Skip to main content
ಟ್ರೇಲರ್ ಬಿಡುಗಡೆ ಮಾಡಿ, ದಿಗಂತ್ ಗೆ "ಹುಟ್ಟುಹಬ್ಬದ ಶುಭಾಶಯಗಳು" ಎಂದರು ರಿಯಲ್ ಸ್ಟಾರ್ ಉಪೇಂದ್ರ.

ಟ್ರೇಲರ್ ಬಿಡುಗಡೆ ಮಾಡಿ, ದಿಗಂತ್ ಗೆ "ಹುಟ್ಟುಹಬ್ಬದ ಶುಭಾಶಯಗಳು" ಎಂದರು ರಿಯಲ್ ಸ್ಟಾರ್ ಉಪೇಂದ್ರ.

ಟ್ರೇಲರ್ ಬಿಡುಗಡೆ ಮಾಡಿ, ದಿಗಂತ್ ಗೆ "ಹುಟ್ಟುಹಬ್ಬದ ಶುಭಾಶಯಗಳು" ಎಂದರು ರಿಯಲ್ ಸ್ಟಾರ್ ಉಪೇಂದ್ರ.

Kannada new film

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಮೂಲಕ ಟ.ಆರ್.ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್ ನಿರ್ಮಿಸಿರುವ, ದಿಗಂತ್ ನಾಯಕರಾಗಿ ನಟಿಸಿರುವ "ಹುಟ್ಟುಹಬ್ಬದ ಶುಭಾಶಯಗಳು" ಚಿತ್ರದ ಟ್ರೇಲರನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದರು. ನಾನು ಈ ಸಂಸ್ಥೆಯ "ಬುದ್ದಿವಂತ 2" ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ನಿಜವಾದ ಬುದ್ಧಿವಂತರು ಎಂದರೆ ಈ ಚಿತ್ರದ ನಿರ್ಮಾಪಕರು ಎಂದು ಮಾತು ಆರಂಭಿಸಿದ ಉಪೇಂದ್ರ ವರ್ಷದ ಕೊನೆಗೆ ಬರುತ್ತಿರುವ ಈ ಚಿತ್ರಕ್ಕೆ ಒಳ್ಳೆಯದಾಗಲಿ. ಅದಕ್ಕೂ ಮುನ್ನ ಇಪ್ಪತ್ತೆಂಟರಂದು ನಾಯಕ ದಿಗಂತ್ ಹುಟ್ಟುಹಬ್ಬ.‌ ಅವರಿಗೂ ಹಾಗೂ ಚಿತ್ರಕ್ಕೆ ಶುಭಾಶಯ ತಿಳಿಸಿದರು. ನಮ್ಮ ಸಂಸ್ಥೆಯ ಮೊದಲ ಚಿತ್ರ "ಚಮಕ್" ಸಹ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಿದ್ದೆವು. ಈಗ ಈ ಚಿತ್ರ ಸಹ ಇದೇ ತಿಂಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಮೂಲತಃ ಎಂಜಿನಿಯರ್ ಆಗಿರುವ ನಾಗರಾಜ್ ಬೆತ್ತುರ್ ಅವರ ಸಾರಥ್ಯದಲ್ಲಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಉಪೇಂದ್ರ ಅವರಿಗೆ ಧನ್ಯವಾದ ಎಂದರು ನಿರ್ಮಾಪಕ ಟಿ.ಆರ್.ಚಂದ್ರಶೇಖರ್. ನಮ್ಮ ರಾಜ್ಯದಲ್ಲಿ ನಮ್ಮ ಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ. ನಮ್ಮ ಚಿತ್ರಗಳಿಗೆ ಚಿತ್ರಮಂದಿರ ದೊರಕುವಂತೆ ಮಾಡಿ ಎಂದು ಮನವಿ ಮಾಡಿದರು ನಿರ್ಮಾಪಕ ನಂದಕಿಶೋರ್. ಇದು ನನ್ನ ಮೊದಲ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿರುವುದರಿಂದ ಹೆಚ್ಚು ಕಥೆ ಹೇಳುವ ಹಾಗಿಲ್ಲ. ಅವಕಾಶ ನೀಡಿದ ನಿರ್ಮಾಪಕರಿಗೆ , ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ನಾಗರಾಜ್ ಬೆತ್ತುರ್.

ಅವರದೇ ನಿರ್ದೇಶನದ ಚಿತ್ರವೊಂದರ ಸ್ಕ್ರಿಪ್ಟ್ ರಚನೆಯಲ್ಲಿ ಬ್ಯುಸಿಯಿದ್ದರೂ, ನನ್ನ ಮನವಿಗೆ ಸ್ಪಂದಿಸಿ ಬಂದಿರುವ ಉಪೇಂದ್ರ ಅವರಿಗೆ ಧನ್ಯವಾದ. ನಿರ್ದೇಶಕರು ಹೇಳಿದ ಹಾಗೆ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರ ಆಗಿರುವುದರಿಂದ ಹೆಚ್ಚು ಹೇಳುವ ಹಾಗಿಲ್ಲ. ಒಟ್ಟಿನಲ್ಲಿ ಉತ್ತಮ ಚಿತ್ರ ಅಂತ ಹೇಳಬಹುದು.‌ ಡಿಸೆಂಬರ್ 31 ರಂದು ಚಿತ್ರ ತೆರೆಗೆ ಬರುತ್ತಿದೆ.‌ ನಿಮ್ಮ ಬೆಂಬಲವಿರಲಿ ಎಂದರು ದಿಗಂತ್. ನಾಯಕಿ ಕವಿತಾ ಗೌಡ, ಶರಣ್ಯ ಶೆಟ್ಟಿ, ಮನು, ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಮುಂತಾದವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ಮಾಪಕ ಭಾ‌‌ ಮ ಹರೀಶ್, ಸಂಗಾತಿ ವೆಂಕಟೇಶ್, ಮಂಜು ಪಾವಗಡ, ಪ್ರಥಮ್, ನಿರ್ದೇಶಕ‌ ಮಹೇಶ್ ಕುಮಾರ್, ಜಾಕಿ ಮುಂತಾದ ಗಣ್ಯರು ಟ್ರೇಲರ್ ಬಿಡುಗಡೆ ‌ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.