Skip to main content
ಅಬ್ಬಾಬ್ಬಾ.. ಭಾರತದಿಂದ ಕಾಲ್ಕಿತ್ತಾ ನಿತ್ಯಾನಂದ ಹೊಸ ದೇಶವನ್ನೇ ಸೃಷ್ಟಿಸಿದ.

ಅಬ್ಬಾಬ್ಬಾ.. ಭಾರತದಿಂದ ಕಾಲ್ಕಿತ್ತಾ ನಿತ್ಯಾನಂದ ಹೊಸ ದೇಶವನ್ನೇ ಸೃಷ್ಟಿಸಿದ.

ಅಬ್ಬಾಬ್ಬಾ.. ಭಾರತದಿಂದ ಕಾಲ್ಕಿತ್ತಾ ನಿತ್ಯಾನಂದ ಹೊಸ ದೇಶವನ್ನೇ ಸೃಷ್ಟಿಸಿದ .

ಭಾರತದಿಂದ ಕಾಲ್ಕಿತ್ತಾ ನಿತ್ಯಾನಂದ

ಹಿಮಾಲಯದ ತುದಿಯಲ್ಲಿದ್ಯಾ ಕೈಲಾಸ..? ಮನಸಾ ಸರೋವರದಲ್ಲಿದ್ಯಾ ಕೈಲಾಸ..? ಆದ್ರಿದನ್ನೂ ಮೀರಿಸೋ ಕೈಲಾಸವೊಂದಿದೆ.. ಅದೇ ನಿತ್ಯಾನಂದನ ಕೈಲಾಸ.. ನಿತ್ಯಾನಂದನ ಕೈಲಾಸ ಇರೋದೆಲ್ಲಿ ಅಂತೀರಾ..? ಅದುವೇ ದಕ್ಷಿಣ ಅಮೆರಿಕದ ಈಕ್ವೆಡೋರ್ ನಲ್ಲಿ.. ಕೈಲಾಸ ಎಂಬುದು ನಿತ್ಯಾನಂದ ಸ್ಥಾಪಿಸಿರುವ ಹೊಸ ದೇಶದ ಹೆಸರು. ಕೈಲಾಸದ ಬಗ್ಗೆ ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ ಜಗತ್ತಿನಲ್ಲಿರುವ ಹಿಂದೂಗಳಿಗಾಗಿ ನಿರ್ಮಿಸಿರುವ ಗಡಿ ರಹಿತ ದೇಶವಾಗಿದೆ.

ತಮ್ಮ ದೇಶದಲ್ಲಿ ಹಿಂದೂ ಸಂಸ್ಕೃತಿಯನ್ನು ಪಾಲನೆ ಮಾಡಲಿರುವ ಹಕ್ಕನ್ನು ಕಳೆದುಕೊಂಡು, ದೇಶದಿಂದ ಉಚ್ಛಾಟಿತರಾಗಿರುವ ಜಗತ್ತಿನ ಎಲ್ಲ ಹಿಂದೂಗಳಿಗಿರುವ ರಾಷ್ಟ್ರವಾಗಿದೆ ಇದು. ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಇತ್ತ ದೇಶ ತೊರೆದಿರುವ ನಿತ್ಯಾನಂದ ಆಗಾಗ ವಿಡಿಯೊದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೈಲಾಸದಲ್ಲಿ ವಾಸವಾಗಿದ್ದಾನೆ. ಕೈಲಾಸ ಎಂಬುದು ನಿತ್ಯಾನಂದ ಸ್ಥಾಪಿಸಿರುವ ಹೊಸ ದೇಶದ ಹೆಸರು. ಕೈಲಾಸದ ಬಗ್ಗೆ ವೆಬ್ಸೈಟ್ನಲ್ಲಿರುವ ಮಾಹಿತಿ ಪ್ರಕಾರ ಜಗತ್ತಿನಲ್ಲಿರುವ ಹಿಂದೂಗಳಿಗಾಗಿ ನಿರ್ಮಿಸಿರುವ ಗಡಿ ರಹಿತ ದೇಶವಾಗಿದೆ.

ಭಾರತದಿಂದ ಕಾಲ್ಕಿತ್ತಾ ನಿತ್ಯಾನಂದ

ತಮ್ಮ ದೇಶದಲ್ಲಿ ಹಿಂದೂ ಸಂಸ್ಕೃತಿಯನ್ನು ಪಾಲನೆ ಮಾಡಲಿರುವ ಹಕ್ಕನ್ನು ಕಳೆದುಕೊಂಡು, ದೇಶದಿಂದ ಉಚ್ಛಾಟಿತರಾಗಿರುವ ಜಗತ್ತಿನ ಎಲ್ಲ ಹಿಂದೂಗಳಿಗಿರುವ ರಾಷ್ಟ್ರವಾಗಿದೆ ಇದು. ಕೆಲವು ವರದಿಗಳ ಪ್ರಕಾರ ನಿತ್ಯಾನಂದ ಈಕ್ವೆಡಾರ್ನಲ್ಲಿ ಹೊಸ ದ್ವೀಪ ಖರೀದಿಸಿದ್ದು, ಅದಕ್ಕೆ ರಾಷ್ಟ್ರೀಯ ಮಾನ್ಯತೆ ನೀಡಲು ಸಂಯುಕ್ತ ರಾಷ್ಟ್ರಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿ ನೋಡಿದರೆ ಕೈಲಾಸ ಎಂಬುದು ನಿಜವಾಗಿಯೂ ದೇಶವೇ ಅಥವಾ ಕಲ್ಪಿತ ಕಥೆಯೋ ಎಂಬುದು ಸ್ಪಷ್ಟವಾಗುವುದಿಲ್ಲ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಂದ ಅವಿತುಕೊಂಡಿರುವ ನಿತ್ಯಾನಂದ ಈಗ ಕೈಲಾಸದಲ್ಲಿ ಜಮ್ ಅಂತ ಹಾಯಾಗಿದ್ದಾನೆ.. ಹೆಸರಿಗೆ ತಕ್ಕ ಕೈಲಾಸ ಇದಾಗಿದ್ದು ಮುದೊಂದು ದಿನ ಕೈಲಾಸ ಅಂದ್ರೆ ಹಲವರಿಗೆ ನಿತ್ಯಾನಂತ ಆಶ್ರಮ ನೆನಪಿಗೆ ಬಂದ್ರೂ ಅಚ್ಚರಿಯಿಲ್ಲ. ಕೈಲಾಸದಲ್ಲಿ ಏನೆಲ್ಲಾ ಇದೇ ಗೊತ್ತಾ? ಅಮೆರಿಕದಲ್ಲಿ ಹಿಂದೂ ಆದಿ ಶಿವನ ಆರಾಧಕರಾದ ಅಲ್ಪ ಸಂಖ್ಯಾತರ ಸಮುದಾಯದ ಸದಸ್ಯರು ಆರಂಭಿಸಿದ ದೇಶವಾಗಿದೆ.

ಅಬ್ಬಾಬ್ಬಾ.. ಭಾರತದಿಂದ ಕಾಲ್ಕಿತ್ತಾ ನಿತ್ಯಾನಂದ ಹೊಸ ದೇಶವನ್ನೇ ಸೃಷ್ಟಿಸಿದ.

ಜಾತಿ, ಧರ್ಮ, ಲಿಂಗ ತಾರತಮ್ಯವಿಲ್ಲದೆ ತಮ್ಮ ಭಕ್ತಿ, ಕಲೆ ಮತ್ತು ಸಂಸ್ಕೃತಿಯನ್ನು ಪಾಲನೆ ಮಾಡಲು ಇರುವ ಜಾಗ ಇದಾಗಿದೆ ಎಂದು ವೆಬ್ಸೈಟ್ನಲ್ಲಿ ವಿವರಣೆ ನೀಡಲಾಗಿದೆ. ಈ ದೇಶಕ್ಕೆ ಪ್ರತ್ಯೇಕ ಧ್ವಜ, ಪಾಸ್ಪೋರ್ಟ್ ಮತ್ತು ಸಚಿವ ಸಂಪುಟವೂ ಇದೆ. ಆರೋಗ್ಯ, ಶಿಕ್ಷಣ, ಊಟ ಉಚಿತವಾಗಿದ್ದು ಈ ದೇಶದ ಭಾಷೆ ಇಂಗ್ಲಿಷ್, ಸಂಸ್ಕೃತ ಮತ್ತು ತಮಿಳು. ಕೈಲಾಸದ ಧ್ವಜದಲ್ಲಿನಿತ್ಯಾನಂದ ಮತ್ತು ಶಿವನ ವಾಹನ ನಂದಿಯ ಚಿತ್ರವಿದ್ದು ರಿಷಭ ಧ್ವಜ ಎಂದು ಇದನ್ನು ಕರೆಯಲಾಗಿದೆ. ಈ ಧ್ವಜದ ಚಿತ್ರವನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಹಾಕಿಸುವ ಮೂಲಕ ಭಕ್ತರು ಕೈಲಾಸಕ್ಕೆ ಬೆಂಬಲ ನೀಡುವಂತೆ ವೆಬ್ಸೈಟ್ನಲ್ಲಿ ಮನವಿ ಮಾಡಲಾಗಿದೆ. ಜೊತೆಗೆ ಭಾರತದಿಂದ ಹೊರಬಿದ್ದವರು ಕೈಲಾಸಕ್ಕೆ ಬರುವಂತೆ ಆಹ್ವಾನವನ್ನೂ ನೀಡಲಾಗಿದೆ. ಶಿಕ್ಷಣ, ಖಜಾನೆ, ವಿತ್ತ ಹೀಗೆ ಹಲವಾರು ಸರ್ಕಾರಿ ಇಲಾಖೆಗಳು ಕೈಲಾಸದಲ್ಲಿವೆ. ಪ್ರಬುದ್ಧ ನಾಗರಿಕತೆಯ ಇಲಾಖೆ ಎಂಬ ಇಲಾಖೆಯೊಂದಿದ್ದು ಇದು ಸನಾತನ ಹಿಂದೂ ಧರ್ಮಕ್ಕೆ ಸಂಬಂಧಪಟ್ಟದ್ದಾಗಿದೆ.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.