Skip to main content
ಮೆಗಾಸ್ಟಾರ್ ಚಿರಂಜೀವಿ ಸೊಸೆ ಉಪಾಸಾನ ಹೊಸ ಸಾಹಸ.URLife ವೆಬ್ಸೈಟ್ಗೆ ಅತಿಥಿ ಸಂಪಾದಕಿಯಾದ  ರಶ್ಮಿಕಾ .

ಮೆಗಾಸ್ಟಾರ್ ಚಿರಂಜೀವಿ ಸೊಸೆ ಉಪಾಸಾನ ಹೊಸ ಸಾಹಸ.URLife ವೆಬ್ಸೈಟ್ಗೆ ಅತಿಥಿ ಸಂಪಾದಕಿಯಾದ ರಶ್ಮಿಕಾ .

ಮೆಗಾಸ್ಟಾರ್ ಚಿರಂಜೀವಿ ಸೊಸೆ ಉಪಾಸನಾ ಹೊಸ ಸಾಹಸ; URLife.co.in. ವೆಬ್​ಸೈಟ್​ಗೆ ಅತಿಥಿ ಸಂಪಾದಕಿಯಾದ ರಶ್ಮಿಕಾ ಮಂದಣ್ಣ.

Kannada new film

ತೆಲುಗಿನ ಖ್ಯಾತ ನಟ ಚಿರಂಜೀವಿ ಅವರ ಸೊಸೆ, ರಾಮ್​ಚರಣ್ ತೇಜ ಅವರ ಪತ್ನಿ ಉಪಾಸನಾ ಕಮಿನೇನಿ ಕೊನಿಡೇಲಾ ಅವರೀಗ ಆನ್​ಲೈನ್​ನಲ್ಲಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಅವರ ಆ

Kannada new film

ಸಾಹಸಕ್ಕೆ ಸದ್ಯ ಟ್ರೆಂಡಿಂಗ್​ನಲ್ಲಿರುವ ಕನ್ನಡತಿ, ಸೌತ್ ಸೆನ್ಸೆಷನಲ್ ರಶ್ಮಿಕಾ ಮಂದಣ್ಣ ಕೈ ಜೋಡಿಸಿದ್ದಾರೆ.

ಆರೋಗ್ಯ, ಲೈಫ್​ಸ್ಟೈಲ್, ಮಾನಸಿಕ ಮತ್ತು ದೈಹಿಕ ಆರೋಗ್ಯ, ಪ್ರಸ್ತುತ ಟ್ರೆಂಡಿಂಗ್ ವಿಚಾರಗಳನ್ನು ಯೂಆರ್​ಲೈಫ್​ ಮೂಲಕ ಉಪಾಸನಾ ಹೇಳಹೊರಟಿದ್ದಾರೆ. URLife.co.in. ಅನ್ನೋ ನೂತನ ವೆಬ್​ಸೈಟ್​ ತೆರೆದಿದ್ದು, ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಉಪಾಸನಾ ಉಸ್ತುವಾರಿ ವಹಿಸಿಕೊಂಡರೆ, ಈ ಹಬ್ಬದ ಸಮಯದಲ್ಲಿ ಅತಿಥಿ ಸಂಪಾದಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ, URLife.co.in. ಎಂಬುದು ಒಂದು ಆರೋಗ್ಯಕರ ವೇದಿಕೆ. ಇಲ್ಲಿ ಆಯ್ದ ಕೆಲ ಕ್ಷೇತ್ರಗಳ ನುರಿತ ಪರಣಿತರು, ವೈದ್ಯರು ಸದ್ಯದ ಲೈಫ್​​ಸ್ಟೈಲ್, ತಂತ್ರಜ್ಷಾನದ ಬಗ್ಗೆ ಈ ವೇದಿಕೆ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.

Kannada new film

ಓದುಗರಿಗೆ ಅತ್ಯುತ್ತಮವಾದ ಡಯಟ್​ ಟಿಪ್ಸ್, ನುರಿತವರಿಂದ ಉಪಯುಕ್ತ ಮಾಹಿತಿ, ಉಚಿತ ತರಗತಿಗಳು, ವಿಡಿಯೋ ಮಾಹಿತಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯೂ ಬೆರಳ ತುದಿಯಲ್ಲಿಯೇ URLife.co.in. ನಲ್ಲಿ ಲಭ್ಯವಾಗಲಿದೆ. ಈ ವಿಶೇಷಗಳ ಗುಚ್ಛದ URLife.co.in. ಗೆ ಈ ಸಲದ ಗೆಸ್ಟ್​ ಎಡಿಟರ್​ ಆಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದು, ಅವರನ್ನೇ ಆಯ್ದುಕೊಳ್ಳುವುದಕ್ಕೆ ಒಂದಷ್ಟು ಅಂಶಗಳನ್ನು ಸ್ವತಃ ಉಪಾಸನಾ ಹೇಳಿಕೊಂಡಿದ್ದಾರೆ. ರಶ್ಮಿಕಾ ಸದು ನಗುಮೊಗದ ಮತ್ತು ಪಾಸಿಟಿವ್​ ವೈಬ್​ಅನ್ನು ತನ್ನೊಳಗೆ ಇಟ್ಟುಕೊಂಡಿರುವ ನಟಿ. ಕೋಟ್ಯಂತರ ಯುವ ಪೀಳಿಗೆಯ ನೆಚ್ಚಿನ ನಟಿಯಾಗಿ ಗುರುತಿಸಿಕೊಳ್ಳುವುದರ ಜತೆಗೆ ನಗುವಿನ ಮೂಲಕವೇ ಆರೋಗ್ಯಕರ ಸಂದೇಶವನ್ನು ನೀಡುತ್ತಿದ್ದಾರೆ. ಅದು URLife.co.in. ನಲ್ಲಿಯೂ ಮುಂದುವರಿಯಲಿದೆ ಎಂಬುದು ಉಪಾಸನಾ ಮಾತು. ಸೋಷಿಯಲ್ ಮೀಡಿಯಾದಲ್ಲಿ 10 ಮಿಲಿಯನ್​ಗೂ ಅಧಿಕ ಹಿಂಬಾಲಕರನ್ನು ಹೊಂದಿರುವ ರಶ್ಮಿಕಾ, ಸದ್ಯ ಭಾರತೀಯ ಸಿನಿಮಾ ರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು. ಅದೆಷ್ಟೋ ಯುವಕ ಯುವತಿಯರ ಹಾಟ್ ಫೇವರಿಟ್ ನಟಿಯಾಗಿದ್ದಾರೆ. ಸೇವಿಸುವ ಆಹಾರ ಮತ್ತು ವ್ಯಾಯಾಮ, ಯೋಗದ ಬಗ್ಗೆಯೂ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಿರುತ್ತಾರೆ. ಇದೀಗ ರಶ್ಮಿಕಾ ಅವರ ಲೈಫ್​ಸ್ಟೈಲ್ ಬಗ್ಗೆ URife ಮಾಹಿತಿ ಬಿಚ್ಚಿಡಲಿದೆ. ಅವರ ಆರೋಗ್ಯಕರ ಜೀವನದ ಗುಟ್ಟನ್ನು ಓದುಗರಿಗೆ ಈ ಮೂಲಕ ತಲುಪಿಸಲಿದೆ. ಮಾನಸಿಕ ಆರೋಗ್ಯದ ಬಗ್ಗೆಯೂ ಇಲ್ಲಿ ಮಾಹಿತಿ ಇರಲಿದೆ. ಭಾರತೀಯ ಕಾರ್ಪೊರೇಟ್ ವಲಯದಲ್ಲಿ URLife.co.in 14 ಮಿಲಿಯನ್ ಗೂ ಅಧಿಕ ಓದುಗರನ್ನು ಒಳಗೊಂಡ ಭಾರತದ ಅತಿದೊಡ್ಡ ಆರೋಗ್ಯ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ.

Kannada new film

ತಜ್ಞರ ಸಲಹೆ, ಅತ್ಯಾವಶ್ಯಕ ಸಂಪಾದಕೀಯ ವಿಷಯ, ವಿವರವಾದ ಮಾಹಿತಿಯನ್ನು ಒದಗಿಸುತ್ತಿದೆ. ಭಾರತದ ಕಿರಿಯ ಮತ್ತು ಅತ್ಯಂತ ಕ್ರಿಯಾತ್ಮಕ ಯೋಗಕ್ಷೇಮ ಮೇಲ್ವಿಚಾರಕರಾದ ಉಪಾಸನ ಕೊನಿಡೆಲಾ ಅವರ ಮಾರ್ಗದರ್ಶನದಲ್ಲಿ URLife.co.in ಅಭಿವೃದ್ಧಿಪಡಿಸಲಾಗಿದೆ.

Web site: www.urlife.co.in Instagram:

https://www.instagram.com/urlife.co.in/?hl=en Facebook:

https://www.facebook.com/URLife.co.in Twitter:

https://twitter.com/urlife_co_in

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.