Skip to main content
ಪರಿಪೂರ್ಣ ನಾಯಕನನ್ನು ನಾನೆಂದು ಕಂಡಿಲ್ಲ .

ಪರಿಪೂರ್ಣ ನಾಯಕನನ್ನು ನಾನೆಂದು ಕಂಡಿಲ್ಲ :ರವಿಶಾಸ್ತ್ರಿ

ಪರಿಪೂರ್ಣ ನಾಯಕನನ್ನು ನಾನೆಂದೂ ಕಂಡಿಲ್ಲ: ರವಿಶಾಸ್ತ್ರಿ

Ravishastri

ನವದೆಹಲಿ,: ನಾನು ಒಬ್ಬ ಪರಿಪೂರ್ಣ ನಾಯಕನನ್ನು ನೋಡಿಯೇ ಇಲ್ಲ. ನೀವು ವಿಭಿನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಹೊಂದಿರುವ ನಾಯಕರನ್ನು ಹೊಂದಿರುತ್ತೀರಿ. ನಾನು ಇಂದಿನವರೆಗೂ ಯಾವುದೇ ಪರಿಪೂರ್ಣ ನಾಯಕನನ್ನು ನೋಡಿಲ್ಲ ಎಂದು ಭಾರತ ತಂಡದ ಮುಖ್ಯ ಕೋಚ್ ಹೇಳಿದ್ದಾರೆ. ಸುದ್ದಿಸಂಸ್ಥೆೆಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘‘ಒಬ್ಬರು ಒಂದರಲ್ಲಿ ಹೆಚ್ಚಿನ ಶಕ್ತಿ ಹೊಂದಿರಬಹುದು ಹಾಗೂ ಬೇರೊಬ್ಬರು ಮತ್ತೊಂದು ಸಂಗತಿಯಲ್ಲಿ ಕೊರತೆ ಎದುರಿಸುತ್ತಿರುತ್ತಾರೆ. ಆದ್ದರಿಂದ, ಅವರ ಸಾಮರ್ಥ್ಯವನ್ನು ಅರಿಯಬೇಕಾದರೆ, ಪಂದ್ಯದ ಅಂತಿಮ ಫಲಿತಾಂಶದವರೆಗೂ ಕಾದು ನೋಡಬೇಕು,’’ ಎಂದರು.

‘‘ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿನದಿಂದ ದಿನಕ್ಕೆೆ ಸುಧಾರಣೆ ಕಂಡುಕೊಳ್ಳುತ್ತಿರುವ ವ್ಯಕ್ತಿ ಎಂದು ಹೇಳಬಹುದು. ಅವರು ಮೈದಾನದಕ್ಕೆೆ ತರುವ ಉತ್ಸಾಹ, ಶಕ್ತಿ, ಚಾಲನೆಗೆ ಯಾರೂ ಸರಿಸಾಟಿಯಿಲ್ಲ. ವಿರಾಟ್ ರೀತಿ ಬೇರೆ ತಂಡದ ನಾಯಕ ಮೈದಾನಕ್ಕೆೆ ಈ ರೀತಿಯ ಶಕ್ತಿಯನ್ನು ತರುವುದನ್ನೂ ನಾನೆಂದೂ ನೋಡಿಯೇ ಇಲ್ಲ,’’ ಎಂದು ತಿಳಿಸಿದರು. ‘‘ಕಾರ್ಯತಂತ್ರದೊಂದಿಗೆ ನಿರ್ವಹಣೆ ಹಾಗೂ ಮಾನ್ಯತೆಯೊಂದಿಗೆ ತಮ್ಮ ಸಾಮಾರ್ಥ್ಯವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಬಹುದು.

ತಂಡದಲ್ಲಿ ಯಾರು ನಾಯಕರಾಗುತ್ತಾರೋ ಅವರು ಕಲಿಕೆಗೆ ಒಳಪಡುತ್ತಾರೆ. ಮೊದಲನೇ ದಿನದಿಂದಲೂ ಯಾವುದೇ ಕಲೆಕೆಗೆ ಒಳಗಾಗದ ನಾಯಕನ ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಲೆಕೆಗೆ ಒಳಗಾಗುತ್ತಿರುತ್ತಾರೆ. ಸನ್ನಿವೇಶಗಳಿಂದ ನಾಯಕನಾದವನು ಸಾಕಷ್ಟು ಕಲಿಕೆಗೆ ಒಳಪಡುತ್ತಾನೆ. ಇದರಿಂದ ಅವರು ಕಲೆಯುವ ಪಾಠ ಮುಂದೆ ಗಮನಾರ್ಹ ಸಾಧನೆಗೆ ಎಡೆ ಮಾಡಿಕೊಡುತ್ತದೆ,’’ ಎಂದು ರವಿಶಾಸ್ತ್ರಿ ಹೇಳಿದರು.

Add new comment

Plain text

  • No HTML tags allowed.
  • Lines and paragraphs break automatically.
  • Web page addresses and email addresses turn into links automatically.