ಅಟ್ಲಾಂಟ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ “ ಅಮೃತ ಮತಿ “ ಆಯ್ಕೆ.
ಅಟ್ಲಾಂಟ್ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ “ ಅಮೃತ ಮತಿ “ ಆಯ್ಕೆ.

ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿ, ಪುಟ್ಟಣ್ಣನವರು ನಿರ್ಮಿಸಿರುವ “ಅಮೃತ ಮತಿ” ಚಿತ್ರ ಇತ್ತೀಚಿಗೆ ಆಸ್ರ್ಟೀಯಾ ಅಂತರ ರಾಷ್ಟ್ರೀಯಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಸರಿಯಷ್ಟೆ ಈಗ ಇನ್ನೋಂದು ಸಂತೋಷದ ಸುದ್ದಿ ಬಂದಿದೆ. “ಅಮೃತಮತಿ” ಚಿತ್ರವು ಅಮೇರಿಕ ಆಟ್ಲಾಂಟ್ ದಲ್ಲಿ ನಡೆಯುವ ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಧಿಕೃತ ಅಯ್ಕೆಯಾಗಿ ಪ್ರದರ್ಶನಗೊಳ್ಳಲಿದೆ.ಕೊರೊನಾ ಕಾರಣದಿಂದ ಈ ಚಿತ್ರೋತ್ಸವ ಕೂಡ ಆನ್ ಲೈನ್ ಮೂಲಕ ಜುಲೈ 29ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ. ಚಿತ್ರವೂ ಎಲ್ಲ ವಿಭಾಗಗಳ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾಗಿದೆ.

ಹದಿಮೂರನೇ ಶತಮಾಣದಲ್ಲಿ ಜನ್ನಕವಿ ರಚಿತ “ ಯಶೋಧರ ಚರಿತೆಯನ್ನು” ಆಧರಸಿ “ ಅಮೃತ ಮತಿ ಚಿತ್ರವು ರೂಪಗೊಂಡಿದೆ. ಪ್ರಾಚೀನ ಕನ್ನಡ ಕಾವ್ಯವೊಂದರ ಸಿನಿಮಾ ರೂಪವು ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾಕಣಕ್ಕೆ ಅಧಿಕೃತವಾಗಿ ಆಯ್ಕೆಯಾಗಿರುವುದು ಕನ್ನಡ ಸಾಹಿತ್ಯ ಮತ್ತು ಸಿನಿಮಾ –ಎರಡು ಕ್ಷೇತ್ರಗಳಿಗೆ ಸಂದ ಒಂದು ಮನ್ನಣೆಯಾಗಿದೆ. ಈ ಚಿತ್ರದಲ್ಲಿ ಅಮೃತಮತಿಯಾಗಿ ಹರಿಪ್ರಿಯಾ ಮತ್ತು ಯಶೋಧರನಾಗಿ ಕಿಶೋರ್ ಅಭಿನಯಿಸಿದ್ದಾರೆ.

ಇತರೆ ತಾರಗಣದಲ್ಲಿ ಸುಂದರರಾಜ್,ಪ್ರಮೀಳಾಜೋಷಾಯ್,ತಿಲಕ್,ಸುಪ್ರಿಯಾರಾವ್ ,ಅಂಬರಿಶ್ ಸಾರಂಗಿ,ವತ್ಸಲಾ ಮೋಹನ್ ಮುಂತಾದವರು ಇದ್ದಾರೆ.
Recent comments