Skip to main content
ಕಲ್ಬುರ್ಗಿಯಲ್ಲಿ ಸೆಪ್ಟೆಂಬರ್ 16ರಂದು ಭವಿಷ್ಯದ ಉದ್ಯೋಗಕ್ಕಾಗಿ ಮ್ಯಾರಥಾನ್.

ಕಲ್ಬುರ್ಗಿಯಲ್ಲಿ ಸೆಪ್ಟೆಂಬರ್ 16ರಂದು ಭವಿಷ್ಯದ ಉದ್ಯೋಗಕ್ಕಾಗಿ ಮ್ಯಾರಥಾನ್.

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯವಾಗಿ ದೀಕ್ಷಣಾ ಗ್ಲೋಬಲ್ ಡೆವೆಲಪ್ಮೆಂಟ್ ಫೌಂಡೇಶನ್ ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕದ ಕೌಶಲ್ಯಾಧಾರಿತ ಭವಿಷ್ಯದ ಉದ್ಯೋಗ ಸೃಷ್ಟಿಗಾಗಿ ಮ್ಯಾರಥಾನ್ ಕಾರ್ಯಕ್ರಮ ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟೆಂಬರ್‌ 16 ರಂದು ಬೆಳೆಗ್ಗೆ ೦೭:೦೦ಕ್ಕೆ ಜಗತ್‌ ಸರ್ಕಲ್‌ ದಿಂದ ಸರ್ದಾರ ವಲ್ಲಭಾಯಿ ಪಟೇಲ್‌ ವೃತ್ತದವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶ್ರೀ ಶರಣಬಸಪ್ಪ ದರ್ಶನಾಪೂರ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು ಕರ್ನಾಟಕ ಸರ್ಕಾರ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಶ್ರೀ ಶಶಿಲ್ ಜಿ.ನಮೋಶಿ ಎಂಎಲ್ಸಿ (ಈಶಾನ್ಯ ಶಿಕ್ಷಕರ ಕ್ಷೇತ್ರ) ಹಾಗೂ ಅಧ್ಯಕ್ಷರು, ಹೆಚ್ ಕೆ ಇ ಸೋಸೈಟಿ, ಕಲಬುರಗಿ, ಗೌರವಾನ್ವಿತ ಶ್ರೀ ಬಸವರಾಜ ಗಡಗೆ ಪ್ರಾದೇಶಿಕ ನಿರ್ದೇಶಕರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರಗಿ, ಬಿಜಾಸ್ಪೂರ್‌ ಗ್ರುಪ್ನ ಸಿಇಒ ಹಾಗೂ ಸಿಎ ಕ್ಷೇತ್ರ ಯೂತ್‌ ಐಕಾನ್‌ ಶ್ರೀ ಪ್ರಶಾಂತ್ ಬಿಜಾಸ್‌ ಪುರ ಭಾಗವಹಿಸಲಿದ್ದು,ದೀಕ್ಷಣಾ ಗ್ಲೋಬಲ್‌ ಡೆವಲೆಪಮೆಂಟ್‌ ನ ನಿರ್ದೇಶಕ ಸುಂದರ ಮತ್ತು ಪುಂಡಲಿಕ ನಾಗುರೆ ಜೊತೆಗೆ ಇರಲಿದ್ದಾರೆ.

ಇದೇ ಸಂಧರ್ಭದಲ್ಲಿ   ದೀಕ್ಷಣಾ ಗ್ಲೋಬಲ್‌ ಡೆವೆಲೆಪಮೆಂಟ್‌ ಫೌಂಡೇಷನ್‌ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುನೀಲ ವಿಭೋತೆ, ಅವರು ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡುತ್ತ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭವಿಷದ ಉದ್ಯೋಗ ಸೃಷ್ಟಿಗಾಗಿ ಯುವ ಯುವಕ -ಮಹಿಳಾ ಉದ್ಯಮಿಗಳ ಪಾತ್ರ ಪ್ರಮುಖವಾಗಿದ್ದು, ಕಲ್ಯಾಣ -ಕರ್ನಾಟಕ ದಶಮಾನೋತ್ಸವ ಸಂಭ್ರಮದ ಈ ದಿನದಲ್ಲಿ, ಇಂತಹ ಜಾಗೃತಿ ಕಾರ್ಯಕ್ರಮದಿಂದ ಈ ಭಾಗದಲ್ಲಿ ಪದವಿ ಪಡೆದ ಯುವ ವಿದ್ಯಾವಂತರಿಗೆ ಉದ್ಯಮದ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶವಾಗಿದೆ ಅನ್ನುತ್ತ ಕಲಬುರಗಿ ಜಿಲ್ಲೆಯ ಯುವಕರು, ಸಾರ್ವಜನಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸುನೀಲ ವಿಭೋತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.