Skip to main content
“ಇಂಡಿಯಾ ವರ್ಸಸ್ ಇಂಗ್ಲೆಂಡ್” ಚಿತ್ರಕ್ಕೆ ಮೆಚ್ಚುಗೆ .

“ಇಂಡಿಯಾ ವರ್ಸಸ್ ಇಂಗ್ಲೆಂಡ್” ಚಿತ್ರಕ್ಕೆ ಮೆಚ್ಚುಗೆ .

ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರಕ್ಕೆ ಮೆಚ್ಚುಗೆ .

“ಇಂಡಿಯಾ ವರ್ಸಸ್ ಇಂಗ್ಲೆಂಡ್” ಚಿತ್ರಕ್ಕೆ ಮೆಚ್ಚುಗೆ .

ಇದು ಸಂತೋಷದ ವಿಷಯ. ಅದರಲ್ಲೂ ಕೊರೊನಾ ಹಾವಳಿಯಿಂದ ಚಿತ್ರಮಂದಿರಗಳು ಮುಚ್ಚಿರುವ ಈ ದಿನಗಳಲ್ಲಿ “ಇಂಡಿಯಾ ವರ್ಸಸ್ ಇಂಗ್ಲೆಂಡ್” ಚಿತ್ರವನ್ನು ದೂರದ ಪಾಕಿಸ್ತಾನದಲ್ಲಿ ಅಭಿಮಾನಿಗಳು ಅಮೆಜಾನ್ ಪ್ರೈಂನಲ್ಲಿ ನೋಡಿ ಮೆಚ್ಚಿಕೊಂಡಿರುವುದು ವೈರಲ್ ಆಗಿದೆ. ಅರವತ್ನಾಲ್ಕು ದೇಶಗಳಲ್ಲಿ. ಇಂಗ್ಗಿಷ್ ಸಬ್ ಟೈಟಲ್ ನೊಂದಿಗೆ ಅಬ್ಬರಿಸುತ್ತಿರುವ ಈ ಚಿತ್ರ ಲಕ್ಷಾಂತರ ಪ್ರೇಕ್ಷಕರನ್ನು ಮುಟ್ಟಿದೆ. ಕೊರೊನಾದಿಂದ ಮನೆಯಲ್ಲಿರಬೇಕಾದ ಮಂದಿಗೆ ಮನೆಯಲ್ಲೇ ಉತ್ತಮ ರಂಜನೆ ನೀಡುತ್ತಿದೆ.

ಹಿಂದಿಯೂ ಸೇರಿ ಇತರ ಭಾಷೆಗಳಿಗೆ ಡಬ್ ಮಾಡಿ ಓಟಿಟಿ ಮೂಲಕವೇ ಹೆಚ್ಚು ಜನರನ್ನು ತಲುಪಲು ನಿರ್ಮಾಪಕರು ಯೋಚಿಸುತ್ತಿದ್ದಾರೆ. ಅಪಾರ ಅಭಿಮಾನಿಗಳನ್ನುಳ್ಳ ಕಲಾವಿದರ ಚಿತ್ರಗಳನ್ನು ಹೊರತುಪಡಿಸಿ ಜನ ಥೇಟರಿಗೆ ಬರುವುದು ಅನುಮಾನ ಮೂಡಿಸಿರುವ ಈ ದಿನಗಳಲ್ಲಿ ಇದು ಆಶಾದಾಯಕ ಬೆಳವಣಿಗೆ. ‘ಇದನ್ನು ಮಾಡಿದ್ದು ಚಿತ್ರಮಂದಿರಗಳ ಭವ್ಯ ಮತ್ತು ವಿಶಾಲ ತೆರೆಗೆ. ಆದರೆ ಚಿತ್ರಮಂದಿರಕ್ಕೆ ಜನ ಬರುವುದು ಕ್ಷೀಣಿಸಿತ್ತು. ಸದಭಿರುಚಿಯ ಚಿತ್ರಗಳು ತಾಳ್ಮೆಯಿಂದ ಕಾಯ್ದರೆ ಭವಿಷ್ಯವಿದೆ ಎನ್ನವುದಕ್ಕೆ ಈ ಚಿತ್ರದ ಯಶಸ್ಸು ಸಾಕ್ಷಿಯಾಗಿದೆ. ಇನ್ನು ಪ್ರಯೋಗಶೀಲರಿಗೆ ಓಟಿಟಿ ಮಾಧ್ಯಮ ಅನಿವಾರ್ಯವೇನೋ’ ಎನ್ನುತ್ತಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.