ರಾಯಚೂರು ವಿದ್ಯಾರ್ಥಿಯಿಂದ "ಲಾಕ್ ಡೌನ್ ಜಾಗೃತಿಯ " ಅನಿಮೇಷನ್ ಕಿರುಚಿತ್ರ ಬಿಡುಗಡೆ.
ವಿದ್ಯಾರ್ಥಿ ಜೆ. ಈ ಕಾರ್ತಿಕ್ ಸೃಷ್ಟಿಸಿದ "ಲಾಕ್ ಡೌನ್ ಜಾಗೃತಿಯ " ಅನಿಮೇಷನ್ ಕಿರುಚಿತ್ರ ಬಿಡುಗಡೆ.

ರಾಯಚೂರು :ವಿದ್ಯಾಭಾರತಿ ಸಿ ಬಿ ಎಸ್ ಈ ಸ್ಕೂಲಿನ 8ನೇ ತರಗತಿಯ ಜೆ .ಈ ಕಾರ್ತಿಕ್ ಸೃಷ್ಟಿಸಿದ ಲಾಕ್ ಡೌನ್ ಜಾಗೃತಿ ಅನಿಮೇಶನ್ ಕಿರುಚಿತ್ರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸಿ. ಬಿ ವೇದಮೂರ್ತಿ ಯವರು ಇಂದು ಬಿಡುಗಡೆ ಗೊಳಿಸಿ ಮಾತನಾಡುತ್ತ ವಿದ್ಯಾರ್ಥಿ ಕಾರ್ತಿಕ್ ಕೋರೋನ ಹಿನ್ನಲೆಯ ಲಾಕ್ ಡೌನ್ ಸನ್ನಿವೇಶವನ್ನು ಜನಜಾಗೃತಿಗಾಗಿ ಲಾಕ್ ಡೌನ್ ಜಾಗೃತಿ ಅನಿಮೇಶನ್ ಕಿರುಚಿತ್ರ ಸೃಷ್ಟಿ ಮಾಡಿದ ಪ್ರಯತ್ನ ಒಳ್ಳೆಯದು ಇದರಲ್ಲಿ ಒಂದು ಕುಟುಂಬದ ತಂದೆ -ತಾಯಿ -ಮಗ ಎಂಬ ಪಾತ್ರಗಳು ಮನಮುಟ್ಟುವಂತೆ ಸೃಷ್ಟಿಯಾಗಿದೆ. ಈ ಕಿರುಚಿತ್ರ ಒಂದು ಒಳ್ಳೆಯ ಜಾಗೃತಿ ಸಂದೇಶ ನೀಡುತ್ತದೆ ಎಂದು ಹೇಳಿ ವಿದ್ಯಾರ್ಥಿ ಕಾರ್ತಿಕ್ ಪ್ರಯತ್ನಕ್ಕೆ ಅಭಿನಂದಿಸಿದರು. ಈ ಲಾಕ್ ಡೌನ್ ಜಾಗೃತಿ ಕಿರುಚಿತ್ರ ಎರಡು ನಿಮಿಷ, ಇದು ಪ್ರಸ್ತುತ ಕೋರೋನ ಲಾಕ್ ಡೌನ್ ಹಿನ್ನಲೆಯಲ್ಲಿ ಒಂದು ಕುಟುಂಬ ಅದರಲ್ಲಿ ತಂದೆ ತಾಯಿ ಮತ್ತು ಮಗ ಎಂಬ ಪಾತ್ರವಿದೆ. ಮಗ ಲಾಕ್ಔಟ್ ಹಿನ್ನೆಲೆಯಲ್ಲಿ ಮನೆಯಲ್ಲಿ ಬೇಜಾರಾಗಿ ,ಹೊರಗೆ ಹೋಗಬೇಕು ಸ್ನೇಹಿತರ ಜೊತೆಗೆ ಸಮಯ ಕಳೆಯಬೇಕು ಎನ್ನುವ ಇಚ್ಛಾಶಕ್ತಿ ಆದರೆ ಇದಕ್ಕೆ ತಂದೆ ತಾಯಿಗಳ ತಡೆ ಆದರೂ ತಂದೆ-ತಾಯಿಗಳ ಮಾತು ಮೀರಿ ಹೊರಗೆ ಹೋಗಿ ಬಂದಾಗಿನಿಂದ, ಕೆಮ್ಮು ಮತ್ತು ಗಂಟಲ ನೋವು ಕಾಣಿಸಿಕೊಳ್ಳುತ್ತದೆ .
ಇದು ಮನೆಯ ಮಂದಿಗೆ ಎಲ್ಲರಿಗೂ ಹರಡುತ್ತದೆ. ಅದಕ್ಕಾಗಿ ಎಲ್ಲರೂ ಮನೆಯಲ್ಲಿ ಇರಬೇಕು ಇದು ಸುರಕ್ಷಿತ ಎಂದು ಈ ಕಿರುಚಿತ್ರದ ಸಂದೇಶ ನೀಡುತ್ತದೆ. ಎಂದು ಇದರ ಪರಿಕಲ್ಪನೆ ಮಾಡಿದ ವಿದ್ಯಾರ್ಥಿಯ ತಂದೆಯಾದ ಜೆ ಎಲ್ ಈರಣ್ಣ ನವರು ವಿವರಿಸಿದರು. ಈ ಸಂದರ್ಭದಲ್ಲಿ ಕಲಾ ಸಂಕುಲ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿಯಾದ ಮಾರುತಿ ಬಡಿಗೇರ್ ಮತ್ತು ಉಪನ್ಯಾಸಕರಾದ ಹನುಮಂತು ಕೋಲಾಪುರ್ ಉಪಸ್ಥಿತರಿದ್ದರು.
Recent comments