Skip to main content
ವನ್ಯಜೀವಿ ದಾಮ ಬಂಡೀಪುರ

ಬಂಡೀಪುರ ಹುಲಿ ಸಂರಕ್ಷಣಾ ಕೇಂದ್ರ ;

ಬಂಡೀಪುರ ಹುಲಿ ಸಂರಕ್ಷಣಾ ಕೇಂದ್ರ ;

ಬಂಡೀಪುರ ಹುಲಿ ಸಂರಕ್ಷಣಾ ಕೇಂದ್ರ
ಬಂಡೀಪುರ ಹುಲಿ ಸಂರಕ್ಷಣಾ ಕೇಂದ್ರ

ಅತ್ಯಂತ ರೋಮಾಂಚನಕಾರಿ. ಚಾಮರಾಜನಗರ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಣಾ ಕೇಂದ್ರ ಅತ್ಯಂತ ರೋಮಾಂಚನಕಾರಿ ಪ್ರೇಕ್ಷಣಿಯ ಸ್ಥಳವಾಗಿದ್ದು. ಹುಲಿಗಳ ಸಂರಕ್ಷಣ ತಾಣ ಎಂದೇ ಪ್ರಸಿದ್ದಿ. ಇತ್ತೀಚಿನ ದಿನಗಳಲ್ಲಿ ವನ್ಯಜೀವಿಗಳನ್ನು ಕೇವಲ ಚಿತ್ರಗಳಲ್ಲಿ ನೋಡುವಂತಹ ಸಂರ್ಧಭ ಅದರೆ ವನ್ಯಜೀವಿಗಳನ್ನು ನೇರವಾಗಿ ನೋಡಬೇಕೆಂದು ಬಯಸುವ ಅದೆಷ್ಟೋ ಪ್ರಾಣಿ ಪ್ರಿಯರಿಗೆ ಕರ್ನಾಟಕದ ಕೆಲವೇ ಕೆಲವು ಪ್ರಮುಖ ಅಭಯಾರಣ್ಯಗಳು ಸಾಕ್ಷಿಯಾಗಿವೆ. ಅವುಗಳೆಂದರೆ ನಾಗರಹೊಳೆ ಅಭಯಾರಣ್ಯ, ಬನ್ನೇರುಘಟ್ಟ ಅಂತರ್ ರಾಷ್ಟ್ರೀಯ ಉದ್ಯಾನವನ,ಹಾಗು ಬಂಡೀಪುರ ಹುಲಿ ಸಂರಕ್ಷಣಾ ಕೇಂದ್ರ.

ವನ್ಯಜೀವಿ ದಾಮ ಬಂಡೀಪುರ ಅತ್ಯಂತ ರೋಮಾಂಚನಕಾರಿ.
ವನ್ಯಜೀವಿ ದಾಮ ಬಂಡೀಪುರ ಅತ್ಯಂತ ರೋಮಾಂಚನಕಾರಿ.

ವನ್ಯಜೀವಿಗಳ ಕೇಂದ್ರದಾಮವಾಗಿದ್ದು. ಬೇಸಿಗೆಯ ರಜಾದಿನಗಳಲ್ಲಿ ಎಲ್ಲಾದರು ಬೆಟ್ಟ ಗುಡ್ಡ ಪ್ರವಾಸಿ ತಾಣ ಹಚ್ಚ ಹಸಿರುವುಳ್ಳ ಸ್ಧಳಗಳಿಗೆ ಹೋಗಬೇಕೆಂದು ಬಯಸುವವರಿಗೆ ಬಂಡೀಪುರ ಸಹ ವಿಶೇಷ ಸ್ಥಳವಾಗಿದೆ. ಬೆಂಗಳೂರು ನಗರದಿಂದ ಸುಮಾರು 225 ಕಿ ಮೀ ಅಂತರವಿರುವ ಈ ಸ್ಥಳಕ್ಕೆ ಬರುವ ಬಹುತೇಕ ಪ್ರವಾಸಿಗರು ಮೈಸೂರು ಮಾರ್ಗವಾಗಿ ಬರಲಿದ್ದು ಮೈಸೂರಿನ ಅನೇಕ ಪ್ರವಾಸಿ ತಾಣಗಳನ್ನು ಸಹ ವೀಕ್ಷಸಬಹುದಾಗಿದೆ.

ಪ್ರವಾಸಿಗರ ಕಾರು,ಬಸ್ಸು ವಾಹನ.
ಪ್ರವಾಸಿಗರ ಕಾರು,ಬಸ್ಸು ವಾಹನ.

ಬೆಂಗಳೂರಿನಿ0ದ ಊಟಿಗೆ ತೆರಳುವ ಮಾರ್ಗ ಗುಂಡ್ಲುಪೇಟೆಯಿಂದ ಸುಮಾರು 25 ಕಿ.ಮೀ ಅಂತರಹೊಂದಿದ್ದು. ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿನ ವಿಶಾಲವಾದ ರಸ್ತೆಗಳ ಮೇಲೆ ತಮ್ಮ ದ್ವಿಚಕ್ರ ಹಾಗು ಕಾರು,ಬಸ್ಸು ವಾಹನ ಗಳನ್ನು ಚಾಲನೆ ಮಾಡುವವರಿಗೆ ಮತ್ತಷ್ಟು ಜೋಶ್ ನೀಡುವಂತಿವೆ, ಅಲ್ಲದೆ ಅಲ್ಲಲ್ಲಿ ಬಿಸಿಲ ಬೇಗೆಗೆ ಸುತ್ತಾಡಿ ಬಂದಂತ್ತ ಪ್ರಾವಸಿಗರಿಗೆ ದಣಿವಾರಿಸಿಕೊಳ್ಳಲು ರಸ್ತೆಯ ಇಕ್ಕಲಗಳ್ಳಲ್ಲಿ ನಿರ್ಮಿಸಿರುವಂತ ಮಳಿಗೆಗಳಲ್ಲಿ ಏಳೆನೀರು ಕುಡಿದು ದಣಿವಾರಿಸಿಕೊಂಡು ಪ್ರವಾಸಿಗರು ಸಂತಸದಿಂದ ಪ್ರಯಾಣ ಮುಂದುವರೆಸಲು ಪುಷ್ಟಿ ನೀಡುತ್ತವೆ. ಹೆಗೋ ಬಂಡೀಪುರಕ್ಕೆ ಪ್ರವೇಶ ನೀಡಿದ ಕೊಡಲೆ ಇಲ್ಲಿ ಸಾಗ್ವತ ಕೋರುವ ಹುಲಿಗಳ ಚಿತ್ರವುಳ್ಳ ನಾಮಪಲಕ, ಮತ್ತಷ್ಟು ಕೂತುಹಲವನ್ನು ಹೆಚ್ಚಿಸುತ್ತದೆ.

ಪ್ರವೇಶ ದ್ವಾರದಿಂದ ಸುಮಾರು 3 ರಿಂದ 5 ಕಿ.ಮೀ ಪ್ರಯಾಣ ಸುತ್ತಮುತ್ತಲಿನ ಹಸಿರು ವಾತವರಣ ಹಾಗು ಬೆಟ್ಟಗಳನ್ನು ನೋಡುವುದು ಮನಸ್ಸಿಗೆ ಖುಷಿ ನೀಡುತ್ತದೆ. ಬೆಟ್ಟ ಗುಡ್ಡ ಕಣಿವೆಗಳಿಂದ ಆವೃತವಾಗಿರುವ ಪಶ್ಚಿಮ ಘಟ್ಟ ಅರಣ್ಯ ಸರಣಿ 1,600 ಕಿ.ಮೀ. ಉದ್ದಕ್ಕೆ ವಿಸ್ತರಿಸಿರುವ ಅನನ್ಯ ಜೈವಿಕ ವಲಯ. ಸಮುದ್ರ ಮಟ್ಟದಿಂದ 2695 ಮೀಟರ್ ಗಳವರೆಗೆ ಚಿಮ್ಮಿ ಹರಡಿರುವ ಈ ಭೂವಲಯದ ಒಟ್ಟು ವಿಸ್ತೀರ್ಣ 1,60,000 ಚ.ಕಿ.ಮೀ ಹೊಂದಿದೆ. ನಮ್ಮ ಕರ್ನಾಟಕದಲ್ಲಿ ಇರುವ ಇಂತಹ ಸುಂದರ ಪ್ರದೇಶವನ್ನ ಒಂದು ಸಾರಿಯಾದ್ರು ನೊಡಲೇ ಬೇಕು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.