ಭಾರತ ಕಿರಿಯರಿಗೆ ಶುಭ ಹಾರೈಸಿದ ಹಿಟ್ ಮನ್
ವಿಶ್ವಕಪ್: ಭಾರತ ಕಿರಿಯರಿಗೆ ಶುಭ ಹಾರೈಸಿದ ಹಿಟ್ಮನ್
ರೋಹಿತ್ ಅಂಕ್ಲೆೆಂಡ್,: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವಯೋಮಿತಿ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಪ್ರಿಯಮ್ ಗರ್ಗ್ ನಾಯಕತ್ವದ ಭಾರತ ಕಿರಿಯರ ತಂಡಕ್ಕೆೆ ಟೀಮ್ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಶುಭ ಹಾರೈಸಿದ್ದಾರೆ. ಸದ್ಯ ಭಾರತ ತಂಡದೊಂದಿಗೆ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಹಿಟ್ಮನ್ ಖ್ಯಾತಿಯ ರೋಹಿತ್ ಶರ್ಮಾ ಅವರು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಭಾರತ ಕಿರಿಯರಿಗೆ ಶುಭ ಹಾರೈಸಿದ್ದಾರೆ.
‘‘ಈಗಾಗಲೇ ಎರಡು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದಲ್ಲಿ ಬೀಗುತ್ತಿರುವ ಭಾರತ ತಂಡ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲಿದ್ದು, ವಿಶ್ವಕಪ್ ಟ್ರೋಫಿಯೊಂದಿಗೆ ತವರಿಗೆ ಮರಳಲಿದೆ ಎಂಬ ನಂಬಿಕೆ ಇದೆ. ದಕ್ಷಿಣ ಆಫ್ರಿಕಾದಲ್ಲಿರುವ ಕಿರಿಯರಿಗೆ ಒಳ್ಳೆಯದಾಗಲಿ,’’ ಎಂದು ರೋಹಿತ್ ಟ್ವೀಟ್ ಮಾಡಿದ್ದಾರೆ. ಕಳೆದ ಮಂಗಳವಾರ ಪ್ರಿಯಮ್ ಗರ್ಗ್ ನಾಯಕತ್ವದ ಭಾರತ ತಂಡ ಜಪಾನ್ ವಿರುದ್ಧ 10 ವಿಕೆಟ್ ಸುಲಭ ಜಯ ಸಾಧಿಸಿತ್ತು. ಆ ಮೂಲಕ ಸೂಪರ್ ಲೀಗ್ ಕ್ವಾರ್ಟರ್ ಪೈನಲ್ ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ನಾಲ್ಕು ಬಾರಿ ಚಾಂಪಿಯನ್ ತಂಡ ಶುಕ್ರವಾರ ನ್ಯೂಜಿಲೆಂಡ್ ವಿರುದ್ಧ ಕಾದಾಟ ನಡೆಸಲಿದೆ. ಕಳೆದ 2018ರಲ್ಲಿ ಪೃಥ್ವಿ ಶಾ ನಾಯಕತ್ವದ ಭಾರತ ಕಿರಿಯರ ತಂಡ ವಿಶ್ವಕಪ್ ಗೆದ್ದಿತ್ತು. ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಹಿರಿಯರ ತಂಡ ನ್ಯೂಜಿಲೆಂಡ್ನಲ್ಲಿದೆ. ಕಿವೀಸ್ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿಯ ಆಡಲಿದ್ದು, ಮೊದಲನೇ ಪಂದ್ಯ ಶುಕ್ರವಾರ ಈಡೆನ್ ಪಾರ್ಕ್ನಲ್ಲಿ ಆಡಲಿದೆ.
Recent comments