Skip to main content
ನ1 ರಂದು ಕನ್ನಡ ಶಾಲೆಗಳ ಉಳಿವಿಗಾಗಿ ಅಭಿಯಾನ. ಚಿತ್ರನಟಿ ಡಾ. ಪೂಜ ರಮೇಶ್

ನ1 ರಂದು ಕನ್ನಡ ಶಾಲೆಗಳ ಉಳಿವಿಗಾಗಿ ಅಭಿಯಾನ. ಚಿತ್ರನಟಿ ಡಾ. ಪೂಜ ರಮೇಶ್

ನ1 ರಂದು ಕನ್ನಡ ಶಾಲೆಗಳ ಉಳಿವಿಗಾಗಿ ಅಭಿಯಾನ. ಚಿತ್ರನಟಿ ಡಾ. ಪೂಜ ರಮೇಶ್.

Raichur

ರಾಯಚೂರು. ವಿದ್ಯಾರ್ಥಿಗಳಿದ್ದರೆ ಶಿಕ್ಷಕರಿಲ್ಲ. ಶಿಕ್ಷಕರಿದ್ದರೆ ವಿದ್ಯಾರ್ಥಿಗಳಿಲ್ಲ. ಇಬ್ಬರಿದ್ದರು ಶಾಲ ಕೊಠಡಿಗಳಿಲ್ಲ. ಇಂಥ ದುಸ್ಥಿತಿಯಲ್ಲಿ ನಮ್ಮ ರಾಜ್ಯದಲ್ಲಿ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪರಿಸ್ಥಿತಿ ಆಗಿದೆ. ಯಾವ ಸರ್ಕಾರ ಇದರ ಬಗ್ಗೆ ಗಂಭೀರವಾದ ಚಿಂತನೆಗಳನ್ನು ಮಾಡುತ್ತಿಲ್ಲ ಇಲ್ಲಿ ಇಂತಹ ಸರ್ಕಾರಿ ಶಾಲೆಗಳಲ್ಲಿ ಓದುವವರೆಲ್ಲ ಬಡ ಮತ್ತು ಮಧ್ಯಮ ಮತ್ತು ಕೂಲಿಕಾರ್ಮಿಕರ ಮಕ್ಕಳು ಬುಡಕಟ್ಟು ಜನಾಂಗ ಅಲೆಮಾರಿ ಜನಾಂಗ .ಸ್ಲಂ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಾರೆ. ಆದರೆ ಶ್ರೀಮಂತರ ಮಕ್ಕಳು ಶಾಸಕರ ಸಚಿವರ ಮಕ್ಕಳು ಉದ್ಯಮಿಗಳ ಮಕ್ಕಳು ದೊಡ್ಡ ದೊಡ್ಡ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ ಕರ್ನಾಟಕ ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಯಾವ ಶಾಲೆಗಳು ಮುಚ್ಚಿವೆ ಅವುಗಳನ್ನು ಆರಂಭಿಸುವಂತೆ ಒತ್ತಾಯಿಸಿ ನವಂಬರ್ 1 ಕನ್ನಡ ರಾಜ್ಯೋತ್ಸವ ದಿನ ಈ ರಾಜ್ಯದಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ಅಭಿಯಾನವನ್ನು ಆರಂಭಿಸುತ್ತಿದ್ದೇನೆ ಎಂದು ಚಿತ್ರನಟಿ. ಸಮಾಜ ಸೇವಕಿ. ವಸಂತ ಲಕ್ಷ್ಮಿ ಫೌಂಡೇಶನ್ ಅಧ್ಯಕ್ಷರಾದ ಡಾ. ಪೂಜಾ ರಮೇಶ ಅವರು ಪತ್ರಿಕೆಗೆ ತಿಳಿಸಿದ್ದಾರೆ.

ನ1 ರಂದು ಕನ್ನಡ ಶಾಲೆಗಳ ಉಳಿವಿಗಾಗಿ ಅಭಿಯಾನ. ಚಿತ್ರನಟಿ ಡಾ. ಪೂಜ ರಮೇಶ್

ಅವರು ಈ ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಸಾಕಷ್ಟು ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿವೆ ಅವುಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿ ಈಗಾಗಲೇ ಸರ್ಕಾರದ ಮೇಲೆ ಒತ್ತಡ ತರಲು ಚಿಂತನೆ ನಡೆಸುತ್ತಿದ್ದು. ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಶಿಕ್ಷಣ ಸಚಿವರಿಗೆ ಕನ್ನಡ ಶಾಲೆಗಳ ಉಳಿವಿಗಾಗಿ ಮನವಿ ಪತ್ರವನ್ನು ವಸಂತ ಲಕ್ಷ್ಮಿ ಫೌಂಡೇಶನ್ ವತಿಯಿಂದ ನೀಡಲಾಗುವುದು. ಕರಾವಳಿ ತೀರದಲ್ಲಿ ಮತ್ತು ಈ ಬಂಡಿಪುರ ನಾಗರಹೊಳೆ ಆ ಭಾಗದಲ್ಲಿರುವಂತ ಸಾಕಷ್ಟು ಜನ ಬಡ ಮಕ್ಕಳಿಗೆ ಅನುಕೂಲವಾಗುವ ಸರ್ಕಾರಿ ಶಾಲೆಗಳು ಅವಶ್ಯಕತೆ ಇದೆ ಇದಲ್ಲದೆ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಇರುವ ಸಾಕಷ್ಟು ಹಳ್ಳಿಗಳಲ್ಲಿ ಇರುವಂತ ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚಿ ಹೋಗಿವೆ ಇವುಗಳನ್ನು ಆರಂಭಿಸಲೇಬೇಕೆನ್ನುವುದು ನನ್ನ ಒಂದು ಒತ್ತಾಯವಾಗಿದೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಕನ್ನಡದ ಬಗ್ಗೆ ನಾವು ಮಾತನಾಡುತ್ತೇವೆ ಆದರೆ ಕನ್ನಡ ಶಾಲೆಗಳ ಬಗ್ಗೆ ಗಂಭೀರವಾದ ಚಿಂತನೆಯನ್ನು ನಾವೆಲ್ಲ ಮಾಡಬೇಕಾಗುತ್ತದೆ ಇದು ನಮ್ಮ ಕನ್ನಡಿಗರ ಕರ್ತವ್ಯವಾಗಿದೆ. ಕರ್ನಾಟಕ ರಾಜ್ಯ ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ಮುಂದೆ ಬರಬೇಕಾಗಿದೆ ಈ ನಿಟ್ಟಿನಲ್ಲಿ ಆಯಾ ಭಾಗದ ಶಾಸಕರು ಸಹ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ ಈ ರಾಜ್ಯದಲ್ಲಿ ಎಷ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳಿವೆ ಆಗಿರುತ್ತವೆ, ಹೀಗಾಗಿ ಸರ್ಕಾರಿ ಶಾಲೆಗಳ ಬಗ್ಗೆ ಯಾರು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ .ಈ ನಿಟ್ಟಿನಲ್ಲಿ ನಾನು ನವಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ದಿನದಂದೇ ಅಭಿಯಾನದ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟು ಸರ್ಕಾರಿ ಶಾಲೆಗಳನ್ನು ಪುನರಾರಂಭಿಸಬೇಕು ಮತ್ತು ಎಲ್ಲೆಲ್ಲಿ ಶಾಲೆಗಳಿಗೆ ಶಿಕ್ಷಕರಿಲ್ಲ ಭರ್ತಿ ಮಾಡಬೇಕು ವಿದ್ಯಾರ್ಥಿಗಳಿಲ್ಲದ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಕಳಿಸುವ ಒಂದು ವ್ಯವಸ್ಥೆಯನ್ನು ಮಾಡಬೇಕು .ಸರ್ಕಾರ ಎಲ್ಲಾ ಯೋಜನೆಗಳನ್ನು ಮಾಡಿ ಎಲ್ಲೆಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿವೆ ನಾನು ಆಯಾ ಊರುಗಳಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಆ ಶಾಲೆಯ ಪರಿಸ್ಥಿತಿ ಮತ್ತು ನಾನು ಸರ್ಕಾರಕ್ಕೆ ಮನದಟ್ಟಣೆ ಮಾಡುತ್ತೇನೆ ಈ ರಾಜ್ಯದಲ್ಲಿ ಎಷ್ಟೋ ಜನ ಸರ್ಕಾರಿ ಶಾಲೆಯಿಂದಾನೆ ಇವತ್ತು ಉನ್ನತ ಹುದ್ದೆಯಲ್ಲಿದ್ದಾರೆ ರಾಜಕಾರಣಿಗಳಾಗಿದ್ದಾರೆ.

ಸರ್ಕಾರಿ ಶಾಲೆಗಳ ಬಗ್ಗೆ ಯಾರೂ ನಿರ್ಲಕ್ಷತನ ತೋರಬಾರದು ಎನ್ನುವುದೇ ನನ್ನ ಪ್ರಮುಖ ಉದ್ದೇಶವಾಗಿದೆ. ನಾನು ಖುದ್ದಾಗಿ ಎಲ್ಲೆಲ್ಲಿ ಶಾಲೆಗಳು ಮುಚ್ಚಿ ಹೋಗಿವೆ ಆ ಶಾಲೆಗಳಿಗೆ ಭೇಟಿ ಕೊಡಲಿದ್ದೇನೆ.. ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದಲೇ ಕನ್ನಡ ಶಾಲೆಗಳ ಉಳಿವಿಗಾಗಿ ಅಭಿಯಾನವನ್ನು ಆರಂಭಿಸುತ್ತಿದ್ದೇನೆ. ಯಾಕಂದ್ರೆ ಆ ಕ್ಷೇತ್ರದ ಶಾಸಕರೇ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದಾರೆ .ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹೆಬ್ರಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಶಾಲೆಗಳು ಮುಚ್ಚಿ ಹೋಗಿವೆ ಅಂದರೆ ಬೇರೆ ಶಾಲೆಗಳಿಗೆ ವಿಲೀನ ಮಾಡಿದ್ದಾರೆ .ನಾನು ಖುದ್ದಾಗಿ ಆ ಗ್ರಾಮದಿಂದಾನೆ ಆರಂಭಿಸಬೇಕೆಂದು ನಾನು ಅಂದುಕೊಂಡಿದ್ದೇನೆ . ನಾನು ಅಪ್ಪಟ ಕನ್ನಡತಿ ಆಗಿರೋದ್ರಿಂದ ಕನ್ನಡ ಶಾಲೆಗಳ ಬಗ್ಗೆ ನನಗೆ ಬಹಳ ಗೌರವವಿದೆ ಆ ಶಾಲೆಗಳ ಉಳಿವಿಗಾಗಿ ನಾನು ಈ ಒಂದು ಅಭಿಯಾನವನ್ನು ಆರಂಭಿಸುತ್ತಿದ್ದೇನೆ..

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.