Skip to main content
ಬಹುಮುಖ ಪ್ರತಿಭೆ ದರ್ಶನ್ ಹುಣಸೂರು.

ಬಹುಮುಖ ಪ್ರತಿಭೆ ದರ್ಶನ್ ಹುಣಸೂರು.

ಬಹುಮುಖ ಪ್ರತಿಭೆ ದರ್ಶನ್ ಹುಣಸೂರು.

Dharshan

ಬೆಂಗಳೂರು ಅನ್ನುವಂತಹ ಕಲರಪುಲ್ ಸಿಟಿಗೆ ತಮ್ಮದೇ ಆದ ಕನಸುಕಟ್ಟಿಕೊಂಡು ಬಂದತಂಹ ಅದೆಷ್ಟೋ ಯುವ ಪ್ರತಿಭೆಯಗಳು ತಮ್ಮ ಗುರಿಮುಟ್ಟಲು ನಾನಾಕಸರತ್ತು ಮಾಡಬೇಕಾಗುತ್ತದೆ. ಅಂತಹೂದರಲ್ಲಿಇನ್ನೂ ಈ ಬಣ್ಣದ ಲೋಕಕ್ಕೆ ಆಸೆ ಹೊತ್ತು ಬಂದಂತಹವರ,ಕಷ್ಟ,ನಷ್ಟಅವರ ಪರಿಶ್ರಮ, ಅವರಿಗೆ ಮಾತ್ರ ಗೊತ್ತು.ಇಂತಹ ಕಠಿಣ ಸಮಯದಲ್ಲೂ ,ನಟನೆ,ನಿರೂಪಣೆ,ನಿರ್ದೇಶನ,ಸಂಕಲನ,ಛಾಯಾಗ್ರಹಣ,ಸಂಭಾಷಣೆ,ಒಂದಾ,ಎರಡಾ,ಇಂತಹ ಅದ್ಬುತ ಬಹುಮುಖ ಪ್ರತಿಭೆಯನ್ನು ತನ್ನಲ್ಲಿ ಮೈಗೂಡಿಸಿಕೊಂಡು ಯಶಸ್ಸುಕಾಣುತ್ತಿರುವ ಯುವ ಪ್ರತಿಭೆ ದರ್ಶನ್ ಹುಣಸೂರು ಇವರ ಯಶಸ್ಸಿನ ಹಾದಿ.

ದರ್ಶನ್ ಹುಣಸೂರು ಇವರ ಪರಿಚಯ.

ಯಾವುದೇ ಒಬ್ಬ ವ್ಯಕ್ತಿ ಒಂದು ವಿಷಯದಲ್ಲಿ ತೊಡಗಿಸಿಕೊಂಡು ಸಾಧಿಸಲು ಅಪಾರವಾದ ಪ್ರರಿಶ್ರಮ,ಅಗತ್ಯ. ಅದೇ ಒಬ್ಬ ವ್ಯಕ್ತಿ ನಾನಾ ವಿಷಯಗಳಲ್ಲಿ ತೊಡಗಿಸಿಕೊಂಡು ಜಯಿಸುವುದೇ ಸಾಧನೆ.ಸರಿ ಸುಮಾರು 10 ವರ್ಷಗಳ ಹಿಂದೆ ತಾನೇನಾದ್ರು ಸಾಧಿಸಬೇಕೆಂಬ ಛಲದೊಂದಿಗೆ ಕೆಂಪು ಬಣ್ಣದ ಬಸ್ ಹತ್ತಿ ಬೆಂಗಳೂರಿಗೆ ಬಂದ ಒಬ್ಬ ಸಾಮಾನ್ಯ ಹುಡುಗ ತನ್ನ ಜೊತೆಗೆ ಕನಸುಗಳ ಮೂಟೆಯನ್ನೇ ಹೊತ್ತು ಬರುತ್ತಾನೆ. ಅಂದಿನಿಂದ ಇದಿಂನವರೆಗೂ ಕನಸುಗಳ ಬೆನ್ನತ್ತಿ ಹಲವು ಯಶಸ್ಸುಗಳ ಮೆಟ್ಟಿಲನ್ನ ಏರುತ್ತಿರುವ ದರ್ಶನ ಹುಣಸೂರು ಈದುವರೆಗೂ 4 ರಿಂದ 5 ಸೀರಿಯಲ್ಗಳಲ್ಲಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದು, ಇತ್ತೀಚಿಗೆ ಡಬ್ಬಿಂಗ್ ನಲ್ಲೂ ಹೆಸರು ಮಾಡುತ್ತಿದ್ದಾರೆ. ಇನ್ನೂ ವಿವಿಧ ಖಾಸಗಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿದ್ದುವಿಶೇಷ ಕಾರ್ಯಕ್ರಮಗಳಿಗೆ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಬಹುಮುಖ ಪ್ರತಿಭೆ ದರ್ಶನ್ ಹುಣಸೂರು.

ಅಲ್ಲದೇ ಅಂತರಾಷ್ಟ್ರೀಯ ಮಟ್ಟದ ಖಾಸಗಿ ವಾಹಿನಿಯೊಂದರ ಕನ್ನಡದ ಅವತರಣಿಕೆಯ ಕಾರ್ಯಕ್ರಮಕ್ಕೆ ಧ್ವನಿ ನೀಡುತ್ತಿದ್ದಾರೆ. ಜೊತಗೆ ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿಅಂಬೇಡ್ಕರ್ ಕುರಿತಾದ ಸೀರಿಯಲ್ ಅವತರಿಣೆಕೆಯಲ್ಲಿ ಇವರು ಧ್ವನಿಗೂಡಿಸಿದ್ದಾರೆ ಇಂತಹ ಕೋರೊನದ ಕಠಿಣ ಸಮಯದಲ್ಲಿಯೂ ಬಿಡುವಿಲ್ಲದೇ ಕೆಲಸ ನಿರ್ವಹಿಸುತ್ತಿರುವ ಇವರು ಶಂಕರ್ ನಾಗ್ ಹೇಳಿರುವ ಮಾತು ಸತ್ತ ಮೇಲೆ ನಿದ್ದೆ ಮಾಡೋದು ಇದ್ದೆ ಇದೆ ಇದ್ದಾಗ ಕೇವಲ ನಾಲ್ಕು ಘಂಟೆ ನಿದ್ದೆ ಮಾತ್ರ ಮಾಡಬೇಕು ಅನ್ನು ಮಾತನ್ನ ಪಾಲನೇ ಮಾಡುತ್ತಾರೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.