ ಮನೆಗಳಿಗೆ ಹೋಗಿ ತಲುಪಿಸುತ್ತಿರುವುದು ವಿಶೇಷ.ಈ ಕುರಿತು ಓಗರಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಘುನಾಥ್ ಹೇಳುವುದು ಹೀಗೆ,ಜಗತ್ತು ಹಿಂದೆಂದೂ ಕಾಣದಂತಹ ಪರಿಸ್ಥಿತಿ ತಲೆದೋರಿದೆ.ಮಾನವ ಕುಲಕ್ಕೆ ಅಪಾಯ ಬಂದಿದೆ,ಇಂತಹ ಸಂದರ್ಭದಲ್ಲಿ ನಾವು ದೇಶದೊಂದಿಗೆ ನಿಂತುಕೊಳ್ಳಬೇಕಿದೆ.ಹಸಿದ ಮತ್ತು ಜನರಿಗಾಗಿ ಕೆಲಸ ಮಾಡುತ್ತಿರುವವರಿಗೆ ಕೃತಜ್ಞತೆ ಹೇಳಬೇಕಿದೆ.ಲಾಭ ನಷ್ಟದ ಆಲೋಚನೆಯನ್ನು ಬದಿಗಿಟ್ಟು ನಾವೇಲ್ಲರೂ ಕೆಲಸ ಮಾಡಬೇಕಿದೆ.ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ , ನಾವೆಲ್ಲರೂ ದೇಶಕ್ಕಾಗಿ ಮತ್ತು ಮತ್ತೊಬ್ಬರ ಸಹಾಯಕ್ಕಾಗಿ ಬದ್ದರಾಗಬೇಕಿದೆ ಹಾಗಾಗಿ ನನ್ನ ಸಂಸ್ಥೆ ಓಗರಾದಿಂದ ಈ ಕೆಲಸವನ್ನು ಮಾಡುತ್ತಿದ್ದೇನೆ ಇದು ನನ್ನ ದೇಶಕ್ಕಾಗಿ ಸಲ್ಲಿಸುತ್ತಿರುವ “ಸಣ್ಣ” ಸೇವೆ ಎಂದರು.ಕೊರೋನಾ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರು ಮನೆಯಲ್ಲೇ ಇದ್ದು ಲಾಕ್ ಡೌನ್ ಪರಿಪಾಲನೆ ಮಾಡುತ್ತಿದ್ದಾರೆ.ವೈದ್ಯ,ಪೋಲಿಸ್ ಮತ್ತುಪತ್ರಕರ್ತರು ಸಂಕಷ್ಟದಲ್ಲಿ ಇರುವವರಿಗಾಗಿ ಕೆಲಸ ಮಾಡುತ್ತಿದ್ದಾರೆ.ಈ ಸಂದರ್ಭದಲ್ಲಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೆನೆ ಎಂದರು. ರಘುನಾಥ್,ಓಗರಾ ಸಂಸ್ಥೆಯ ಈ ಕೆಲಸಕ್ಕೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ ನಾರಾಯಣ್ ಅವರು ಕೂಡ ಸಹಕಾರ ಮತ್ತು ಬೆಂಬಲವನ್ನು ವ್ಯಕ್ತ ಪಡಿಸಿದ್ದಾರೆ.ಇವರ ಸಹಕಾರ ಮತ್ತು ಮಾರ್ಗದರ್ಶನಕ್ಕೆ ರಘುನಾಥ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
Recent comments