ಕಲಾವಿದನ ಕುಟುಂಬಕ್ಕೆ ದಾರಿ ದೀಪವಾದ ‘ರಾಜಕುಮಾರ’.....
ಕಲಾವಿದನ ಕುಟುಂಬಕ್ಕೆ ದಾರಿ ದೀಪವಾದ ‘ರಾಜಕುಮಾರ’.....

ಹಿರಿಯ ಬ್ಯಾನರ್ ಕಲಾವಿದ ಚಿನ್ನಪ್ಪಅವರ ಆರ್ಥಿಕ ಸಮಸ್ಯೆಯ ಬಗ್ಗೆ ವಿವರ ತಿಳಿದ ತಕ್ಷಣವೇ ಕನ್ನಡದ ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ ತಕ್ಷಣವೇ ಸ್ಪಂದಿಸಿದ್ದಾರೆ.ಚಿನ್ನಪ್ಪ ಅವರ ಪುತ್ರ ಕೃಷ್ಣ ನಮ್ಮ ಸಂಕಷ್ಟದ ವಿವರವನ್ನು ತಿಳಿದುಕೊಂಡು ಪುನೀತ್ ರಾಜಕುಮಾರ್ ಅವರು ಐವತ್ತು ಸಾವಿರ ರೂಪಾಯಿ ಕ್ಯಾಶ್ ಕಳಿಸಿ ಕೊಟ್ಟಿದ್ದಾರೆ.ಅವರ ಋಣವನ್ನು ಹೇಗೆ ತೀರಿಸಲಿ , “ಮನುಷ್ಯರಾದವರ ಎಲ್ಲಾ ಸಂಕಷ್ಟಗಳ ಕಡೆ ಗಮನ ಕೊಡಲು ಸಾಕ್ಷತ್ ದೇವರಿಗೇ ಕೆಲವೋಮ್ಮೆ ಬಿಡುವಿರುವುದಿಲ್ಲ.ಇಂಥಾ ಸಂದರ್ಭಗಳಲ್ಲಿ ಸಹಾಯ ಮಾಡಲು ತನ್ನ ಪರವಾಗಿ ಮನುಷ್ಯನನ್ನೇ ಕಳಿಸಿಕೊಡುತ್ತಾನಂತೆ.ಮನುಷ್ಯ ದೇವರಾಗುವುದು ಈಗಲೇ ಎಂದು ನಮ್ಮಪ್ಪ ಆಗಾಗ ಹೇಳುವುದಿದೆ ಈ ಮಾತು ಈಗ ನಿಜವಾಗಿದೆ,ಪುನೀತ್ ಸರ್ ಬರೀ ಮನುಷ್ಯರಲ್ಲ ,ನಮ್ಮ ಪಾಲಿಗೆ ಸಾಕ್ಷತ್ ದೇವರು ಎಂದು ಆಪ್ತರೊಡನೆ ಹೇಳಿಕೊಂಡಿದ್ದಾರಂತೆ.ಕಳೆದ ದಿನಗಳಿಂದಷ್ಟೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬರೋಬ್ಬರಿ ಐವತ್ತು ಲಕ್ಷ ರೂಪಾಯಿಗಳ ದೇಣಿಗೆ ನೀಡಿದ ಪುನೀತ್ ರಾಜಕುಮಾರ್ ಈಗ ಚಿನ್ನಪ್ಪ ಕುಟುಂಬಕ್ಕೆ ಐವತ್ತು ಸಾವಿರ ರೂಪಾಯಿಗಳ ಸಹಾಯ ನೀಡಿ ಮನವಿಯತೆ ಮೆರೆದಿದ್ದಾರೆ.ಕೃಪೆ:ಶ್ರೀ ಗಣೇಶ್ ಕಸರಗೋಡು.
Recent comments