Skip to main content
ಈ ಗಿಡದ ಎಲೆ ಮುಟ್ಟಿದ್ರೇ ನಮ್ ಪ್ರಾಣ ಇರಲ್ಲ ಯಾಕ್ ಗೊತ್ತಾ.?

ಈ ಗಿಡದ ಒಂದೇ ಒಂದು ಎಲೆಕಿತ್ತರೂ ನಮನ್ನ ಸಾಯಿಸ್ತಾರೆ ಯಾಕ್ ಗೊತ್ತಾ.?

*ಈ ಗಿಡದ ಒಂದೇ ಒಂದು ಎಲೆ‌ಕಿತ್ತರೂ ನಮ್ಮನ್ನ ಸಾಯಿಸುತ್ತಾರೆ..! ಯಾಕೆ ಗೊತ್ತ..?

ಗಿಡ

ನಾವು ಒಂದು ಗಿಡವನ್ನ ನೆಟ್ಟು ಅದನ್ನ ದೊಡ್ಡದು ಬಳಿಕ ಅದನ್ನ ಕಡಿದು ಗೃಪಯೋಗಿ ಕೆಲಸಗಳಿಗೆ ಬಳಸಿಕೊಳ್ಳೊದನ್ನ ನೋಡಿರ್ತಿವಿ ಆದ್ರೆ ಇಲ್ಲಿರೊ ಮರಕ್ಕೆ ದೇಶಾದಲ್ಲಿರುವ ಯಾವ ವಿಐಪಿಗೂ ಕಡಿ ಇಲ್ಲ ಅನ್ನೊ ರೀತಿ ಹೈ ಸೆಕ್ಯೂರಿಟಿಯನ್ನ ನೀಡಿದ್ದಾರೆ.ಅದೆಷ್ಟರ ಮಟ್ಟಿಗೆ ಅಂದ್ರೆ ಈ ಮರದ ಒಂದು ಎಲೆಯನ್ನ ಕಿತ್ತರು ನಮ್ಮ ಎನ್ ಕೌಂಟರ್ ಮಾಡುವ ಪರ್ಮಿಷನ್ ಸಹ ಇಲ್ಲಿನ ಪೊಲೀಸರಿಗೆ ಕೊಟ್ಟಿದ್ದಾರೆ.. ಅಷ್ಟಕ್ಕೂ ಯಾವುದು ಆ ಮರ..? ಅದು ಇರೊದಾದ್ರು ಎಲ್ಲಿ...?ಎಂಬುದನ್ನ ಹೇಳ್ತೀವಿ ಮುಂದೆ ಓದಿ.

ಇದೇ ಗಿಡ ನೋಡಿ.

ಹೌದು ಒಬ್ಬ ವ್ಯಕ್ತಿಗೆ ಹೈ ಸೆಕ್ಯೂರಿಟಿ ಕೊಟ್ಟಿದ್ದಾರೆ ಅಂದ್ರೆ ಆ ವ್ಯಕ್ತಿಯ ಅಶ್ಯಕತೆ ನಮ್ಮ‌ ಸಮಾಜಕ್ಕೆ ಎಷ್ಟಿದೆ ಎಂಬುದು ಗೊತ್ತಿರುತ್ತೆ. ಆದ್ರೆ ಒಂದು ಗಿಡಕ್ಕೆ ದಿನದ ೨೪ ಗಂಟೆನೂ ಫುಲ್ಬ ಸೆಕ್ಯೂರಿಟಿ ಕೊಡ್ತ ಇದ್ದಾರೆ ಅಂದ್ರೆ ನೀವು ನಂಬಲೇಬೇಕು.ಹೌದು ನಾವು ಒಂದು ಗಿಡ ಬೆಳೆಸಬೇಕಂದ್ರೆ ಅದಕ್ಕೆ ನೀರು ಗೊಬ್ಬರ ಹಾಕಿದ್ರೆ ಸಾಕು ಅಲ್ವಾ..? ಆದ್ರೆ ಈ ರೀತಿ ಹೈ ಸೆಕ್ಯೂರಿಟಿ ‌ಅಶ್ಯಕತೆ‌ ಏನಿದೆ ಅಂತ ನಿಮಗೆ ಡೌಟ್ ಬಂದಿರ ಬಹುದು ಇಂತಹ ಗಿಡ ಇರೊದಾದ್ರು ಎಲ್ಲಿ ಅಂದ್ರೆ ಮಧ್ಯ ಪ್ರದೇಶದ‌ ಬೋಪಾಲ್ ನಗರದಲ್ಲಿರು ಸಾಂಚಿ ಸಲಾಂವುದ್ ಪುರ್ ನಲ್ಲಿ‌‌‌ ಇದೆ.

ಗಿಡಕ್ಕೆ ಪೋಷಣೆ ಮಾಡುತ್ತಿರುವ ಚಿತ್ರ.

ಅಂದ ಹಾಗೆ ಈ ಗಿಡದ ಹೆಸರು ಭಗವಾನ್ ಬುದ್ದನಿಗೆ ಜ್ಞಾನೊಧಯವಾದ ಬೋಧಿ ವೃಕ್ಷ..‌ಈ ಭೋದಿ ವೃಕ್ಷವನ್ನ ಇಲ್ಲಿನ ಪೊಲೀಸರು ದಿನದ ೨೪ ಗಂಟೆಗಳು ಕೂಡ ಕಾಯ್ತ ಇರ್ತಾರೆ‌ ಅಂದ್ರೆ‌ ನಾಲ್ಕು ದಿಕ್ಕುಗಳಲ್ಲಿಯೂ ಇಬ್ಬರು ಪೊಲೀಸರನ್ನ ನಿಯೋಜನೆ ಮಾಡಿದ್ದಾರೆ.ಹಾಗೂ ಇದರ ಬಳಿ ಯಾರು ಹೋಗಬಾರದೆಂದು ೧೫ ಅಡಿ ಎತ್ತರದ ಗೇಜ್ ಅನ್ನ ನಿರ್ಮಿಸಿ ರಕ್ಷಣೆ ಮಾಡಲಾಗುತ್ತಿದೆ..ಅಲ್ಲದೆ‌ ಈ ಗಿಡಕ್ಕೆ ಸಾಂಚಿ ಇಂದಲೇ ನೀರನ್ನ ತಂದು ಸಿಂಪಡನೆ ಮಾಡಲಾಗುತ್ತೆ.

ಈ ಗಿಡದ ವಿಶೇಷತೆ

ಅಷ್ಟೇ‌ ಅಲ್ಲದೆ ಈ ಗಿಡ ಆರೋಗ್ಯ ವಾಗಿದೆಯೋ..? ಇಲ್ಲವೊ..? ಎಂದು ತಿಳಿದುಕೊಳ್ಳಲು ಶ್ರೀಲಂಕಾದಿಂದ ವ್ಯೆದ್ಯರನ್ನ ಕರೆಸಿ ಪರೀಕ್ಷೆ ಮಾಡಿಸುತ್ತಾರೆ.. ಅಷ್ಟಕ್ಕೂ ಈ ಗಿಡಕ್ಕೆ ಯಾಕಪ್ಪಾ ಇಷ್ದೊಂದು ಸೆಕ್ಯೂರಿಟಿ ಅಂದ್ರೆ ಬುದ್ದನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯ ‌ಆಗಿದ್ದರಿಂದ ಇಲ್ಲಿ ಸರ್ಕಾರ ಹಾಗೂ ಇಲ್ಲಿನ ಜನತೆ ಪವಿತ್ರಯಿಂದ ಕಾಣುತ್ತಾರೆ‌ ಹೀಗಾಗಿ ಈ ಗಿಡಕ್ಕೆ ಇಷ್ಟೊಂದು ಸೆಕ್ಯೂರಿಟಿ ಇಟ್ಟು ಕಾಪಾಡಿಕೊಳ್ಳುತ್ತಿದ್ದಾರೆ.

ಪೊಲೀಸ್ ಕಾವಲು

ಹಾಗೂ ೨೦೧೨ ರ ಡಿಸೆಂಬರ್ ನಲ್ಲಿ ಆಗಿನ ಶ್ರೀಲಂಕಾದ ಅಧ್ಯಕ್ಷರಾದ ರಾಜಪಕ್ಸೆ ಅವರು ಈ ಗಿಡವನ್ನ ನೆಟ್ಟರು. ಅಲ್ಲದೆ ವರ್ಷಕ್ಕೆ ಸುಮಾರು ೧೨ ಲಕ್ಷ ರೂಪಾಯಿ ಅನ್ನ ಖರ್ಚು ಮಾಡ್ತಾರಂತೆ..ಏನೇ ಆಗಲಿ ವಿಐಪಿ, ವಿವಿಐಗಳಿಗೆ ನೀಡುವ ಸೆಕ್ಯೂರಿಟಿಯನ್ನ ಪಡೆದುಕೊಳ್ಳುತ್ತಿರುವ ಈ ಗಿಡ ಲಕ್ಕಿ ಟ್ರೀ ಅಂತಾನೇ ಹೇಳಬಹುದು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.