ಜೆಡಿಎಸ್ ಕಾರ್ಯಕರ್ತರಲ್ಲಿ ಕುಮಾರಸ್ವಾಮಿ ಮನವಿ .ನಾವು ಪರಿಸರ ಪ್ರೇಮಿಗಳಾಗೋಣ...
ಜೆಡಿಎಸ್ ಕಾರ್ಯಕರ್ತರಲ್ಲಿ ಕುಮಾರಸ್ವಾಮಿ ಮನವಿ .ನಾವು ಪರಿಸರ ಪ್ರೇಮಿಗಳಾಗೋಣ...

ಒಂದು ದಶಕದ ನಿರಂತರ ಹೋರಾಟದ ಫಲವಾಗಿ ರಾಜ್ಯದಲ್ಲಿ ಜಾತ್ಯತೀತ ಜನತಾದಳ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ. ಪಕ್ಷವನ್ನು ಅಧಿಕಾರಕ್ಕೆ ತರಲು ಅಸಂಖ್ಯಾ ಕಾರ್ಯಕರ್ತರು, ಅಭಿಮಾನಿಗಳು ಅಹರ್ನಿಶಿ ಶ್ರಮಿಸಿರುವುದು ಸುಸ್ಪಷ್ಟ. ಈ ಹೊತ್ತಿನಲ್ಲಿ ನಾನು ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ, ನನ್ನ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸದೇ ಇರಲಾರೆ. ನಾನು ಈ ಕರುನಾಡಿನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುತ್ತಿರುವುದು ನಿಮಗೆಲ್ಲ ಮಹಾ ಜನತೆಗೆ, ಕಾರ್ಯಕರ್ತ, ಅಭಿಮಾನಿ ಬಂಧುಗಳಿಗೆ ಹರ್ಷ ತಂದಿರಲಿಕ್ಕೂ ಸಾಕು.

ಆ ಹರ್ಷ, ಸಂಭ್ರಮದಲ್ಲಿ ನಾನೂ ಕೂಡ ಭಾಗಿಯೇ. ಆದರೆ, ನನ್ನ ಪದಗ್ರಹಣ ಕಾರ್ಯಕ್ರಮ ನಿಮಿತ್ತ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಕ್ಷದ ಮೇಲಿನ ಮತ್ತು ನನ್ನ ಮೇಲಿನ ಅಭಿಮಾನದಿಂದ ಬ್ಯಾನರ್, ಕಟೌಟ್, ಬಂಟಿಂಗ್ಸ್ಗಳನ್ನು ಕಟ್ಟುವುದು, ಪಟಾಕಿಗಳನ್ನು ಸಿಡಿಸುವುದು ಆ ಮೂಲಕ ಪರಿಸರವನ್ನು ಹಾಳು ಮಾಡುವುದು ನನಗಿಷ್ಟವಿಲ್ಲದ್ದು. ಅದೂ ನನ್ನ ಕಾರ್ಯಕರ್ತರು ಈ ರೀತಿ ಮಾಡಬಾರದು ಎಂಬುದು ನನ್ನ ಅನಿಸಿಕೆ. ನನ್ನ ಕಾರ್ಯಕರ್ತರು ಹೋರಾಟಕ್ಕೆ, ಛಲಕ್ಕೆ ಎಷ್ಟು ಹೆಸರುವಾಸಿಯೋ ಹಾಗೆಯೇ ಪರಿಸರ ಪ್ರೇಮದಲ್ಲೂ ನನ್ನವರು ಮೇಲ್ಪಂಕ್ತಿ ಹಾಕಿಕೊಡಲಿದ್ದಾರೆ ಎಂದು ಭಾವಿಸಿಕೊಂಡಿದ್ದೇನೆ. ನಾವು ಪರಿಸರ ಸ್ನೇಹಿಗಳಾಗೋಣ. ಪರಿಸರ ಉಳಿಸೋಣ, ರಕ್ಷಿಸೋಣ. -ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
Recent comments