Skip to main content
ವರಮಹಾಲಕ್ಷ್ಮಿ ಹಬ್ಬದಲ್ಲಿ ವಿಕ್ರಂ ರವಿಚಂದ್ರನ್ 'ತ್ರಿವಿಕ್ರಮ'ನಿಗೆ ಸಿಕ್ತು ಚಿನ್ನದಂತಾ ಬೆಲೆ..!

ವರಮಹಾಲಕ್ಷ್ಮಿ ಹಬ್ಬದಲ್ಲಿ ವಿಕ್ರಂ ರವಿಚಂದ್ರನ್ 'ತ್ರಿವಿಕ್ರಮ'ನಿಗೆ ಸಿಕ್ತು ಚಿನ್ನದಂತಾ ಬೆಲೆ..!

ವರಮಹಾಲಕ್ಷ್ಮಿ ಹಬ್ಬದಲ್ಲಿ ವಿಕ್ರಂ ರವಿಚಂದ್ರನ್ 'ತ್ರಿವಿಕ್ರಮ'ನಿಗೆ ಸಿಕ್ತು ಚಿನ್ನದಂತಾ ಬೆಲೆ..!

​    ​​    ​ವಿಕ್ರಂ ರವಿಚಂದ್ರನ್

ವಿಕ್ರಂ ರವಿಚಂದ್ರನ್.. ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಬೇಕು, ರಾರಾಜಿಸಬೇಕು ಅಂತ ಕನಸು ಹೊತ್ತು ಸಜ್ಜಾಗಿರೋ ಜ್ಯೂನಿಯರ್ ಕನಸುಗಸರ.. ರವಿಚಂದ್ರನ್ ಮಗ ಅನ್ನೋ ಹಣೆ ಪಟ್ಟಿ ಇಲ್ಲದೇ ಸಿನಿಮಾದಲ್ಲಿ ತನ್ನ ಟ್ಯಾಲೆಂಟ್ ತೋರಿಸಿ ಸ್ಟಾರ್ ನಟನಾಗಬೇಕು ಅನ್ನೋ ಮಹದಾಸೆಯನ್ನಿಟ್ಟುಕೊಂಡಿರೋ ಹುಡುಗ.. ಅಪ್ಪ ರವಿಚಂದ್ರನ್ ಸ್ಟಾರ್ ಆಗಿದ್ರೂ ಕೂಡ, ಅಪ್ಪನ ಸ್ಟಾರ್ ವ್ಯಾಲ್ಯೂವನ್ನ ಬಳಸಿಕೊಳ್ಳದೆ ಬೇರೆ ಸಿನಿಮಾಗಳಲ್ಲಿ ಒಬ್ಬ ಕಾರ್ಮಿಕನಂತೆ‌ ದುಡಿದು ಸಿನಿಮಾ ಎಕ್ಸ್ ಪೀರಿಯನ್ಸ್ ಪಡೆದುಕೊಂಡ ಹುಡುಗ ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ‌ ಪುತ್ರ‌ ವಿಕ್ರಂ ರವಿಚಂದ್ರನ್.. ವಿಕ್ಕಿ ಈಗ 'ತ್ರಿವಿಕ್ರಮ' ಸಿನಿಮಾ ಮಾಡುತ್ತಿದ್ದಾರೆ.. ವಿಕ್ರಂ ಹೆಸರಿಗೆ, ನಟನಾ ಟ್ಯಾಲೆಂಟ್ ಗೆ, ಲುಕ್, ಮ್ಯಾನರಿಸಂ ಗೆ ತಕ್ಕಂಥ ಕಥೆಯನ್ನ ನಿರ್ದೇಶಕ ಸಹನಾ ಮೂರ್ಥಿ ಕೆತ್ತಿ ಸಿದ್ಧಪಡಿಸಿ ಶೂಟಿಂಗ್ ಕೂಡ ಮಾಡಿದ್ದಾರೆ.

ಸಹನಾ ಮೂರ್ತಿ ರವಿಚಂದ್ರನ್ ಎರಡನೇ ಪುತ್ರನ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಅಂದ ಮೇಲೆ ಆ ಸಿನಿಮಾದ ಮೇಲಿನ ನಿರೀಕ್ಷೆ ಒಂದು ಹಿಡಿ ಹೆಚ್ಚೇ ಇರುತ್ತೆ. ಅದನ್ನ ಸಹನಾ ಮೂರ್ತಿ ಫುಲ್ ಫಿಲ್ ಮಾಡಿದ್ದಾರೆ ಅನ್ನೋದು ಈಗಾಗ್ಲೆ ಬಂದಿರೋ ತ್ರಿವಿಕ್ರಮ ಸಿನಿಮಾ ಫಸ್ಟ್ ಲುಕ್ ಟೀಸರ್ ಗಳೇ ಸಾರಿ ಸಾರಿ ಹೇಳ್ತಿವೆ.. ಇದೀಗ ವತಮಹಾ ಲಕ್ಷ್ಮಿ ಹಬ್ಬದಂದು ತ್ರಿವಿಕ್ರಮನ ಜೋಳಿಗೆಗೆ ಲಕ್ಷ್ಮಿ ಬಂದು ಸೇರಿದ್ದಾಳೆ.. ಆಡಿಯೋ ಹಕ್ಕಿನಲ್ಲಿ 'ತ್ರಿವಿಕ್ರಮ'ನ ಪರಾಕ್ರಮ..! ಜ್ಯೂನಿಯರ್ ಕನಸುಗಾರ ವಿಕ್ರಂ ರವಿಚಂದ್ರನ್‌ ಚಿತ್ರರಂಗಕ್ಕೆ ಡೆಬ್ಯೂ ಆಗ್ತಿರೋ‌ ಸಿನಿಮಾ ತ್ರಿವಿಕ್ರಮ.

ಸಹನಾ ಮೂರ್ತಿ ಸಿಕ್ಕಾಪಟ್ಟೆ ಮುತ್ತುವರ್ಜಿ ವಹಿಸಿ ವಿಕ್ಕಿಗಾಗೇ ಈ ಸಿನಿಮಾ ಸಿದ್ಧಪಡಿಸಿದ್ದಾರೆ. ನಿರ್ಮಾಪಕ ಸೋಮಣ್ಣ ಜ್ಯೂನಿಯರ್ ಕ್ರೇಜಿಸ್ಟಾರ್ ಅನ್ನ ಸಕ್ಕತ್ತಾಗಿ ತೋರಿಸಬೇಕು, ಅದೆಷ್ಟೇ ಕರ್ಚಾದ್ರು ಪರವಾಗಿಲ್ಲ ಅಂತ 'ತ್ರಿವಿಕ್ರಮ'ನಿಗಾಗಿ ಕೋಟಿ ಕೋಟಿ ಬಂಡವಾಳ ಸುರಿದಿದ್ದಾರೆ.. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ತ್ರಿವಿಕ್ರಮನ ಎರಡು ಹಾಡುಗಳ ಚಿತ್ರೀಕರಣವನ್ನ ಭಾರತ ಚೀನಾ, ಭಾರತ, ಪಾಕಿಸ್ತಾನ ಗಡಿಗಳಲಗಲಿ ಚಿತ್ರೀಕರಸೋಕೆ ಪ್ಲಾನ್ ಮಾಡಿರೋದು.. ನಿರ್ಮಾಪಕ ಸೋಮಣ್ಣರ ಈ ಎಫರ್ಟ್ ಗೆ ಈಗ ಚಿನ್ನದಂತಾ ಬೆಲೆ ಬಂದಿದೆ. ಯಾಕಂದ್ರೆ ತ್ರಿವಿಕ್ರಮ ಸಿನಿಮಾದ ಹಾಡುಗಳು ಮಾರಾಟವಾಗಿದ್ದು ವಿಕ್ರಂ ಮೊದಲ ಸಿನಿಮಾದಲ್ಲೇ ದಾಖಲೆ ಬರೆದಿದ್ದಾರೆ... 50 ಲಕ್ಷಕ್ಕೆ ಸೇಲ್ ಆಯ್ತು 'ತ್ರಿವಿಕ್ರಮ' ಸಾಂಗ್ಸ್..! ಯೆಸ್, ಜ್ಯೂನಿಯರ್ ಕನಸುಗಾರ ವಿಕ್ಕಿಯ ತ್ರಿವಿಕ್ರಮನಿಗೆ‌ ಭಾರಿ‌ ಡಿಮ್ಯಾಂಡ್ ಬಂದಿದೆ.

ವರಮಹಾಲಕ್ಷ್ಮಿ ಹಬ್ಬದಲ್ಲಿ ವಿಕ್ರಂ ರವಿಚಂದ್ರನ್ 'ತ್ರಿವಿಕ್ರಮ'ನಿಗೆ ಸಿಕ್ತು ಚಿನ್ನದಂತಾ ಬೆಲೆ..!

ಇದರ ಮೊದಲ ಹೆಜ್ಜೆಯಂತೆ ತ್ರಿವಿಕ್ರಮ ಸಿನಿಮಾದ ಆಡಿಯೋ ಹಕ್ಕು 50 ಲಕ್ಷಕ್ಕೆ ಮಾರಾಟವಾಗಿದೆ. ಎ2 ಮ್ಯೂಸಿಕ್ ಆಡಿಯೋ ಸಂಸ್ಥೆ ತ್ರಿವಿಕ್ರಮನ ಹಾಡುಗಳ್ಳ ಕೇಳಿ ಖುಷಿ ಯಿಂದ ಡಿಮ್ಯಾಂಡ್ ಮಾಡಿ ಹಾಡುಗಳನ್ನ ಖರೀದಿಸಿದೆ.. ಒಬ್ಬ ಸ್ಟಾರ್ ಹೀರೋನಾ ಸಿನಿಮಾದ ಹಾಡುಗಳೇ 50 ಲಕ್ಷಕ್ಕೆ ಬಿಕರಿಯಾಗೀದು ತೀರಾ ಅಪರೂಪ, ಅಂತದ್ರಲ್ಲಿ ವಿಕ್ರಂ ರವಿಚಂದ್ರನ್ ಮೊದಲ‌ ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು, ತ್ರಿವಿಕ್ರಮ ಸಿನಿಮಾದ ಕ್ರೆಡಿಬಲಿಟಿಯನ್ನ ತೋರಿಸುತ್ತೆ.. ತ್ರಿವಿಕ್ರಮ‌ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗು ಯೋಗರಾಜ್ ಭಟ್ ಹಾಡುಗಳನ್ನ ಬರೆದಿದ್ದಾರೆ. ಅರ್ಜುನ್ ಜನ್ಯ ಭರ್ಜರಿ‌ ಮ್ಯೂಸಿಕ್ ಟ್ಯೂನ್ ಕೊಟ್ಟಿದ್ದು, ವಿಜಯ್ ಪ್ರಕಾಶ್, ಹಾಗು ಸಂಚಿತ್ ಹೆಗಡೆ‌ ಹಾಡುಗಳಿಗೆ ಧ್ವನಿಯಾಗಿದ್ದಾರೆ.. ತ್ರಿವಿಕ್ರಮ‌ ಸಿನಿಮಾದ ಹಾಗಳ ಸೌಂಡು ಮಾರುಕಟ್ಟೆಯಲ್ಲಿ ಜೋರಾಗಿದ್ದು, ಸಿನಿಮಾದ ಮೇಲಿರೋ ನಿರೀಕ್ಷೆಯನ್ನ ಚಿತ್ರತಂಡ ಉಳಿಸಿಕೊಳ್ಳುತ್ತೆ ಅನ್ನೋದಕ್ಕೆ‌ ಇದೇ ಸಾಕ್ಷಿ..

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.