ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ-2019.
ಇದೇ ನವೆಂಬರ್ 29 ,30 ರಂದು ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ-2019.
ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ನವೆಂಬರ್ 29, 30ರಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು(ರಿ) ಇದರ ವತಿಯಿಂದ ಇದೇ ಮೊದಲ ಭಾರಿಗೆ “ಪ್ರಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ-2019” ನಡೆಯುತ್ತಿದ್ದು, ಈ ಸಮ್ಮೇಳನಕ್ಕೆ ದೆಹಲಿ ಮತ್ತು ಹರಿಯಾಣವನ್ನು ಪ್ರತಿನಿಧಿಸಿ 6 ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಹೊರನಾಡ ಕನ್ನಡಿಗರ ಹೆಮ್ಮೆ. ಸಮ್ಮೇಳನದಲ್ಲಿ ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಾದ ಕು| ಅಭಿಷೇಕ್ ಉಭಾಳೆ ಸಮ್ಮೇಳನದ ಸಹಾಧ್ಯಕ್ಷರಾಗಿ ಮತ್ತು ಕು| ಪಾರ್ವತಿ ಎಸ್. ಆರ್. ವಿಚಾರಗೋಷ್ಠಿಯ ಅತಿಥಿಯಾಗಿ ಆಯ್ಕೆಯಾಗಿರುತ್ತಾರೆ.

ಹಾಗೆಯೇ ವಿದ್ಯಾರ್ಥಿ ಕವಿಗೋಷ್ಠಿಯಲ್ಲಿ ಕವನ ವಾಚಕರಾಗಿ ಕು| ಶ್ರೇಷ್ಠಾ ಎಚ್. ತೇಲಿ, ಕು| ಶ್ರೇಯಾ ಎಚ್. ತೇಲಿ, ಕು| ಕುಶಾಲ್ ಎಂ ಹಾಗು ಗುರುಗಾಂವ್ ನ ಕನ್ನಡ ವಿದ್ಯಾರ್ಥಿ ಕು| ತರುಣ್ ಕೆ. ಅವರು ಆಯ್ಕೆಯಾಗಿರುತ್ತಾರೆ. ಇಂದಿನ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ, ಭಾಷಾಭಿಮಾನ, ದೇಶಪ್ರೇಮ, ಪರಿಸರ ಕಾಳಜಿ ಹಾಗು ನೈತಿಕ ಮೌಲ್ಯಗಳನ್ನು ತುಂಬಿ ಅವರನ್ನು ಮುಂದೆ ಉತ್ತಮ ಪ್ರಜೆಗಳಾಗಿ, ಬಾಲ ಕವಿಗಳಾಗಿ ಕಾಣುವ ದ್ಯೇಯೋದ್ದೇಶವನ್ನು ಮಕ್ಕಳ ಸಾಹಿತ್ಯ ಪರಿಷತ್ತು ಹೊಂದಿದೆ. ದೆಹಲಿ ಹಾಗು ಹರಿಯಾಣದಿಂದ ರಾಷ್ಟ್ರೀಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ ಆಗಿರುವ ಇವರಿಗೆ ದೆಹಲಿ ಹಾಗು ಗುರುಗಾಂವ್ ನ ಸಮಸ್ತ ಕನ್ನಡಿಗರ ಪರವಾಗಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ದೆಹಲಿ ಘಟಕವು ಅಭಿನಂದಿಸುತ್ತ ಶುಭಾರೈಸುತ್ತದೆ. ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು(ರಿ), ದೆಹಲಿ ಘಟಕ
Recent comments