ಅಪ್ಸರೆ ಅರ್ಚನಾ ಕೈ ಹಿಡಿದ ಕ್ರಿಕೆಟಿಗ.
ಅಪ್ಸರೆ ಅರ್ಚನಾ ಕೈಹಿಡಿದ ಕೆ.ಗೌತಮ್
ಕರ್ನಾಟಕ ಕ್ರಿಕೆಟ್ ತಂಡದ ಆಲ್ ರೌಂಡರ್ ಕೆ.ಗೌತಮ್, ಗೆಳತಿ ಅರ್ಚನ ಜೊತೆ ಸಪ್ತಪದಿ ತುಳಿದಿದ್ದಾರೆ. ಹೆಗ್ಗೆಡೆ ನಗರ ಬಳಿ ಇರುವ ಇಬಿಸು ಸ್ಟುಡಿಯೋದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಗೌತಮ್, ಗೆಳತಿ ಅರ್ಚನರನ್ನ ವರಿಸಿದ್ರು. ಕಳೆದ ಮೂರು ನಾಲ್ಕು ವರ್ಷಗಳಿಂದ ಗೌತಮ್ ಮತ್ತು ಅರ್ಚನ ಇಬ್ಬರು ಪ್ರೀತಿಸುತ್ತಿದ್ರು. ಇತ್ತೀಚೆಗೆ ಕರ್ನಾಟಕ ತಂಡ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ನಲ್ಲಿ ಗೆಲುವು ಸಾಧಿಸಲು ಕೆ.ಗೌತಮ್ ಪ್ರಮುಖ ಪಾತ್ರ ವಹಿಸಿದ್ರು. ಕೊನೆಯ ಓವರ್ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದ ಕೆ.ಗೌತಮ್, ತಮಿಳುನಾಡು ತಂಡವನ್ನ ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದ್ರು.
Recent comments