ಕೆ. ಕೆ ಭಾಗದಲ್ಲಿ ಉದ್ಯೋಗ ಸೃಷ್ಟಿ ಗಾಗಿ KDEM ಜೊತಗೆ DGDF ಒಪ್ಪಂದ.
ಉದ್ಯಮ, ಉದ್ಯೋಗ, ಕೌಶಲ್ಯಕ್ಕೆ ಜ್ಞಾನದ ಸೇತುವೆ KDEM ಸಂಸ್ಥೆ.
371(J)ಕಲಾಂ ಅಡಿಯಲ್ಲಿ ವಿಶೇಷ ಸ್ಥಾನಮಾನಕ್ಕೆ ಒಳಪಡುವ ರಾಜ್ಯದ ಕಲ್ಯಾಣ -ಕರ್ನಾಟಕ ಪ್ರದೇಶದ ಭಾಗವನ್ನು ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ,ವಿವಿಧ ಕ್ಷೇತ್ರಗಳಲ್ಲಿ ಅಭಿರುದ್ದಿ ಪಡಿಸಲು ,ಸರಕಾರ, ಸರ್ಕಾರಿ ಸಹಮತ್ಯಯೊಂದಿಗಿನ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು, ಶ್ಲಾಘನೀಯ ವಿಷಯ.
ಈ ನಿಟ್ಟಿನಲ್ಲಿ "ಕರ್ನಾಟಕ ಡಿಜಿಟಲ್ ಎಕನಾಮಿ ಮಿಶನ್" (KDEM )ಸಂಸ್ಥೆಯು ಸಂಜೀವ್ ಗುಪ್ತ CEO ಅವರ ತಂಡ "ಬಿಯಾಂಡ್ ಬೆಂಗಳೂರು" ಅನ್ನೋ ಹೊಸ ಕಲ್ಪನೆಯೊಂದಿಗೆ ರಾಜ್ಯ ಸರಕಾರ ಮತ್ತು ಉದ್ಯಮ ನವ ಅನ್ವೇಷಣೆಯ ಸ್ಟಾರ್ಟ್ ಅಪ್ ಕಂಪನಿ, ಕೈಗಾರಿಕೆ ಯೋದ್ಯಮಿಗಳೊಂದಿಗೆ, ಜ್ಞಾನ ಸೇತುವೆ ಯಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು,ಯುವ ಉತ್ಸಾಹಿ ಹೊಸ ಅನ್ವೇಷಕರಿಗೆ ಮಾರ್ಗದರ್ಶನ ನೀಡುವುದರೊಂದಿಗೆ ಬೆಂಗಳೂರುರೇತರ ವಿವಿಧ ಭಾಗಗಳಲ್ಲಿಯೂ ಲಕ್ಷಾಂತರ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದ ಸಂಸ್ಥೆಯಾಗಿದೆ .
ಈ ಉದ್ದೇಶದಿಂದ ಆಗಸ್ಟ್ 29 ರಂದು ಹುಬ್ಬಳ್ಳಿ -ಧಾರವಾಡ -ಬೆಳಗಾವಿ ಟೆಕ್ಸಲರೇಷನ್ 2024 ಅನ್ನೋ ಕಾರ್ಯಕ್ರಮವನ್ನು ಆಯೋಜನೆಗೋಳಿಸುವುದರೊಂದಿಗೆ ವಿವಿಧ ಕಂಪನಿಯ ಉದ್ಯಮಿಗಳು, ಸ್ಟಾರ್ಟ್ಅಪ್ ಕಂಪನಿಗಳು, ಭಾಗಿಯಾಗಿ ಪ್ರಸ್ತುತ ಉದ್ಯಮ ರಂಗದಲ್ಲಿ ಯಶಸ್ವಿ ಕಂಡ ಉದ್ಯಮಿಗಳೊಂದಿಗೆ ಸಂವಾದ ನಡೆಸುವುದರೊಂದಿಗೆ ಡಿಜಿಟಲ್ ವಿಭಾಗದಲ್ಲಿನ ಹೊಸ ಅನ್ವೇಷಣೆಯ ವಿಷಯಗಳ ಬಗ್ಗೆ ಅರಿತುಕೊಂಡು ಇದರ ಸದುಪಯೋಗ ಪಡೆದು ಕೊಂಡವು.
ಕೆ. ಕೆ ಭಾಗದಲ್ಲಿ ನವೋಧ್ಯಮ, ಕೌಶಲ್ಯ ತರಭೇತಿ, ಉದ್ಯೋಗ ಸೃಷ್ಟಿ ಗಾಗಿ KDEM ಜೊತಗೆ DGDF ಒಪ್ಪಂದ ಪತ್ರ.
ಕಲ್ಯಾಣ -ಕರ್ನಾಟಕ ಭಾಗದ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಕೌಶಲ್ಯಹೊಂದಿರುವ ಅನುಭವಿ ಯುವ ಉದ್ಯಮಿಗಳು,ತಮ್ಮದೇಯಾದ ಹೊಸ ಕಲ್ಪನೆಯ ವಿನೂತನ ಅನ್ವೇಷಣೆಯ ಸೇವೆ ಮತ್ತು ಉತ್ಪನ್ನ ಆಧಾರಿತ ಉದ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಸಿಸುತ್ತಿರುವ ಯುವ ಉದ್ಯಮಿಗಳು, ಶೈಕ್ಷಣಿಕ, ಡಿಜಿಟಲ್ ಮತ್ತು ಐ ಟಿ ವಿಭಾಗದಲ್ಲಿ ಸ್ಟಾರ್ಟ್ ಅಪ್ ಕಂಪನಿಗಳನ್ನು ಕಟ್ಟಿಕೊಂಡು ಕಲ್ಯಾಣ -ಕರ್ನಾಟಕ ಭಾಗದಲ್ಲಿ ತಮ್ಮದೇಯಾದ ಉದ್ಯಮ ಕ್ಷೇತ್ರವನ್ನು ಕಟ್ಟಿ ಕೊಂಡಿದ್ದಾರೆ.
ಕಲ್ಯಾಣ - ಕರ್ನಾಟಕ ಭಾಗದಲ್ಲಿ ತಾಂತ್ರಿಕ ಮತ್ತು ಉನ್ನತ ಮಟ್ಟದ ವಿದ್ಯಾಭ್ಯಾಸ ಪಡೆದುಕೊಂಡು, ಉದ್ಯೋಗಕ್ಕಾಗಿ ಪರಿತಪಿಸುವ ಯುವ ವಿದ್ಯಾವಂತ ಯುವಕ - ಯುವತಿಯರಿಗೆ ಕೌಶಲ್ಯ ತರಭೇತಿ, ಉದ್ಯಮಶೀಲತೆ ತರಭೇತಿ, ಎಜೂಬ್ರಿಡ್ಜ್, ಹಾಗೂ ಸ್ಟಾರ್ಟ್ ಅಪ್ ಕಂಪನಿಗಳಿಗೆ ಮೆಂಟರ್ ಶೀಪ್ ಮತ್ತು ಈ ಭಾಗದಲ್ಲಿ 5000 ಸಾವಿರ ಉದ್ಯೋಗ ಸೃಷ್ಟಿ ಮಾಡುವಂತಹ ಉದ್ದೇಶದೊಂದಿಗೆ "ದಿಕ್ಷಣ ಗ್ಲೋಬಲ್ ಡೆವಲಪ್ಮೆಂಟ್ ಫೌಂಡೇಶನ್ " (DGDF)"ಸ್ಥಾಪಿಸಿದ್ದು,ಹುಬ್ಬಳ್ಳಿಯ ಟೆಕ್ಸ್ಲರೇಷನ್ ಕಾರ್ಯ ಕ್ರಮದಲ್ಲಿ ಕರ್ನಾಟಕ ಡಿಜಿಟಲ್ ಎಕಾನಾಮಿ ಮಿಷನ್ " (KDEM) ಅವರೊಂದಿಗೆ MOU ಅನ್ನು ಮಾಡಿಕೊಳ್ಳಲಾಯಿತು. ಯುವ ಉದ್ಯಮಿಗಳ ಆಸಕ್ತಿ ಮತ್ತು ಅನುಭವವನ್ನು ಮನಗೊಂಡ KDEM CEO ಸಂಜೀವ್ ಗುಪ್ತ ಅವರು ಸನ್ಮಾನ್ಯ ಶ್ರೀ ಶರತ್ ಕುಮಾರ್ ಬಚ್ಚೆಗೌಡ ಕಿಯೋನಿಕ್ಸ್ ಚೇರ್ಮ್ಯಾನ್ ಕರ್ನಾಟಕ ಸರ್ಕಾರ ಇವರ ಮೂಲಕ MOU ಕೊಟ್ಟರು.
ಈ ಸಂಧರ್ಭದಲ್ಲಿ DGDF CEO ಸುನೀಲ್ ವಿಭೂತೇ,CFO ಪುಂಡಲೀಕ್ ನಾಗುರೇ, PRO ಸುಂದರ ಅವರು ಭಾಗಿಯಾಗಿದ್ದರು.
Recent comments