Skip to main content
ಭಾರತಕ್ಕೆ ಆಗಮಿಸಿದ ಶ್ರೀಲಂಕಾ ತಂಡ .

ಗುವಾಹಾಟಿಗೆ ಆಗಮಿಸಿದ ಶ್ರೀಲಂಕಾ ಕ್ರಿಕೆಟ್ ತಂಡ

ಗುವಹಾಟಿಗೆ ಆಗಮಿಸಿದ ಶ್ರೀಲಂಕಾ ಕ್ರಿಕೆಟ್ ತಂಡ

ಗುವಾಹಟಿ

ಗುವಾಹಟಿ: ಭಾರತ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಆಡಲು ಲಸಿತ್ ಮಲಿಂಗಾ ನಾಯಕತ್ವದ ಶ್ರೀಲಂಕಾ ತಂಡ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಗುರುವಾರ ಅಸ್ಸಾಂನ ಗುವಾಹಟಿಗೆ ಆಗಮಿಸಿದೆ. ಕಳೆದ ತಿಂಗಳು ಪೌರತ್ವ ಕಾಯಿದೆ ವಿರುದ್ಧ ಇಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಈ ಹಿನ್ನೆೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಶ್ರೀಲಂಕಾ ತಂಡ ನೇರವಾಗಿ ಹೊಟೇಲ್‌ಗೆ ಆಗಮಿಸಿತು.

ಭಾರತ ತಂಡ ಶುಕ್ರವಾರ ಆಗಮಿಸುವ ಸಾಧ್ಯತೆ ಇದೆ. ಸಿಎಎ ವಿರುದ್ಧ ಗುವಾಹಟಿ ನಗರದಾದ್ಯಂತ ಕಳೆದ ತಿಂಗಳು ಭಾರಿ ಪ್ರತಿಭಟನೆ ನಡೆದಿತ್ತು. ಈ ಹಿನ್ನೆೆಲೆಯಲ್ಲಿ ಕರ್ಪ್ಯೂ ವಿಧಿಸಿದ್ದ ಪರಿಣಾಮ ರಣಜಿ ಟ್ರೋಫಿ ಮತ್ತು 19 ವಯೋಮಿತಿ ಪಂದ್ಯವನ್ನು ರದ್ದು ಮಾಡಲಾಗಿತ್ತು. ‘‘ಪ್ರಸ್ತುತ ಇಲ್ಲಿನ ವಾತಾವರಣ ತಣ್ಣಗಾಗಿದ್ದು, ಯಾವುದೇ ಪ್ರತಿಭಟನೆ ನಡೆಯುವ ಸಾಧ್ಯತೆ ಇಲ್ಲ.

ಭಾರತ ಹಾಗೂ ಶ್ರೀಲಂಕಾ ತಂಡಗಳು ಅಭ್ಯಾಸ ಆರಂಭಿಸಬಹುದು. ಅಂತಾರಾಷ್ಟ್ರೀಯ ಪಂದ್ಯದ ಬಳಿಕ ಜನವರಿ 10 ರಿಂದ ಖೋಲೋ ಇಂಡಿಯಾ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದೆ. ಏಳು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಇಲ್ಲಿಗೆ ಆಗಮಿಸಲಿದ್ದಾರೆಂದು,’’ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ತಿಳಿಸಿದ್ದಾರೆ. ಭಾರತ ಹಾಗೂ ಶ್ರೀಲಂಕಾ ನಡುವೆ ಮೊದಲನೇ ಪಂದ್ಯ ಭಾನುವಾರ ನಡೆಯಲಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.